ಸ್ಟಾರ್ ನಟರು ಐಶಾರಾಮೀ ಕಾರು ಖರೀದಿಗೆ ಸುದ್ದಿಯಾದ್ರೆ, ಜೂ.ಎನ್ಟಿಆರ್ ಕಾರು ನಂಬರ್ ನಿಂದ ಸುದ್ದಿಯಾಗಿದ್ದಾರೆ

Written by Soma Shekar

Published on:

---Join Our Channel---

ತೆಲುಗು ಚಿತ್ರರಂಗದ ಸ್ಟಾರ್ ನಟರಲ್ಲಿ ಜೂ.ಎನ್ ಟಿ ಆರ್ ತನ್ನದೇ ಆದ ತಾರಾ ವರ್ಚಸ್ಸನ್ನು ಪಡೆದುಕೊಂಡಿದ್ದಾರೆ. ನಂದಮೂರಿ ವಂಶದ ಕುಡಿ ಎನ್ನುವ ಹೆಗ್ಗಳಿಕೆಯನ್ನು ಕೂಡಾ ಪಡೆದಿರುವ ಅವರ ಅಭಿಮಾನಿಗಳ ಸಂಖ್ಯೆ ಬಗ್ಗೆ ಅಂತು ಹೇಳೋ ಹಾಗೇ ಇಲ್ಲ. ಇನ್ನು ಸೆಲೆಬ್ರಿಟಿಗಳಿಗೆ ಇತ್ತೀಚಿನ ದಿನಗಳಲ್ಲಿ ಕಾರುಗಳನ್ನು ಕೊಳ್ಳುವುದು ಹಾಗೂ ಐಶಾರಾಮೀ ಕಾರುಗಳನ್ನು ತಮ್ಮ ಸಂಗ್ರಹದಲ್ಲಿ ಇರಿಸಿಕೊಳ್ಳುವುದು ಒಂದು ಹವ್ಯಾಸ ಕೂಡಾ ಆಗಿದೆ. ಒಬ್ಬರ ನಂತರ ಮತ್ತೊಬ್ಬರು ಕೋಟಿ ಕೋಟಿ ಬೆಲೆ ಕೊಟ್ಟು ಹೊಸ ಹೊಸ ಕಾರುಗಳನ್ನು ಖರೀದಿ ಮಾಡಿ ಸಖತ್ ಸುದ್ದಿಯಾಗುತ್ತಿದ್ದಾರೆ.

ಜೂ. ಎನ್ ಟಿ ಆರ್ ಅವರು ಕೆಲವೇ ದಿನಗಳ ಹಿಂದೆ ಒಂದು ದುಬಾರಿ ಬೆಲೆಯ ಲ್ಯಾಂಬೊರ್ಗಿನಿ ಕಾರನ್ನು ಖರೀದಿ ಮಾಡಿದ್ದಾರೆ. ಈ ಲ್ಯಾಂಬೊರ್ಗಿನಿ ಉರುಸ್ ಕಾರಿಗೆ ಎನ್ ಟಿ ಆರ್ ಸುಮಾರು ನಾಲ್ಕು ಕೋಟಿಗಿಂತಲೂ ಅಧಿಕ ಹಣವನ್ನು ನೀಡಿ ಖರೀದಿ ಮಾಡಿದ್ದಾರೆ. ಅಷ್ಟಕ್ಕೇ ವಿಷಯ ಮುಗಿದಿಲ್ಲ. ಕಾರು ಕೊಂಡ ಮೇಲೆ ಅದಕ್ಕೊಂದು ಫ್ಯಾನ್ಸಿ ನಂಬರ್ ಕೂಡಾ ಬೇಕಲ್ಲವೇ?? ಹೌದು ನಟ ಜೂ.ಎನ್ ಟಿ ಆರ್ ಅವರು ತಮ್ಮ ಹೊಸ ಕಾರಿಗೆ ಹೊಸ ನಂಬರ್ ಗಾಗಿ ಈಗ ಸುದ್ದಿಯಾಗಿದ್ದಾರೆ.

ಕಾರಿಗೆ ಕೋಟಿ ಕೋಟಿ ಖರ್ಚು ಮಾಡಿದ ನಟ, ಇದೀಗ ಕಾರಿನ ನಂಬರ್ ಗಾಗಿ ಸಹಾ ಲಕ್ಷ ಲಕ್ಷ ರೂ.ಗಳನ್ನು ಖರ್ಚು ಮಾಡಿದ್ದಾರೆ. ಹೌದು ಫ್ಯಾನ್ಸಿ ನಂಬರ್ ಗಾಗಿ ನಟ ಜೂ.ಎನ್ ಟಿ ಆರ್ ಅವರು ಲಕ್ಷ ಲಕ್ಷ ಖರ್ಚು ಮಾಡಿ 9999 ಎನ್ನುವ ಸಂಖ್ಯೆಯನ್ನು ತಮ್ಮ ಕಾರಿಗಾಗಿ ವಿಶೇಷವಾಗಿ ಪಡೆದುಕೊಂಡಿದ್ದಾರೆ. ಜೂ. ಎನ್ ಟಿ ಆರ್ ಪಡೆದಿರುವ ಈ ವಿಶೇಷ ನಂಬರ್ ಈಗ ಎಲ್ಲರ ಗಮನವನ್ನು ಸೆಳೆದಿದೆ ಹಾಗೂ ಅಭಿಮಾನಿಗಳು ಅವರನ್ನು ಅಭಿನಂದಿಸಿದ್ದಾರೆ.

ಜೂ. ಎನ್ ಟಿ ಆರ್ ಅವರು ಈ ಫ್ಯಾನ್ಸಿ ನಂಬರ್ ಗಾಗಿ ಖರ್ಚು ಮಾಡಿದ ಹಣವಾದರೂ ಎಷ್ಟು ? ಎನ್ನುವ ಪ್ರಶ್ನೆ ಈಗಾಗಲೇ ನಿಮ್ಮ ಮನಸ್ಸಿನಲ್ಲಿ ಮೂಡಿರಬೇಕಲ್ಲವೇ? ಇನ್ಯಾಕೆ ತಡ, ಅದಕ್ಕೂ ಉತ್ತರವನ್ನು ನೀಡುತ್ತೇವೆ ನೋಡಿ. ಜೂ. ಎನ್ ಟಿ ಆರ್ ಅವರು ತಮ್ಮ ಈ ದುಬಾರಿ ಐಶಾರಾಮೀ ಕಾರಿನ ನಂಬರ್ ಗಾಗಿ ಬರೋಬ್ಬರಿ ಹದಿನೇಳು ಲಕ್ಷ ರೂ. ಗಳನ್ನು ಖರ್ಚು ಮಾಡಿದ್ದಾರೆ.

ಜೂ.ಎನ್‌ ಟಿ ಆರ್ ಅವರ ಲ್ಯಾಂಬೊರ್ಗಿನಿ ಉರುಸ್ ಕಾರಿನ ನಂಬರ್ ಈಗ ಟಿಎಸ್ 09 ಎಫ್‌ಎಸ್ 9999 ಎಂಬುದಾಗಿದೆ. ಸಂಖ್ಯೆ 9 ಎನ್ನುವುದು ಜೂ. ಎನ್‌ ಟಿ ಆರ್‌ ಅವರಿಗೆ ಅದೃಷ್ಟದ ಸಂಖ್ಯೆಯಾಗಿದ್ದು, ನಂಬರ್ ಪ್ಲೇಟ್‌ನಲ್ಲಿ ಕೇವಲ 9 ಸಂಖ್ಯೆಗಳು ಮಾತ್ರವೇ ಇರುವಂತೆ ಎಚ್ಚರ ವಹಿಸಿ, ಅದಕ್ಕಾಗಿಯೇ ಅವರು ಭಾರೀ ಮೊತ್ತ ಪಾವತಿಸಿ ಈ ನಂಬರ್ ತಮ್ಮದಾಗಿಸಿಕೊಂಡಿದ್ದಾರೆ.

Leave a Comment