ಸ್ಟಾರ್ ನಟನ ಸಿನಿಮಾದಲ್ಲಿ ಹಾಲಿವುಡ್ ಪಾಪ್ ಗಾಯಕಿ ಬ್ರಿಟ್ನಿ ಸ್ಪಿಯರ್ಸ್: ಯಾವ ಸಿನಿಮಾ??

Written by Soma Shekar

Published on:

---Join Our Channel---

ಭಾರತೀಯ ಸಿನಿಮಾಗಳಲ್ಲಿ ಅಪರೂಪಕ್ಕೊಮ್ಮೆ ಹಾಲಿವುಡ್ ನಟರು ನಟಿಸಿದರೆ ಅದು ದೊಡ್ಡ ಸುದ್ದಿಯಾಗುತ್ತದೆ. ಇನ್ನು ನಮ್ಮ ಭಾರತೀಯ ನಟರು ಸಹಾ ಹಾಲಿವುಡ್ ಸಿನಿಮಾಗಳಲ್ಲಿ ನಟಿಸುವ ಮೂಲಕ ಎಲ್ಲರ ಗಮನವನ್ನು ಸೆಳೆಯುತ್ತಿದ್ದಾರೆ. ಆದರೆ ಈಗ ಫಾರ್ ಎ ಚೇಂಜ್ ಎನ್ನುವಂತೆ ಹಾಲಿವುಡ್ ನ ಪಾಪ್ ಸಿಂಗರ್ ಒಬ್ಬರು ಭಾರತೀಯ ಸಿನಿಮಾವೊಂದರ ಹಾಡನ್ನು ಹಾಡಲು ಸಜ್ಜಾಗುತ್ತಿದ್ದಾರೆ ಎನ್ನುವ ಸುದ್ದಿಯೊಂದು ಗಮನ ಸೆಳೆದಿದೆ. ಹೌದು ಪಾಪ್ ಗಾಯಕಿ ಬ್ರಿಟ್ನಿ ಸ್ಪಿಯರ್ಸ್ ಭಾರತೀಯ ಸಿನಿಮಾ ಒಂದರಲ್ಲಿ ಹಾಡಿಗೆ ದನಿಯಾಗಲಿದ್ದಾರೆ.

ಹಾಗಾದರೆ ಈ ಹಾಲಿವುಡ್ ಪಾಪ್ ಗಾಯಕಿ ಯಾವ ಸಿನಿಮಾಕ್ಕಾಗಿ ಹಾಡನ್ನು ಹಾಡುತ್ತಿದ್ದಾರೆ ಎನ್ನುವುದನ್ನು ತಿಳಿಯುವ ಆಸಕ್ತಿ ನಿಮಗೆ ಮೂಡಿದ್ದರೆ ಅದಕ್ಕೆ ಉತ್ತರವೂ ಇಲ್ಲೇ ಇದೆ. ತೆಲುಗು ಚಿತ್ರರಂಗದಲ್ಲಿ ಮೆಗಾಸ್ಟಾರ್ ಎನ್ನುವ ಖ್ಯಾತಿಯನ್ನು ಪಡೆದಿರುವ ನಟ ಚಿರಂಜೀವಿ ಅವರ ನಟನೆಯ ಹೊಸ ಸಿನಿಮಾದಲ್ಲಿ ಹಾಡೊಂದನ್ನು ಬ್ರಿಟ್ನಿ ಸ್ಪಿಯರ್ಸ್ ಹಾಡಲಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಸದ್ದು ಮಾಡಿದೆ. ಪಾಪ್ ಹಾಡುಗಳನ್ನು ಇಷ್ಟ ಪಡುವ ಮಂದಿ ಬ್ರಿಟ್ನಿ ಸ್ಪಿಯರ್ಸ್ ಹೆಸರನ್ನು ಕೇಳಿ ಈಗಾಗಲೇ ತುಂಬಾ ಥ್ರಿಲ್ ಆಗಿದ್ದಾರೆ.

ಹೌದು, ಮೆಗಾಸ್ಟಾರ್ ಚಿರಂಜೀವಿ ಅವರು ಮಲೆಯಾಳಂ ನ‌ ಸೂಪರ್ ಹಿಟ್ ಸಿನಿಮಾ ಲೂಸಿಫರ್ ನ ತೆಲುಗು ರಿಮೇಕ್ ಗಾಡ್ ಫಾದರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಒಂದು ವಿಶೇಷವಾದ ಹಾಡನ್ನು ಪಾಪ್ ಸಿಂಗರ್ ಬ್ರಿಟ್ನಿ ಸ್ಪಿಯರ್ಸ್ ಹಾಡಲಿದ್ದಾರೆ. ಹಾಡು ಹಾಡುವ ಸುದ್ದಿಯೇನೋ ಈಗ ಗಮನ ಸೆಳೆದಿದೆ. ಆದರೆ ಬ್ರಿಟ್ನಿ ಹಾಡನ್ನು ಯಾವ ಭಾಷೆಯಲ್ಲಿ ಅಂದರೆ ಇಂಗ್ಲೀಷ್ ಅಥವಾ ತೆಲುಗಿನಲ್ಲಿ ಹಾಡಲಿದ್ದಾರೋ ಎನ್ನುವುದು ಮಾತ್ರ ಇನ್ನೂ ತಿಳಿದು ಬಂದಿಲ್ಲ. ಆದರೆ ಪಾಪ್ ಗಾಯನ ಪ್ರಿಯರಿಗೆ ಈ ಸುದ್ದಿ ಖುಷಿ ನೀಡಿದೆ.

ಬ್ರಿಟ್ನಿ ಸ್ಪಿಯರ್ಸ್ ಹಾಲಿವುಡ್ ನಲ್ಲಿ ತನ್ನ ಹಾಡುಗಳ ಮೂಲಕ ಮೋಡಿ ಮಾಡಿರುವ ಜನಪ್ರಿಯ ಪಾಪ್ ಸಿಂಗರ್ ಆಗಿದ್ದಾರೆ. ಕೆಲವೇ ದಿನಗಳ ಹಿಂದೆ ತಂದೆಯ ಮೇಲ್ವಿಚಾರಣೆಯಿಂದ ಕಾನೂನಾತ್ಮಕವಾಗಿ ಬಿಡುಗಡೆ ಪಡೆಯುವ ಮೂಲಕ ದೊಡ್ಡ ಸುದ್ದಿಯಾಗಿದ್ದರು ಕೂಡಾ. ಬ್ರಿಟ್ನಿ ಮಾ ದ ಕ ವಸ್ತು ಸೇವನೆಯ ವಿಚಾರದಲ್ಲಿ ಸಿಕ್ಕಿ ಬಿದ್ದ ಮೇಲೆ ಆಕೆಯನ್ನು ತಂದೆ ಮೇಲ್ವಿಚಾರಣೆಯಲ್ಲಿ ಇಡಲಾಗಿತ್ತು. ಬ್ರಿಟ್ನಿ ಗೆ ಹಣ ಖರ್ಚು ಮಾಡುವ ಅಧಿಕಾರ ಕೂಡಾ ಇರಲಿಲ್ಲ. ಆದರೆ ಕಾನೂನು ಹೋರಾಟ ಮಾಡಿ ಕೆಲವೇ ದಿನಗಳ ಹಿಂದೆ ಬ್ರಿಟ್ನಿ ತನ್ನ ಜೀವನದ ನಿರ್ಧಾರಗಳನ್ನು ತಾನೇ ಮಾಡುವ ಹಕ್ಕನ್ನು ಪಡೆದುಕೊಂಡಿದ್ದಾರೆ.

Leave a Comment