ಬಾಲಿವುಡ್ ಸೆಲೆಬ್ರಿಟಿಗಳ ಜೀವನ ಬಹಳ ಬಿಂದಾಸ್ ಹಾಗೂ ಅವರ ಅಫೇರ್ ಗಳ ವಿಚಾರಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಇನ್ನು ಬಾಲಿವುಡ್ ನ ಸೆಲೆಬ್ರಿಟಿಗಳ ಮಕ್ಕಳು ಸಹಾ ಇಂತಹ ವಿಚಾರಗಳಲ್ಲಿ ಹಿಂದೆ ಇಲ್ಲ. ಒಂದು ವಯಸ್ಸನ್ನು ತಲುಪಿದ ಮೇಲೆ ಅವರು ಸಹಾ ಡೇಟಿಂಗ್, ಅಫೇರ್ ಎಂದೆಲ್ಲಾ ಓಡಾಡುವುದು, ಕ್ಯಾಮರಾ ಕಣ್ಣಿಗೆ ಸೆರೆಯಾಗುವುದು ಇದೆಲ್ಲಾ ನಡೆಯುತ್ತಲೇ ಇರುತ್ತದೆ. ಪ್ರಸ್ತುತ ಅಂತಹುದೇ ಒಂದು ವೀಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿ ಎಲ್ಲರ ಗಮನ ಸೆಳೆದಿದೆ.
ಬಾಲಿವುಡ್ ನ ಸ್ಟಾರ್ ನಟ ಸೈಫ್ ಖಾನ್ ಅವರಿಗೆ ತಮ್ಮ ಮೊದಲ ಪತ್ನಿ, ನಟಿ ಅಮೃತಾ ಸಿಂಗ್ ಅವರಿಂದ ಇಬ್ಬರು ಮಕ್ಕಳಿದ್ದಾರೆ. ಅವರಲ್ಲಿ ಮಗಳು ಸಾರಾ ಆಲಿ ಖಾನ್ ಈಗಾಗಲೇ ಬಾಲಿವುಡ್ ನಲ್ಲಿ ಮಿಂಚುತ್ತಿರುವ ಸ್ಟಾರ್ ನಟಿಯಾಗಿದ್ದಾರೆ. ಮಗ ಇಬ್ರಾಹಿಂ ಆಲಿ ಖಾನ್ ಮಾತ್ರ ಇನ್ನೂ ಸಿನಿ ರಂಗಕ್ಕೆ ಕಾಲಿಟ್ಟಿಲ್ಲ. ಅಲ್ಲದೇ ಆ ಬಗ್ಗೆ ಇದುವರೆಗೂ ಏನೂ ಹೇಳಿಲ್ಲ. ಆದರೆ ಈಗ ಇಬ್ರಾಹಿಂ ನಟಿಯೊಬ್ಬರ ಮಗಳ ಜೊತೆಗೆ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ.
ಹೌದು ಮುಂಬೈ ನ ಬಾಂದ್ರಾ ಪ್ರದೇಶದಲ್ಲಿನ ರೆಸ್ಟೋರೆಂಟ್ ಒಂದರಿಂದ ಸೈಫ್ ಪುತ್ರ ಇಬ್ರಾಹಿಂ ಯುವತಿಯೊಬ್ಬಳ ಜೊತೆಗೆ ಹೊರ ಬಂದಾಗ ಕ್ಯಾಮೆರಾ ಕಣ್ಣುಗಳಿಗೆ ಸೆರೆಯಾಗಿದ್ದಾರೆ. ಇಬ್ರಾಹಿಂ ಜೊತೆ ಕಾಣಿಸಿಕೊಂಡ ಆ ಯುವತಿ ಕೂಡಾ ಸಾಮಾನ್ಯಳಲ್ಲ, ಏಕೆಂದರೆ ಆಕೆಯ ತಾಯಿ ಬಾಲಿವುಡ್ ಸಿನಿಮಾ ಹಾಗೂ ಕಿರುತೆರೆಯ ಜನಪ್ರಿಯ ನಟಿ, ಹಾಗೂ ಬಿಗ್ ಬಾಸ್ ನ ಮಾಜಿ ವಿನ್ನರ್ ಕೂಡಾ ಹೌದು.
ಬಹುಭಾಷಾ ನಟಿಯೂ ಆಗಿರುವ ಶ್ವೇತಾ ತಿವಾರಿ ಅವರ ಮಗಳು ಪಲಕ್ ತಿವಾರಿ ಇಬ್ರಾಹಿಂ ನ ಜೊತೆಗೆ ಕಾಣಿಸಿಕೊಂಡಿದ್ದಾರೆ. ಇಬ್ರಾಹಿಂ ನ ಜೊತೆಗೆ ರೆಸ್ಟೋರೆಂಟ್ ನಿಂದ ಹೊರ ಬಂದು ಕಾರಿನಲ್ಲಿ ಕೂತಿದ್ದ ಪಲಕ್ ಕ್ಯಾಮೆರಾಗಳನ್ನು ನೋಡಿದ ಕೂಡಲೇ ತನ್ನ ಮುಖವನ್ನು ಮುಚ್ಚಿಕೊಂಡಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಎಲ್ಲರ ಕುತೂಹಲವನ್ನು ಕೆರಳಿಸಿದೆ.
ಪಲಕ್ ಹಾಗೂ ಇಬ್ರಾಹಿಂ ಕುರಿತಾಗಿ ಹರಡಿದ್ದ ಗಾಸಿಪ್ ಗಳಿಗೆ ಈಗ ಇನ್ನಷ್ಟು ಪುಷ್ಟಿ ದೊರೆತ ಹಾಗೆ ಆಗಿದೆ. ಅಲ್ಲದೇ ಈ ವೀಡಿಯೋ ವೈರಲ್ ಆದ ಮೇಲೆ ನೆಟ್ಟಿಗರು ಕ್ಯಾಮೆರಾ ನೋಡಿ ಮುಖ ಮುಚ್ಕೊಳ್ಳೋದು ಯಾಕೆ, ಸಾಕು ಓವರ್ ಆ್ಯಕ್ಟಿಂಗ್ ನಿಲ್ಲಿಸಿ ಎಂದೆಲ್ಲಾ ಕಾಮೆಂಟ್ ಗಳನ್ನು ಮಾಡುವ ಮೂಲಕ ವ್ಯಂಗ್ಯವಾಡಿದ್ದಾರೆ. ಪಲಕ್ ಹಾಗೂ ಇಬ್ರಾಹಿಂ ನ ಈ ಸ್ನೇಹದ ಸುದ್ದಿ ಈಗ ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡುತ್ತಿದೆ.