ರಶ್ಮಿಕಾ ಮಂದಣ್ಣ ಸಾಲು ಸಾಲು ಹಿಟ್ ಸಿನಿಮಾಗಳ ಮೂಲಕ ಸದ್ದು ಮಾಡುತ್ತಾ, ಬಾಲಿವುಡ್ ಗೆ ಹಾರಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ದಕ್ಷಿಣದ ಯಾವುದೇ ಹೊಸ ಸಿನಿಮಾಗಳಲ್ಲಿ ಅಷ್ಟಾಗಿ ಕಾಣಿಸಿಕೊಂಡಿಲ್ಲ. ಅಲ್ಲದೇ ರಶ್ಮಿಕಾ ನಿರ್ಧಾರ ಸರಿಯಲ್ಲ ಎನ್ನುವ ಮಾತುಗಳು ಕೇಳಿ ಬರುವಾಗಲೇ ಇದೀಗ ಹೊಸ ಸುದ್ದಿಯೊಂದು ಹೊರ ಬಂದಿದೆ. ನಟಿ ರಶ್ಮಿಕಾ ಟಾಲಿವುಡ್ ನ ಸ್ಟಾರ್ ನಟ ಜೂನಿಯರ್ ಎನ್ ಟಿ ಆರ್ ಅವರ ಹೊಸ ಸಿನಿಮಾ ಎನ್ ಟಿ ಆರ್ 30 ಗೆ ನಾಯಕಿಯಾಗಿ ಫಿಕ್ಸ್ ಆಗಿರುವುದು ಬಹುತೇಕ ಖಚಿತ ಎನ್ನಲಾಗಿದೆ. ಪುಷ್ಪ ಸಿನಿಮಾದ ನಂತರ ನ್ಯಾಷನಲ್ ಕ್ರಶ್ ಆಗಿರುವ ರಶ್ಮಿಕಾ ಗೆ ಬೇಡಿಕೆ ಸಹಜವಾಗಿಯೇ ಹೆಚ್ಚಿದೆಯಾದರೂ ನಟಿಯ ಗಮನ ಸದ್ಯಕ್ಕೆ ಬಾಲಿವುಡ್ ಕಡೆಗೆ ಇದೆ ಎನ್ನುವುದು ನಿಜ.
ಪುಷ್ಪ ಸಿನಿಮಾದ ನ್ಯಾಷನಲ್ ಕ್ರಶ್ ಆಗಿರುವ ರಶ್ಮಿಕಾ ಮಂದಣ್ಣಗೆ ಸಾಲು ಸಾಲು ಸಿನಿಮಾಗಳ ಆಫರ್ ಗಳು ಹರಿದು ಬರುತ್ತಿವೆ. ತೆಲುಗು, ತಮಿಳು ಮತ್ತು ಹಿಂದಿ ಸಿನಿಮಾಗಳಿಂದ ನಟಿಗೆ ಸಾಕಷ್ಟು ಅವಕಾಶಗಳು ಹರಿದು ಬರುತ್ತಿದೆ. ಸಿನಿಮಾಗಳ ಜೊತೆಗೆ ರಶ್ಮಿಕಾ ಸೋಶಿಯಲ್ ಮೀಡಿಯಾದಲ್ಲಿ ಸಹಾ ಸಕ್ರಿಯವಾಗಿದ್ದು, ದಕ್ಷಿಣದಲ್ಲಿ ಸ್ಟಾರ್ ನಟ, ನಟಿಯರನ್ನು ಹಿಂದೆ ಹಾಕಿ ಇನ್ಸ್ಟಾಗ್ರಾಂ ನಲ್ಲಿ ಹೆಚ್ಚು ಫಾಲೋಯರ್ಸ್ ಗಳನ್ನು ಪಡೆದಿರುವ ಸೆಲೆಬ್ರಿಟಿಯಾಗಿ ಹೊರ ಹೊಮ್ಮಿದ್ದಾರೆ ರಶ್ಮಿಕಾ ಮಂದಣ್ಣ. ಈಗ ರಶ್ಮಿಕಾ ಒಂದು ಹೊಸ ವಿಷಯವಾಗಿ ಮತ್ತೊಮ್ಮೆ ಟಾಲಿವುಡ್ ನಲ್ಲಿ ಸದ್ದು ಮಾಡುತ್ತಿದ್ದಾರೆ.
ಹೌದು, ಈ ಬಾರಿ ರಶ್ಮಿಕಾ ತಮ್ಮ ಸಂಭಾವನೆಯ ವಿಚಾರವಾಗಿ ಸದ್ದು ಮಾಡುತ್ತಿದ್ದಾರೆ. ಪುಷ್ಪ ಸಿನಿಮಾದಿಂದ ದಕ್ಕಿರುವ ಜನಪ್ರಿಯತೆಯನ್ನು ಭರ್ಜರಿಯಾಗಿ ಬಳಸಿಕೊಳ್ಳುವ ಕಡೆಗೆ ರಶ್ಮಿಕಾ ಗಮನ ನೀಡಿದ್ದಾರೆ. ಇನ್ನು ಇತ್ತೀಚಿಗಷ್ಟೇ ನಟ ಜೂನಿಯರ್ ಎನ್ ಟಿ ಆರ್ ಅವರ ಹೊಸ ಸಿನಿಮಾ ಘೋಷಣೆ ಆಗಿದ್ದು, ಈ ಸಿನಿಮಾದಲ್ಲಿ ನಟಿಸಲು ಭಾರೀ ಸಂಭಾವನೆಯ ಬೇಡಿಕೆಯನ್ನು ಇಟ್ಟ ಕಾರಣದಿಂದಾಗಿ ನಟಿ ಸಮಂತಾ ಅವರನ್ನು ನಾಯಕಿಯ ಪಾತ್ರದಿಂದ ಕೈ ಬಿಡಲಾಗಿದೆ ಎನ್ನುವ ಸುದ್ದಿಯಾದ ಬೆನ್ನಲ್ಲೇ ಈಗ ಇದೇ ಸಿನಿಮಾಕ್ಕೆ ನಟಿ ರಶ್ಮಿಕಾ ನಾಯಕಿಯಾಗಲಿದ್ದಾರೆನ್ನುವ ಸುದ್ದಿಗಳು ಹರಿದಾಡಿವೆ.
ಆದರೆ ಇದೇ ವೇಳೆ ಎನ್ ಟಿ ಆರ್ ಸಿನಿಮಾದಲ್ಲಿ ನಟಸಿಲು ರಶ್ಮಿಕಾ ಮಂದಣ್ಣ ದೊಡ್ಡ ಮೊತ್ತದ ಸಂಭಾವನೆಯ ಬೇಡಿಕೆಯನ್ನು ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಹೌದು, ನಟಿ ರಶ್ಮಿಕಾ ಈ ಸಿನಿಮಾದಲ್ಲಿ ನಟಿಸಲು ಬರೋಬ್ಬರಿ ಐದು ಕೋಟಿ ಸಂಭಾವನೆ ಬೇಡಿಕೆ ಇಟ್ಟಿದ್ದಾರೆ ಎನ್ನುವುದು ಸುದ್ದಿ. ಈ ಹಿಂದೆ ಸಮಂತಾ ಕೂಡಾ ಇದೇ ಮೊತ್ತದ ಸಂಭಾವನೆ ಬೇಡಿಕೆ ಇಟ್ಟಿದ್ದರು ಎನ್ನುವುದು ಸುದ್ದಿಯಾಗಿತ್ತು. ಈಗ ರಶ್ಮಿಕಾಗೆ ನಿರ್ದೇಶಕ ಕೊರಟಾಲ ಶಿವ ಈ ಮೊತ್ತದ ಸಂಭಾವನೆ ನೀಡಲು ಒಪ್ಪಿದ್ದಾರೆ ಎನ್ನುವ ಸುದ್ದಿಗಳು ಕೂಡಾ ಇವೆ. ಮತ್ತೊಂದು ಕಡೆ ಈ ಸಿನಿಮಾದಲ್ಲಿ ಸೀತಾ ರಾಮಂ ಖ್ಯಾತಿಯ ನಟಿ ಮೃಣಾಲ್ ಠಾಕೂರ್ ಹೆಸರು ಸಹಾ ಕೇಳಿ ಬಂದಿದೆ ಎನ್ನುವುದು ಸಹಾ ನಿಜ.