ಹೊಸ ಹಾಡು ಹಾಡಿದ ಸೆನ್ಸೇಷನ್ ಗಾಯಕಿ ರಾನು ಮಂಡಾಲ್: ಗರಂ ಆದ ನೆಟ್ಟಿಗರಿಂದ ಹಿಗ್ಗಾ ಮುಗ್ಗಾ ಕ್ಲಾಸ್

Written by Soma Shekar

Updated on:

---Join Our Channel---

ಶ್ರೀಲಂಕಾದ ಗಾಯಕಿ ಯೊಹಾನಿ ಇತ್ತೀಚಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಹೊಸ ಟ್ರೆಂಡ್ ಒಂದನ್ನು ಸೃಷ್ಟಿ ಮಾಡಿದೆ. ಯೊಹಾನಿ ಹಾಡಿರುವ ಮನಿಕೆ ಮಗೇ ಹಿತೇ ಹಾಡು ಭರ್ಜರಿ ವೈರಲ್ ಆಗಿದೆ, ಭಾಷೆ ಜನರಿಗೆ ಅರ್ಥವಾಗದೇ ಇದ್ದರೂ ಭಾವನೆಗಳು ಹಾಗೂ ಆ ಹಾಡಿದ ಮಾಧುರ್ಯ ಜನರ ಮನಸ್ಸನ್ನು ಗೆದ್ದಿದೆ. ಹಾಡನ್ನು ಲಕ್ಷಾಂತರ ಜನರು ಮತ್ತೆ ಮತ್ತೆ ನೋಡಿ ಆನಂದಿಸಿದ್ದಾರೆ. ಅಲ್ಲದೇ ಯೊಹಾನಿ ಇತ್ತೀಚಿಗೆ ಹಿಂದಿ ಬಿಗ್ ಬಾಸ್ ಮತ್ತು ಬಿಗ್ ಪಿಕ್ಚರ್ ನಲ್ಲಿ ಕೂಡಾ ಅತಿಥಿಯಾಗಿ ಆಗಮಿಸಿ ಜನರನ್ನು ರಂಜಿಸಿದ್ದರು. ಈಗ ಯೊಹಾನಿ ಹಾಡಿರುವ ಹಾಡನ್ನು ಮತ್ತೊಬ್ಬ ಗಾಯಕಿ ಹಾಡಿ, ಸಿಕ್ಕಾಪಟ್ಟೆ ಟ್ರೋಲ್ ಆಗಿದೆ.

ಹೌದು, ಸೋಶಿಯಲ್ ಮೀಡಿಯಾಗಳಲ್ಲಿ ಈ ಹಿಂದೆ ಸಂಚಲನ ಸೃಷ್ಟಿಸಿದ್ದ ರಾನು ಮಂಡಾಲ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ?? ದೇಶದ ಸುಪ್ರಸಿದ್ಧ ಹಾಗೂ ದಿಗ್ಗಜ ಗಾಯಕಿ ಲತಾ ಮಂಗೇಶ್ಕರ್ ಅವರ ಧ್ವನಿಯಲ್ಲಿ ಹಾಡುವ, ರೈಲ್ವೆ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ಗಾಯಕಿ ವೀಡಿಯೋ ರಾತ್ರಿ ಕಳೆದು ಹಗಲಾಗುವ ವೇಳೆಗೆ ವೈರಲ್ ಆಗಿ ಎಲ್ಲೆಲ್ಲೂ ಸಂಚಲನ ಹುಟ್ಟು ಹಾಕಿತ್ತು. ಅಲ್ಲದೇ ಆ ಹಾಡು ಹಾಡಿದ್ದ ಗಾಯಕಿ ರಾನು ದೇಶದಾದ್ಯಂತ ಜನಪ್ರಿಯತೆ ಪಡೆದುಕೊಂಡರು. ಹಿಮೇಶ್ ರೇಷಮಿಯಾ ತಮ್ಮ ಸಿನಿಮಾದಲ್ಲಿ ಹಾಡನ್ನು ಹಾಡಿಸಿದರು.

ಆದರೆ ರಾನು ಗೆ ಇದ್ದಕ್ಕಿದ್ದಂತೆ ಒಲಿದ ಈ ಜನಪ್ರಿಯತೆ ಹೆಚ್ಚು ದಿನ ಉಳಿಯಲಿಲ್ಲ. ರಾನು ಎಷ್ಟು ಬೇಗ ಮಾದ್ಯಮಗಳ ಸುದ್ದಿಯಾಗಿ, ಎಲ್ಲೆಡೆ ಸುದ್ದಿ ಮಾಡಿದರೋ ಅಷ್ಟೇ ವೇಗವಾಗಿ ತೆರೆ ಮರೆಗೆ ಸರಿದಿದ್ದು ಆಯಿತು. ರಾನು ಬಗ್ಗೆ, ಆಕೆಯ ಆ್ಯಟಿಟ್ಯೂಡ್ ಬಗ್ಗೆ ಪಾಸಿಟಿವ್ ಹಾಗೂ ನೆಗೆಟಿವ್ ಕಾಮೆಂಟ್ ಗಳು ಹರಿದು ಬಂದವು. ಅಲ್ಲದೇ ರಾನು ಬಗ್ಗೆ ಸಾಕಷ್ಟು ಹೊಸ ಸುದ್ದಿಗಳು ಹರಿದಾಡಿದವು, ರಾನು ಟ್ರೋಲ್ ಗೆ ಕೂಡಾ ಗುರಿಯಾಗಬೇಕಾಯಿತು. ಈಗ ಮತ್ತೊಮ್ಮೆ ರಾನು ಟ್ರೋಲ್ ಗೆ ಗುರಿಯಾಗಿದ್ದಾರೆ.

ಹೌದು, ಯೊಹಾನಿ ಹಾಡಿರುವ ಸೂಪರ್ ಹಿಟ್ ಮನಕೇ ಮಗೇ ಹಿತೇ ಹಾಡನ್ನು ರಾನು ರಿಂದ ಹಾಡಿಸಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ಯೂಟ್ಯೂಬ್ ನಲ್ಲಿ ವೈರಲ್ ಆದ ಈ ವೀಡಿಯೋಗೆ ನೆಗೆಟಿವ್ ಕಾಮೆಂಟ್ ಗಳ ಸುರಿಮಳೆಯೇ ಆಗುತ್ತಿದೆ.‌ ಈಗಾಗಲೇ ವೀಡಿಯೋ ವನ್ನು 47 ಲಕ್ಷ ಜನರು ವೀಕ್ಷಣೆಯನ್ನು ಮಾಡಿದ್ದಾರೆ. ಐದು ಸಾವಿರಕ್ಕಿಂತ ಅಧಿಕ ಜನರು ಈ ವೀಡಿಯೋವನ್ನು ನೋಡಿ ಕಾಮೆಂಟ್ ಗಳನ್ನು ಮಾಡಿದ್ದಾರೆ. ಆದರೆ ಬಹುತೇಕ ನೆಗೆಟಿವ್ ಕಾಮೆಂಟ್ ಗಳೇ ತುಂಬಿದೆ.

ನೆಟ್ಟಿಗರೊಬ್ಬರು ಇದು ಜಗತ್ತಿನ ಬೆಸ್ಟ್ ಅಲಾರಾಂ ಟೋನ್, ಈ ಟೋನ್ ಕೇಳಿದ ಮೇಲೆ ಯಾರೂ ನಿದ್ದೆ ಮಾಡಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ. ನಾನು ಟಿವಿ ಯಲ್ಲಿ ಈ ಹಾಡು ಹಾಕಿದೆ, ಲಕ್ವಾ ಹೊಡೆದಿದ್ದ ನಮ್ಮ ತಾತ ಮೇಲೆದ್ದು ಟಿವಿ ಆಫ್ ಮಾಡಿದರು ಎಂದೊಬ್ಬರು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಎಲ್ಲದಕ್ಕೂ ಒಂದು ಕೊನೆ ಇರುತ್ತೆ, ರಾನು ಕೂಡಾ ಹಾಡುವುದನ್ನು ನಿಲ್ಲಿಸಬೇಕು, ಈ ಹಾಡು ಕೇಳಿ ನನ್ನ ಇಂದ್ರಿಯಗಳು ಸ್ತಬ್ಧವಾಗಿ ಹೋದವು ಎಂದೊಬ್ಬರು ಟೀಕೆ ಮಾಡಿದ್ದಾರೆ. ಈಗ ನಾನು ಕೂಡಾ ಹಾಡಬಲ್ಲೇ ಎನ್ನುವ ವಿಶ್ವಾಸ ಮೂಡಿದೆ ಎಂದೊಬ್ಬರು ಹಾಸ್ಯ ಮಾಡಿದ್ದಾರೆ.

Leave a Comment