ಸೋಶಿಯಲ್ ಮೀಡಿಯಾದಲ್ಲಿ ಸೈಲೆಂಟ್ ಆದ ಸಮಂತಾ: ಇದಕ್ಕೆ ಅಸಲಿ ಕಾರಣ ಏನು ಗೊತ್ತಾ?

Entertainment Featured-Articles Movies News

ಸಮಂತಾ ಹೆಸರು ಇತ್ತೀಚಿನ ದಿನಗಳಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಒಂದು ಹೆಸರಾಗಿದೆ. ನಟಿಗೆ ಸಂಬಂಧಿಸಿದ ಸುದ್ದಿಗಳು ನಿಜವೋ, ಸುಳ್ಳೋ ಗೊತ್ತಿಲ್ಲವಾದರೂ, ಸಮಂತಾ ಕುರಿತಾದ ಸುದ್ದಿಗಳು ಮಾತ್ರ ಬಹಳ ಬೇಗ ವೈರಲ್ ಆಗುತ್ತವೆ. ಇತ್ತ ದಕ್ಷಿಣದಲ್ಲಿ, ಅತ್ತ ಬಾಲಿವುಡ್ ನಲ್ಲೂ ತನ್ನದೇ ಕ್ರೇಜ್ ಹುಟ್ಟಿಸಿರುವ ನಟಿ ಸಮಂತಾ ಕುರಿತಾಗಿ ಆಗಾಗ ಸುದ್ದಿಗಳು ಆಗುತ್ತಲೇ ಇರುತ್ತವೆ. ವಿಚ್ಚೇದನದ ನಂತರ ಸಮಂತಾ ಹಿಂದೆಂದಿಗಿಂತಲೂ ಹೆಚ್ಚಾಗಿ ಸಿನಿಮಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೇ ಸೋಶಿಯಲ್ ಮೀಡಿಯಾಗಳಲ್ಲಿ ಸಹಾ ನಟಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿರುವ ವಿಚಾರ ಕೂಡಾ ಎಲ್ಲರಿಗೂ ತಿಳಿದೇ ಇದೆ. ಆದರೆ ಕಳೆದ ಕೆಲವು ದಿನಗಳಿಂದಲೂ ಸಹಾ ನಟಿ ಸೋಶಿಯಲ್ ಮೀಡಿಯಾದಲ್ಲಿ ಅಷ್ಟಾಗಿ ಕಾಣಿಸಿಕೊಂಡಿಲ್ಲ.

ಸಮಂತಾ ಹೀಗೆ ಇದಕ್ಕಿದ್ದ ಹಾಗೆ ಸೋಶಿಯಲ್ ಮೀಡಿಯಾದಲ್ಲಿ ಮೌನವಾಗಿರುವುದನ್ನು ಕಂಡು, ದಿನಕ್ಕೊಂದು ಹೊಸ ಸುದ್ದಿ ಹೊರ ಬರುತ್ತಿದೆ. ಗಾಸಿಪ್ ಗಳು ಹರಿದಾಡುತ್ತಿವೆ. ಕೆಲವರು ನಟಿಯು ಸರ್ಜರಿಯನ್ನು ಮಾಡಿಸಿಕೊಂಡಿದ್ದಾರೆ ಎಂದರೆ, ಮತ್ತೆ ಕೆಲವರು ನಟಿಯು ಚರ್ಮ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನುವ ಮಾತನ್ನು ಸಹಾ ಹೇಳುತ್ತಿದ್ದಾರೆ. ಆದರೆ ಇನ್ನೂ ಕೆಲವರು ಇವೆಲ್ಲಾ ಸಹಾ ಸುಳ್ಳು, ವಾಸ್ತವವಾಗಿ ನಟಿಯು ತಮ್ಮ ಸಿನಿಮಾ ಕೆಲಸಗಳಲ್ಲಿ ಸಾಕಷ್ಟು ಬ್ಯುಸಿಯಾಗಿರುವ ಕಾರಣದಿಂದ ಅವರು ಸೋಷಿಯಲ್ ಮೀಡಿಯಾ ಕಡೆ ಗಮನ ನೀಡಲು ಸಾಧ್ಯವಾಗಿಲ್ಲ ಎಂದು ಹೇಳುತ್ತಿದ್ದಾರೆ.

ಈಗ ಇವೆಲ್ಲವುಗಳ ಜೊತೆಗೆ ಹೊಸದೊಂದು ಸುದ್ದಿ ಕೂಡಾ ಹರಿದಾಡುತ್ತಿದೆ. ಸಮಂತಾ ಸರ್ಜರಿಗಾಗಿ ಅಮೆರಿಕಾಕ್ಕೆ ಹಾರಿದ್ದಾರೆ, ಆಕೆ ಅಲ್ಲೇ ಸ್ವಲ್ಪ ದಿನ‌ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಸಮಂತಾ ಈಗಾಗಲೇ ತಮ್ಮ ಮುಖಕ್ಕೆ ಹಲವು ಬಾರಿ ಸರ್ಜರಿಗಳನ್ನು ಮಾಡಿಸಿಕೊಂಡಿದ್ದಾರೆ ಎನ್ನುವುದು ಟಾಕ್. ಹಾಗಾದರೆ ಈಗ ಹೊಸದಾಗಿ ಯಾವ ಸರ್ಜರಿಗಾಗಿ ನಟಿ ಅಮೆರಿಕಾಕ್ಕೆ ತೆರಳಿದ್ದಾರೆ ಎಂದು ನೆಟ್ಟಿಗರು ಅನುಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಇದೇ ವೇಳೆ ಅದು ಸರ್ಜರಿ ಅಲ್ಲ, ಚರ್ಮದ ಮೇಲೆ ರ್ಯಾಷಸ್ ಆಗಿದ್ದು, ಅದರ ನಿವಾರಣೆಗೆ ಸಣ್ಣ ಟ್ರೀಟ್ಮೆಂಟ್ ಎಂದು ಹೇಳಲಾಗುತ್ತಿದೆ.

ಚಿಕಿತ್ಸೆ ನಂತರ ಕೆಲವು ದಿನಗಳ ಕಾಲ ಹೊರಗೆ ಬರದಂತೆ ವೈದ್ಯರು ಸಲಹೆಯನ್ನು ನೀಡಿರುವುದರಿಂದ ಸಮಂತಾ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಇನ್ನು ಕೆಲವೇ ದಿನಗಳಲ್ಲಿ ನಟಿಯು ಇಂಡಿಯಾಕ್ಕೆ ಮರಳಿ ಬರಲಿದ್ದು, ಎಂದಿನಂತೆ ಸಾಮಾನ್ಯ ಜೀವನವನ್ನು ನಡೆಸಲಿದ್ದಾರೆ ಎನ್ನಲಾಗಿದೆ. ಈ ಸುದ್ದಿಯಲ್ಲಿ ಎಷ್ಟು ನಿಜ ಇದೆ ಅಥವಾ ಎಷ್ಟು ಸುಳ್ಳು ಎನ್ನುವುದಕ್ಕೆ ನಟಿಯೇ ಉತ್ತರ ನೀಡಬೇಕಾಗಿದ್ದು, ಶೀಘ್ರದಲ್ಲೇ ಇದಕ್ಕೆ ಸ್ಪಷ್ಟನೆ ದೊರೆಯಲಿದೆ. ಇನ್ನು ವೃತ್ತಿಯ ವಿಚಾರಕ್ಕೆ ಬಂದರೆ ಸಮಂತಾ ಅಭಿನಯದ ಯಶೋಧ, ಶಾಕುಂತಲಂ ಸಿನಿಮಾಗಳು ಬಿಡುಗಡೆ ಆಗಬೇಕಿದೆ. ಅಲ್ಲದೇ ನಟಿ ಟಾಲಿವುಡ್ ಮತ್ತು ಬಾಲಿವುಡ್‌ ಪ್ರಾಜೆಕ್ಟ್ ಗಳನ್ನು ಸಹಾ ಒಪ್ಪಿಕೊಂಡಿದ್ದಾರೆ.

Leave a Reply

Your email address will not be published.