ಸೋಶಿಯಲ್ ಮೀಡಿಯಾದಲ್ಲಿ ನಟಿ ಸೌಂದರ್ಯ ತದ್ರೂಪಿ: ಯಾರೀಕೆ?? ಎಂದು ಆಶ್ಚರ್ಯ ಪಟ್ಟ ನೆಟ್ಟಿಗರು

Written by Soma Shekar

Published on:

---Join Our Channel---

ಈ ಜಗತ್ತಿನಲ್ಲಿ ಒಬ್ಬರನ್ನು ಹೋಲುವವರು ಏಳು ಮಂದಿ ಇರುತ್ತಾರೆ ಎಂದು ಹೇಳುವುದನ್ನು ನಾವೆಲ್ಲಾ ಕೇಳಿಯೇ ಇದ್ದೇವೆ. ಕೆಲವೊಮ್ಮೆ ಒಬ್ಬರ ಹೋಲಿಕೆಯಲ್ಲಿ ಇರುವ ಮತ್ತೊಬ್ಬರನ್ನು ನಾವು ನೋಡಿಯೇ ಇರುತ್ತೇವೆ. ಅದರಲ್ಲೂ ಸಿನಿಮಾ ಸ್ಟಾರ್ ಗಳ ವಿಷಯಕ್ಕೆ ಬಂದರೆ ಸಿನಿಮಾ ಹೀರೋಗಳನ್ನು ಹೋಲುವ, ಅವರಂತೆ ಸ್ಟೈಲ್ ಮಾಡುವವರನ್ನು ನೋಡಿದ್ದೇವೆ. ಆದರೆ ನಟಿಯರ ವಿಷಯ ಬಂದಾಗ ಅವರನ್ನೇ ಹೋಲುವವರು ಅಷ್ಟಾಗಿ ಕಾಣ ಸಿಗುವುದಿಲ್ಲ ಎಂದೇ ಹೇಳಬಹುದು. ಹೀರೋಗಳಿಗೆ ಇರುವಷ್ಟು ಜನ ತದ್ರೂಪಿಗಳು ಹೀರೋಯಿನ್ ಗಳಿಗೆ ಇರುವುದು ಕಡಿಮೆ.

ದಕ್ಷಿಣ ಸಿನಿ ರಂಗದಲ್ಲಿ ತನ್ನದೇ ಆದ ಸ್ಥಾನ ಹಾಗೂ ಅದ್ಭುತ ವರ್ಚಸ್ಸನ್ನು ಉಳಿಸಿ ಹೋಗಿರುವ ನಟಿ, ಕನ್ನಡತಿ ಸೌಂದರ್ಯ. ನಟಿ ಸೌಂದರ್ಯ ಅವರಿಗಿದ್ದ ಬೇಡಿಕೆ, ಅವರಿಗಿದ್ದ ಅಭಿಮಾನಿಗಳ ಬಳಗದ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇನ್ನು ಸೌಂದರ್ಯ ಅವರ ನಟನೆ ಹಾಗೂ ಅವರು ನಟಿಸಿದ ಸಿನಿಮಾಗಳನ್ನು ಜನರು ಮರೆತಿಲ್ಲ. ಗಾಸಿಪ್ ಗಳಿಗೆ ಆಹಾರವಾಗದೇ ಒಂದು ಉತ್ತಮ ಹೆಸರು, ಜನಪ್ರಿಯತೆ ತನ್ನದಾಗಿಸಿಕೊಂಡು, ಬೇರೆಲ್ಲಾ ನಟಿಯರಿಗಿಂತ ಭಿನ್ನವಾಗಿ ಜನಾದರಣೆ ಪಡೆದ ಏಕೈಕ ನಟಿ ಸೌಂದರ್ಯ.

ಸೌಂದರ್ಯ ಅವರು ಎಲ್ಲರನ್ನು ಅಗಲಿ ಹಲವು ವರ್ಷಗಳೇ ಕಳೆದು ಹೋದರು ಅವರನ್ನು ಸ್ಮರಿಸುವ ಅಭಿಮಾನಿಗಳಿದ್ದಾರೆ. ಇಂತಹ ನಟಿ ಸೌಂದರ್ಯ ಅವರಂತೆಯೇ ಕಾಣುವ ಯುವತಿಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಒಂದು ಸಂಚಲನವನ್ನು ಸೃಷ್ಟಿಸುವ ಮೂಲಕ ಇದೀಗ ಆಕೆ ವೀಡಿಯೋಗಳು ವೈರಲ್ ಆಗಿ ಬಹಳಷ್ಟು ಜನರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ ಅಲ್ಲದೇ ದೊಡ್ಡ ಮಟ್ಟದಲ್ಲಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಹಾಗಾದರೆ ಯಾರು ಆ ಯುವತಿ ತಿಳಿಯೋಣ ಬನ್ನಿ.

ಇನ್ಸ್ಟಾಗ್ರಾಂ ನಲ್ಲಿ ಚಿತ್ರ ಎನ್ನುವ ಹೆಸರಿನಲ್ಲಿ ಖಾತೆ ಹೊಂದಿರುವ ಯುವತಿ ತಾನು ಮಲೇಷ್ಯಾ ದಲ್ಲಿ ಇರುವುದು ಎಂದು ಹೇಳಿ ಕೊಂಡಿದ್ದು, ಅದಕ್ಕಿಂತ ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ. ಆದರೆ ಈಕೆ ಇನ್ಸ್ಟಾಗ್ರಾಂ ರೀಲ್ಸ್ ನಲ್ಲಿ ಮಾಡಿರುವ ವೀಡಿಯೋ ಗಳನ್ನು ನೋಡಿದ ನೆಟ್ಟಿಗರು ಈಕೆಯನ್ನು ನಟಿ ಸೌಂದರ್ಯ ಅವರ ತದ್ರೂಪಿ ಎಂದು ಹಾಡಿ ಹೊಗಳಿದ್ದಾರೆ. ಆಕೆಯ ವೀಡಿಯೋಗಳಿಗೆ ಕಾಮೆಂಟ್ ಮಾಡಿ ಇನ್ನೂ ಇಂತಹ ವೀಡಿಯೋ ಮಾಡಿ ಎಂದು ಬೇಡಿಕೆ ಇಡುತ್ತಿದ್ದಾರೆ.

ಚಿತ್ರ ಸೌಂದರ್ಯ ಅವರ ರೀತಿ ಮೇಕಪ್ ಮಾಡಿಕೊಂಡು, ಸೌಂದರ್ಯ ಅವರ ಸಿನಿಮಾಗಳ ಸನ್ನಿವೇಶಗಳಿಗೆ ಲಿಪ್ಸಿಂಗ್ ಮಾಡುವುದು, ಹಾಡು ಹೇಳುವುದು, ಡಾನ್ಸ್ ಮಾಡುವುದು, ಡೈಲಾಗ್ ಹೀಗೆ ಹಲವು ವೀಡಿಯೋ ಗಳನ್ನು ಮಾಡಿ ಈಗಾಗಲೇ ಶೇರ್ ಮಾಡಿಕೊಂಡಿದ್ದು, ಇವರ ವೀಡಿಯೋಗಳು ಭರ್ಜರಿ ವೈರಲ್ ಆಗುತ್ತಿವೆ. ಅನೇಕರು ನಮಗೆ ಸೌಂದರ್ಯ ಅವರ ನೆನಪು ಮರಳಿ ತಂದು ಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದು ಚಿತ್ರ ಅವರಿಗೆ ಧನ್ಯವಾದಗಳನ್ನು ಹೇಳುತ್ತಿದ್ದಾರೆ.

Leave a Comment