ಪ್ರಿಯಾಂಕ ಚೋಪ್ರಾ, ನಿಕ್ ಜೋನಸ್ ವಿಚ್ಛೇದನ?? ತನ್ನ ಹೆಸರಿಂದ ಗಂಡನ ಹೆಸರು ಕೈ ಬಿಟ್ಟ ಪ್ರಿಯಾಂಕ

Written by Soma Shekar

Updated on:

---Join Our Channel---

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಪ್ರಸ್ತುತ ಬಾಲಿವುಡ್ ಮಾತ್ರವೇ ಅಲ್ಲದೇ ಹಾಲಿವುಡ್ ನಲ್ಲೂ ಸಹಾ ಮಿಂಚುತ್ತಿರುವ ನಟಿಯಾಗಿದ್ದಾರೆ. ಮದುವೆಯ ನಂತರ ಪತಿ ನಿಕ್ ಜೋನಸ್ ಜೊತೆಗೆ ಅಮೆರಿಕಾದಲ್ಲೇ ನೆಲೆಸಿರುವ ಪ್ರಿಯಾಂಕ ಅಲ್ಲೇ ನೆಲೆಯೂರಿದ್ದಾರೆ. ಆದರೆ ಇದೀಗ ಪ್ರಿಯಾಂಕ ಚೋಪ್ರಾ ತಮ್ಮ ಪತಿ, ಪಾಪ್ ಸಿಂಗರ್ ನಿಕ್ ಜೋನಸ್ ಜೊತೆಗೆ ವಿ ಚ್ಛೇ ದನ ಪಡೆಯಲಿದ್ದಾರೆ ಎನ್ನುವ ಸುದ್ದಿಯೊಂದು ಬಹಳ ದೊಡ್ಡ ಹಾಟ್ ಟಾಪಿಕ್ ಆಗಿ ಎಲ್ಲೆಡೆ ಹರಿದಾಡಿದೆ. ಈ ಸುದ್ದಿ ಹರಿದಾಡಲು ಕಾರಣವೂ ಇದ್ದು, ಅದೇ ಚರ್ಚೆಗೆ ಕಾರಣವಾಗಿದೆ.

ಪ್ರಿಯಾಂಕ ಹಾಗೂ ನಿಕ್ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಇಬ್ಬರೂ ಬಹಳ ಪ್ರೀತಿಯಿಂದ ಇರುವ ಫೋಟೋಗಳು ಹಾಗೂ ವೀಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಆದರೆ ಇವೆಲ್ಲವುಗಳ ನಡುವೆ ಮದುವೆಯ ನಂತರ ತನ್ನ ಹೆಸರಿನ ಜೊತೆಗೆ ಪ್ರಿಯಾಂಕ ಪತಿ ಜೋನಸ್ ಹೆಸರನ್ನು ಸೇರಿಸಿಕೊಂಡಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಪ್ರಿಯಾಂಕ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಹೆಸರಿನ ಜೊತೆಗೆ ಇದ್ದ ಪತಿಯ ಹೆಸರನ್ನು ತೆಗೆದು ಹಾಕಿದ್ದಾರೆ. ಹೀಗೆ ಹೆಸರನ್ನು ತೆಗೆದಿದ್ದೇ ಚರ್ಚೆಗೆ ಕಾರಣವಾಗಿದೆ.

ಕೆಲವು ತಿಂಗಳುಗಳ ಹಿಂದೆ ನಟಿ ಸಮಂತಾ ಕೂಡಾ ಹೀಗೆ ಅಕ್ಕಿನೇನಿ ಎಂದು ಸರ್ ನೇಮ್ ರಿಮೂವ್ ಮಾಡಿದ ನಂತರ ಎಲ್ಲೆಡೆ ಅದು ದೊಡ್ಡ ಸದ್ದು ಮಾಡಿತ್ತು. ಅನುಮಾನ ಮೂಡಿತ್ತು, ಆ ಅನುಮಾನ ಅಕ್ಟೋಬರ್ ನಲ್ಲಿ ನಿಜವಾಗಿ ಸಮಂತಾ, ನಾಗಚೈತನ್ಯ ರಿಂದ ಅಧಿಕೃತವಾಗಿ ವಿಚ್ಚೇದನದ ಮೂಲಕ ದೂರವಾದರು. ಈಗ ಪ್ರಿಯಾಂಕ ತನ್ನ ಹೆಸರಿನ ಜೊತೆಗಿದ್ದ ಪತಿಯ ಹೆಸರನ್ನು ತೆಗೆದಿದ್ದು, ಜನರಲ್ಲಿ ಅಂತಹುದೇ ಒಂದು ಅನುಮಾನವನ್ನು ಹುಟ್ಟು ಹಾಕಿದೆ.

ಕೆಲವರು ಪ್ರಿಯಾಂಕ ಹಾಗೂ ನಿಕ್ ವಿಚ್ಛೇದನದ ಸುದ್ದಿ ಸುಳ್ಳು ಎಂದರೆ, ಇನ್ನೂ ಕೆಲವರು ಇದು ನಿಜ, ಸಾಕ್ಷ್ಯ ಗಳು ಸಹಾ ಸಿಕ್ಕಿವೆ ಎಂದಿದ್ದಾರೆ. ಪ್ರಿಯಾಂಕ ಚೋಪ್ರಾ ಅವರ ತಾಯಿ ಮಧು ಚೋಪ್ರಾ ಕೂಡಾ ಇದೆಲ್ಲಾ ಸುಳ್ಳು ಸುದ್ದಿ ಎಂದಿದ್ದಾರೆ. ಕೆಲವೇ ದಿನಗಳ ಹಿಂದೆ ಪ್ರಿಯಾಂಕ ಹೊಸ ಮನೆ ಖರೀದಿ ಮಾಡಿ, ಅಲ್ಲೇ ಪತಿಯೊಡನೆ ಸಂಭ್ರಮದಿಂದ ದೀಪಾವಳಿಯನ್ನು ಆಚರಣೆ ಮಾಡಿದ್ದರು. ಅಲ್ಲದೇ ಮಂಗಳವಾರ ನಿಕ್ ವರ್ಕೌಟ್ ಮಾಡುತ್ತಿರುವ ಫೋಟೋಗೆ ಪ್ರಿಯಾಂಕ ಮೆಚ್ಚುಗೆ ಸೂಚಿಸಿದ್ದಾರೆ.

Leave a Comment