ಸೋಲಿನ ಬೆನ್ನಲ್ಲೇ ನಿರ್ಮಾಪಕರ ಕೈ ಹಿಡಿದ ಪ್ರಭಾಸ್: ಮಹತ್ವದ ನಿರ್ಧಾರದಿಂದ ರಿಯಲ್ ಹೀರೋ ಆದ ಪ್ರಭಾಸ್

Entertainment Featured-Articles News

ಟಾಲಿವುಡ್ ನ ಯಂಗ್ ರೆಬೆಲ್ ಸ್ಟಾರ್ ಖ್ಯಾತಿಯ, ಪ್ಯಾನ್ ಇಂಡಿಯಾ ಸ್ಟಾರ್ ಸಹಾ ಆಗಿರುವ ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಅವರಿಗೆ ಅವರದ್ದೇ ಆದ ಅಭಿಮಾನಿ ಬಳಗವಿದೆ. ಅಲ್ಲದೇ ಬಾಹುಬಲಿ ನಂತರ ಪ್ರಭಾಸ್ ಸಿನಿಮಾಗಳ ಬಗ್ಗೆ ಅಭಿಮಾನಿಗಳಿಗೆ ಹಾಗೂ ಸಿನಿ ಪ್ರೇಮಿಗಳಿಗೆ ಅವರದ್ದೇ ಆದ ದೊಡ್ಡ ಮಟ್ಟದ ನಿರೀಕ್ಷೆಗಳು ಇರುತ್ತವೆ. ಆದರೆ ಈ ನಿರೀಕ್ಷೆಗಳನ್ನು ನಿಜ ಮಾಡುವಲ್ಲಿ ಅದೇಕೋ ಬಾಹುಬಲಿ ನಂತರ ಬಂದ ಪ್ರಭಾಸ್ ನಟನೆಯ ಎರಡು ಸಿನಿಮಾಗಳು ವಿಫಲವಾಗಿದ್ದು ಅವರ ಅಭಿಮಾನಿಗಳಿಗೆ ಸಹಜವಾಗಿಯೇ ಮೂಡಿದೆ ಹಾಗೂ ಪ್ರಭಾಸ್ ಮುಂದಿನ ಸಿನಿಮಾ ಕಡೆ ಈಗ ಗಮನ ನೀಡಿದ್ದಾರೆ.

ಸಾಹೋ ವಿಫಲತೆಯ ನಂತರ ಸಿನಿ ಪ್ರೇಮಿಗಳು ಸಹಜವಾಗಿಯೇ ಪ್ರಭಾಸ್ ನಟನೆಯ ರಾಧೇ ಶ್ಯಾಮ್ ಬಗ್ಗೆ ಅಪಾರವಾದ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಆದರೆ ಪ್ರಭಾಸ್ ಚಾರ್ಮ್ ಮಾತ್ರ ಕುಗ್ಗದ ಕಾರಣ ಅವರ ಸಿನಿಮಾ ಮೇಲೆ ಬಂಡವಾಳ ಹೂಡಲು ನಿರ್ಮಾಪಕರು ಸಹಾ ಹಿಂಜರಿಯಲಿಲ್ಲ. ಇಂಟರ್ ನ್ಯಾಷನಲ್ ಮಟ್ಟದಲ್ಲಿ ಕೂಡಾ ಪ್ರಭಾಸ್ ಸಿನಿಮಾ ಬಿಡುಗಡೆ ಮಾಡಬಹುದಾದ ನಂಬಿಕೆಯಿಂದ ನಿರ್ಮಾಪಕರು ಬಹುಕೋಟಿ ಬಂಡವಾಳವನ್ನು ಹೂಡಲು ಸಿದ್ಧವಾಗಿದ್ದಾರೆ. ಅದೇ ಕಾರಣದಿಂದಲೇ ರಾಧೇ ಶ್ಯಾಮ್ ಸಿನಿಮಾ ಬರೋಬ್ಬರಿ 350 ಕೋಟಿ ರೂ.‌ಗಳ ವೆಚ್ಚದಲ್ಲಿ ನಿರ್ಮಾಣವಾಯಿತು.

ಸಿನಿಮಾ ದೊಡ್ಡ ಯಶಸ್ಸು ಪಡೆಯಬಹುದು, ದುಪ್ಪಟ್ಟು ಲಾಭ ಮಾಡಬಹುದು ಎನ್ನುವ ನಿರೀಕ್ಷೆಗಳು ಇದ್ದವು. ಆದರೆ ಸಿನಿಮಾ ಬಿಡುಗಡೆ ನಂತರ ಆಗಿದ್ದೇ ಬೇರೆ. ಮೊದಲ ದಿನ ಸಿನಿಮಾ ಎಂಬತ್ತು ಕೋಟಿ ಕಲೆಕ್ಷನ್ ಮಾಡಿತಾದರೂ, ಚಿತ್ರದ ಬಗ್ಗೆ ಹೆಚ್ಚು ನೆಗೆಟಿವ್ ರಿವ್ಯೂ ಗಳೇ ಹರಿದಾಡಿದವು. ಇದು ಸಹಜವಾಗಿಯೇ ಸಿನಿಮಾ ಮೇಲೆ, ಅದರ ಕಲೆಕ್ಷನ್ ಮೇಲೆ ಪರಿಣಾಮ ಬೀರಿತು. ಬಾಲಿವುಡ್ ನಲ್ಲಿ ದಿ ಕಶ್ಮೀರ್ ಫೈಲ್ಸ್ ಸಿನಿಮಾದ ಪ್ರಬಲ ಪೈಪೋಟಿ ಮುಂದೆ ರಾಧೇ ಶ್ಯಾಮ್ ಹಿನ್ನಡೆಯನ್ನು ಕಂಡಿತು.

ಇನ್ನು ದಿನ ಕಳೆದಂತೆ ರಾಧೇ ಶ್ಯಾಮ್ ಸಿನಿಮಾ ಗಳಿಕೆ ಇಲ್ಲಿಯವರೆಗೆ ಸುಮಾರು 211 ಕೋಟಿ ಗಳಿಸಿದೆ ಎಂದು ಮಾದ್ಯಮಗಳಲ್ಲಿ ವರದಿಯಾಗಿದೆ. ಇನ್ನು ಸಿನಿಮಾ ಮುನ್ನೂರು ಕೋಟಿಯ ಕಡೆಗೆ ತಲುಪುವ ಹಾದಿ ಖಂಡಿತ ಸುಗಮವಾಗಿಲ್ಲ.‌ ಇನ್ನೇನು ಆರ್ ಆರ್ ಆರ್ ಸಿನಿಮಾ ಕೂಡಾ ತೆರೆಗೆ ಬರುತ್ತಿದ್ದು, ಆ ಸಿನಿಮಾ ಮುಂದೆ ರಾಧೇ ಶ್ಯಾಮ್ ಓಟ ಇನ್ನಷ್ಟು ಮಂದಗತಿಯನ್ನು ಹಿಡಿಯಬಹುದು ಎನ್ನಲಾಗುತ್ತಿದೆ. ರಾಧೇ ಶ್ಯಾಮ್ ಪ್ರಭಾಸ್ ಅವರಿಗೆ ಎದುರಾಗಿರುವ ಬಹುದೊಡ್ಡ ಸೋಲಾಗಿದೆ. ಇದು ಅನೇಕರಿಗೆ ಬೇಸರ ತಂದಿದೆ.

ರಾಧೇ ಶ್ಯಾಮ್ ಸಿನಿಮಾದ ಸೋಲಿನ ಹೊ ಡೆ ತವು ನಿರ್ಮಾಪಕರ ಮೇಲೆ ಸಹಾ ಆಗಿದೆ. ನಟ ಪ್ರಭಾಸ್ ಅವರು ಇದೀಗ ನಷ್ಟದಿಂದ ಕೈ ಸುಟ್ಟುಕೊಂಡಿರುವ ನಿರ್ಮಾಪಕರಿಗೆ ಸಹಾಯ ಹಸ್ತವನ್ನು ಚಾಚಲು ಮುಂದಾಗಿದ್ದಾರೆ. ಹೌದು, ನಟ ಪ್ರಭಾಸ್ ಅವರು ರಾಧೇ ಶ್ಯಾಮ್ ಸಿ‌ನಿಮಾಕ್ಕಾಗಿ ಬರೋಬ್ಬರಿ 100 ಕೋಟಿ ರೂಪಾಯಿಗಳ ಸಂಭಾವನೆ ಪಡೆದಿದ್ದರು. ಈ ವಿಷಯ ಮಾದ್ಯಮಗಳಲ್ಲಿ ಸಹಾ ದೊಡ್ಡ ಸುದ್ದಿಯಾಗಿತ್ತು. ಅಲ್ಲದೇ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟ ಎನ್ನುವ ಹೆಗ್ಗಳಿಕೆಗೆ ಪ್ರಭಾಸ್ ಪಾತ್ರರಾಗಿದ್ದರು.

ಈಗ ಈ ನಟ ತಮ್ಮ ಈ ಸಂಭಾವನೆಯ ವಿಚಾರದಲ್ಲಿ ಒಂದು ಮಹತ್ವದ ಕೆಲಸವನ್ನು ಮಾಡಿದ್ದಾರೆನ್ನುವ ಸುದ್ದಿ ಇದೀಗ ಹರಿದಾಡಿದೆ. ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಸೋತಿದೆ ಎನ್ನುವ ಸತ್ಯವನ್ನು ಅರಿತುಕೊಂಡಿರುವ ನಟ ಪ್ರಭಾಸ್ ಅವರು ಈ ಸಿನಿಮಾದಿಂದ ನಷ್ಟ ಅನುಭವಿಸಿರುವ ತಮ್ಮ ನಿರ್ಮಾಪಕರಿಗೆ ತಮ್ಮ ಸಂಭಾವನೆಯ ಅರ್ಧ ಹಣವನ್ನು ವಾಪಸ್ಸು ನೀಡಿದ್ದಾರೆ ಎನ್ನಲಾಗಿದೆ. ನಟ ಪ್ರಭಾಸ್ 50 ಕೋಟಿ ರೂ.ಗಳನ್ನು ನಿರ್ಮಾಪಕರಿಗೆ ವಾಪಸ್ ನೀಡುವ ಮೂಲಕ ಹೃದಯವಂತಿಕೆ ಮೆರೆದಿದ್ದಾರೆ ಎನ್ನಲಾಗಿದ್ದು, ಇದು ಮೆಚ್ಚುಗೆಗೆ ಪಾತ್ರವಾಗಿದೆ.

Leave a Reply

Your email address will not be published.