ಸೋಮವಾರದಂದು ತಪ್ಪದೇ ಈ ಕೆಲಸಗಳನ್ನು ಮಾಡಿ, ಎರಡು ಕೈಗಳಿಂದ ಸಿರಿ, ಸಂಪತ್ತು, ಸುಖ, ಶಾಂತಿ ಸ್ವೀಕರಿಸುವಿರಿ!!
ಸನಾತನ ಸಂಪ್ರದಾಯದಲ್ಲಿ ಸೋಮವಾರಕ್ಕೆ ವಿಶೇಷ ಮಹತ್ವವಿದೆ. ಈ ದಿನವನ್ನು ಪರಮ ಪೂಜ್ಯನಾದ ಮಹಾಶಿವನಿಗೆ ಸಮರ್ಪಿಸಲಾಗಿದೆ. ಈ ದಿನ ಶಿವನ ಪೂಜೆ ಹಾಗೂ ಆರಾಧನೆಯನ್ನು ಮಾಡುವುದು ಶ್ರೇಷ್ಠ ಎನ್ನಲಾಗುತ್ತದೆ. ಇದಲ್ಲದೇ ಜೀವನದಲ್ಲಿ ಯಾವುದೇ ಸಂಕಷ್ಟಗಳು, ಸಮಸ್ಯೆಗಳು ಎದುರಾದರೆ ಅವುಗಳ ಪರಿಹಾರಕ್ಕಾಗಿ ಸಹಾ ಮಹಾದೇವನ ಆರಾಧನೆಯನ್ನು ಸೋಮವಾರದಂದು ಮಾಡುವುದರಿಂದ ಆ ಎಲ್ಲಾ ಸಮಸ್ಯೆಗಳು, ಸಂಕಷ್ಟಗಳು ಮಹಾ ಶಿವನ ಕೃಪೆಯಿಂದ ನಿವಾರಣೆಯಾಗಿ ಸುಖ, ಶಾಂತಿ ದೊರೆಯುತ್ತದೆ ಎಂದು ನಂಬಿಕೆ ಇದೆ. ಹಾಗಾದರೆ ಸೋಮವಾದ ಮಾಡಬೇಕಾದ ಕಾರ್ಯಗಳ ಬಗ್ಗೆ ತಿಳಿಯೋಣ ಬನ್ನಿ.
ಸೋಮವಾರ ಚಂದ್ರನ ಪರಿಹಾರಗಳನ್ನು ಮಾಡಿ : ಸೋಮವಾರವು ಚಂದ್ರನ ದಿನವಾಗಿದ್ದರೂ ಸಹಾ ಈ ದಿನ ಚಂದ್ರ ಗ್ರಹದ ಪರಿಹಾರಗಳಿಗೆ ಪರಿಣಾಮಕಾರಿಯಾದ ದಿನ ಎನ್ನಲಾಗಿದೆ. ಚಂದ್ರನು ಬಿಳಿಯ ವಸ್ತುಗಳಿಗೆ ಸಂಬಂಧಿಸಿದ್ದು ಇದು ನಮ್ಮ ಮನಸ್ಸು ಮತ್ತು ಜಲವನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಚಂದ್ರ ಗ್ರಹದ ಅನುಕೂಲಕರ ಪರಿಣಾಮಕ್ಕಾಗಿ ಸೋಮವಾರ ತಪ್ಪದೇ ಈ ಕೆಲಸಗಳನ್ನು ಮಾಡಿ.
ಸೋಮವಾರದ ದಿನದಂದು ಹಾಲು ಮತ್ತು ಹಾಲಿನ ಉತ್ಪನ್ನಗಳು, ಅಕ್ಕಿ, ಬಿಳಿ ಎಳ್ಳು, ಅಡಿಕೆ, ಬಿಳಿಯ ಕಲ್ಲು ಸಕ್ಕರೆ, ಬರ್ಫಿಯಂತಹ ಸಿಹಿತಿಂಡಿಗಳು ಮುಂತಾದ ಎಲ್ಲಾ ರೀತಿಯ ಬಿಳಿ ಆಹಾರ ಪದಾರ್ಥಗಳನ್ನು ಹೆಚ್ಚು ಹೆಚ್ಚು ಬಳಸಬೇಕು. ಇದರಿಂದ ಚಂದ್ರನ ಅನುಗ್ರಹವನ್ನು ಪಡೆದುಕೊಳ್ಳಬಹುದು ಎಂದು ತಿಳಿಸಲಾಗಿದೆ.
ವ್ಯಾಪಾರದಲ್ಲಿ ಚೇತರಿಕೆ ಕಾಣಿಸುತ್ತದೆ : ಸೋಮವಾರದಂದು ಶಿವನಿಗೆ ಜಲಾಭಿಷೇಕವನ್ನು ಮಾಡುವಾಗ, ಅದರಲ್ಲಿ ಸ್ವಲ್ಪ ಬಿಳಿ ಎಳ್ಳನ್ನು ಸೇರಿಸಿ, ಹನ್ನೊಂದು ಬಿಲ್ವ ಪತ್ರೆಗಳನ್ನು ಅರ್ಪಿಸಿದರೆ ಅದರಿಂದ ಉತ್ತಮ ಫಲ ಸಿಗುವುದು ಎನ್ನಲಾಗಿದೆ. ಸೋಮವಾರದ ಅಧಿಪತಿಯು ಚಂದ್ರನಾಗಿದ್ದು ಚಂದ್ರ ನಮ್ಮ ಮನಸ್ಸನ್ನು ಸಂಕೇತಿಸುತ್ತಾನೆ. ಈ ದಿನದಿಂದು ಚಂದ್ರನನ್ನು ಸಂತೋಷಪಡಿಸುವ ಕ್ರಮಗಳನ್ನು ಕೈಗೊಳ್ಳಬೇಕು.
ಇದರಿಂದ ಮೊದಲು ನಮ್ಮ ಮನಸ್ಸಿಗೆ ಶಾಂತಿ ಲಭಿಸುತ್ತದೆ. ಅನಂತರ ದೇಹಕ್ಕೆ ಆರೋಗ್ಯ ಪ್ರಾಪ್ತಿಯಾಗುತ್ತದೆ ಮತ್ತು ನಂತರ ಸಮೃದ್ಧಿಯು ದೊರೆಯುತ್ತದೆ. ವ್ಯಾಪಾರದಲ್ಲಿ ನಷ್ಟ ಎದುರಿಸುತ್ತಿದ್ದರೆ, ವ್ಯಾಪಾರ ನಷ್ಟದಿಂದ ನೀವು ತೊಂದರೆಗೀಡಾಗಿದ್ದರೆ, ಸೋಮವಾರದಂದು ಶಿವನಿಗೆ ಸಕ್ಕರೆ ಮತ್ತು ಹಾಲಿನಿಂದ ಅಭಿಷೇಕ ಮಾಡಬೇಕು. ಹೀಗೆ ಶಿವನ ಆರಾಧನೆ ಮಾಡುವುದರಿಂದ ವ್ಯಕ್ತಿ ತನ್ನ ಕ್ಷೇತ್ರದಲ್ಲಿ ನಾಲ್ಕು ಪಟ್ಟು ಪ್ರಗತಿ ಸಾಧಿಸುತ್ತಾನೆ.
ಬಿಳಿ ಹಸುವಿಗೆ ಬೆಲ್ಲ ಹಾಗೂ ಆಹಾರ ಸಮರ್ಪಿಸಿ:
ಸೋಮವಾರದಂದು ಶ್ವೇತ ವರ್ಣದ ಹಸುವಿಗೆ ಆಹಾರ ಮತ್ತು ಬೆಲ್ಲವನ್ನು ತಿನ್ನಿಸುವುದರಿಂದ ನಮ್ಮ ಎಲ್ಲಾ ತೊಂದರೆಗಳು ದೂರವಾಗುತ್ತವೆ ಎನ್ನಲಾಗಿದೆ. ಈ ದಿನ ಹಾಲು, ಮೊಸರು, ಯಾವುದೇ ಬಿಳಿ ಬಟ್ಟೆ, ಸಕ್ಕರೆ ಮುಂತಾದ ಬಿಳಿ ವಸ್ತುಗಳನ್ನು ದಾನ ಮಾಡುವುದರಿಂದಲೂ ಉತ್ತಮ ಫಲಗಳು ಸಿಗುತ್ತವೆ ಎನ್ನಲಾಗಿದೆ. ಭಸ್ಮದ ತಿಲಕವನ್ನು ಹಣೆಯ ಮೇಲೆ ಹಚ್ಚುವುದರಿಂದ ಶಿವನ ಆಶೀರ್ವಾದ ದೊರೆಯುತ್ತದೆ ಎನ್ನಲಾಗಿದೆ.
ಆರ್ಥಿಕ ಲಾಭಕ್ಕಾಗಿ ಹೀಗೆ ಮಾಡಿ : ಸೋಮವಾರದಂದು ಹೂಡಿಕೆ ಮಾಡುವುದು ಉತ್ತಮ ಎನ್ನಲಾಗಿದೆ. ಈ ದಿನ ಚಿನ್ನ, ಬೆಳ್ಳಿ, ಶೇರುಗಳಲ್ಲಿ ಹೂಡಿಕೆ ಮಾಡಲು ಒಳ್ಳೆಯ ದಿನ ಎನ್ನಲಾಗಿದೆ. ಈ ದಿನ ದಕ್ಷಿಣ, ಪಶ್ಚಿಮ ಮತ್ತು ವಾಯುವ್ಯ ದಿಕ್ಕಿನಲ್ಲಿ ಪ್ರಯಾಣ ಮಾಡುವುದು ಶುಭ ಎನ್ನಲಾಗಿದೆ. ಮನೆ ನಿರ್ಮಾಣ, ಪ್ರಮಾಣ ವಚನ ಸ್ವೀಕಾರ, ನೂತನ ಉದ್ಯೋಗಕ್ಕೆ ಸೇರಲು, ಈ ದಿನ ಒಳ್ಳೆಯದು ಎನ್ನಲಾಗುತ್ತದೆ.
ಅಷ್ಟೇ ಅಲ್ಲದೇ ಕೃಷಿ ಕೆಲಸ ಅಥವಾ ಬರವಣಿಗೆ ಕೆಲಸವನ್ನು ಪ್ರಾರಂಭಿಸಲು ಸಹಾ ಸೋಮವಾರದ ದಿನ ಸೂಕ್ತವಾದುದು ಎಂದು ಹೇಳಲಾಗುತ್ತದೆ. ನೀವು ಸೋಮವಾರ ಹಾಲು ಮತ್ತು ತುಪ್ಪವನ್ನು ಖರೀದಿಸಬಹುದು ಅಥವಾ ಮಾರಾಟ ಮಾಡಬಹುದು. ಯಾವುದೇ ಒಂದು ಹೊಸ ಸಾಧನೆಗೆ ನಿಮ್ಮ ಕೆಲಸವನ್ನು ಸೋಮವಾರದಿಂದ ಪ್ರಾರಂಭಿಸಿದರೆ ಶುಭ ಫಲ ಸಿಗುವುದು ಎಂದು ನಂಬಿಕೆ ಇದೆ.