ಸೋನು ಸೂದ್ ಕುಟುಂಬದ ರಾಜಕೀಯ ಪ್ರವೇಶಕ್ಕೆ ವೇದಿಕೆ ಸಜ್ಜು:ಯಾವ ಪಕ್ಷಕ್ಕೆ ಸೇರ್ಪಡೆ??

Written by Soma Shekar

Updated on:

---Join Our Channel---

ಕೊರೊನಾ ಕಾಲದಲ್ಲಿ ಭಾರತದ ಜನರಿಗೆ ಸಹಾಯ ಹಸ್ತವನ್ನು ಚಾಚುವ ಮೂಲಕ ಅಸಂಖ್ಯಾತ ಜನರ ಪಾಲಿಗೆ ಆರಾಧ್ಯ ದೈವ ಎನಿಸಿಕೊಂಡವರು ನಟ ಸೋನು ಸೂದ್. ಸೋನು ಮಾಡಿದ ಸಹಾಯದಿಂದಾಗಿ ಇಂದು ಅದೆಷ್ಟೋ ಮನೆಗಳಲ್ಲಿ ಸೋನು ಅವರ ಫೋಟೋ ವನ್ನು ಇಟ್ಟು ಪೂಜಿಸುತ್ತಿದ್ದಾರೆ‌ ಜನ. ಅಲ್ಲದೇ ಸೋನು ಅವರು ಜನರಿಗೆ ಮಾಡುವ ಸಹಾಯವನ್ನು ಮಾತ್ರ ಇನ್ನೂ ನಿಲ್ಲಿಸಿಲ್ಲ. ಪ್ರತಿದಿನ ಅವರ ಮನೆ ಮುಂದೆ ಅವರ ಸಹಾಯವನ್ನು ಅರಸಿ ಬರುವ ಜನರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಇಂತಹ ಸೋನು ಅವರು ಈಗ ಹೊಸ ವಿಷಯವನ್ನು ಘೋಷಣೆ ಮಾಡಿದ್ದಾರೆ.

ಸೋನು ಸೋದ್ ಅವರು ತಮ್ಮ ಸಹೋದರಿ ಮಾಳವಿಕ ಸೂದ್ ಸಾಚಾರ್ ಅವರು ರಾಜಕೀಯ ಪ್ರವೇಶ ಮಾಡಲಿದ್ದಾರೆ ಎನ್ನುವ ವಿಚಾರವನ್ನು ಪಂಜಾಬ್ ಜನರ ಮುಂದೆ ಘೋಷಣೆ ಮಾಡಿದ್ದಾರೆ. ತಮ್ಮ ಸಹೋದರಿ ಜನ ಸೇವೆಗೆ ಸಿದ್ಧ ಎಂದು ಸೋನು ಹೇಳಿದ್ದು, ಮುಂಬರುವ ವಿಧಾನ ಸಭಾ ಚುನಾವಣೆಗೆ ಮುನ್ನವೇ ಅವರು ಯಾವ ಪಕ್ಷವನ್ನು ಸೇರಲಿದ್ದಾರೆ ಎನ್ನುವ ವಿಚಾರವನ್ನು ಮಾತ್ರ ಇನ್ನೂ ನಿರ್ಧಾರ ಮಾಡಿಲ್ಲ. ಸೂಕ್ತ ಸಮಯದಲ್ಲಿ ಅದನ್ನು ಬಹಿರಂಗ ಪಡಿಸಲಾಗುವುದು ಎಂದು ಹೇಳಿದ್ದಾರೆ.

ಮಾಳವಿಕಾ ಸಿದ್ಧವಾಗಿದ್ದಾರೆ. ಜನರ ಸೇವೆಗೆ ಅವರ ಬದ್ಧತೆ ಅಪ್ರತಿಮವಾಗಿದೆ ಎಂದು ಸೋನು ಮೊಗಾದ ತಮ್ಮ ಮನೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸೋನು ಇತ್ತೀಚಿಗಷ್ಟೇ ಮುಖ್ಯಮಂತ್ರಿ ಚರಣ್ ಜೀತ್ ಸಿಂಗ್ ಅವರನ್ನು ಭೇಟಿ ಮಾಡಿದ್ದರು. ಅಲ್ಲದೇ ಅನ್ಯ ಪಕ್ಷಗಳ ನಾಯಕರನ್ನು ಸಹಾ ತಾನು ಭೇಟಿಯಾಗಲು ಸಿದ್ಧ ಎನ್ನುವ ಮಾತನ್ನು ಅವರು ಈ ವೇಳೆ ಹೇಳಿದ್ದಾರೆ. ಇನ್ನು ಈ ವೇಳೆ ಸೋನು ಅವರನ್ನು ನೀವು ರಾಜಕೀಯ ಸೇರಲಿದ್ದೀರಾ? ಎನ್ನುವ ಪ್ರಶ್ನೆ ಕೇಳಲಾಯಿತು.

ಆಗ ಸೋನು ಅವರು ಈಗ ಸಹೋದರಿ ಮಾಳವಿಕಾ ಅವರಿಗೆ ಬೆಂಬಲವನ್ನು ನೀಡುವುದು ಮುಖ್ಯವಾಗಿದೆ. ಅವರು ಮೊಗಾದಲ್ಲಿ ತಮ್ಮ ಮೂಲದೊಂದಿಗೆ ಸಂಪರ್ಕವನ್ನು ಹೊಂದಿದ್ದು, ಅವರಿಗೆ ಬೆಂಬಲದ ಅಗತ್ಯವಿದೆ. ನನ್ನ ಸ್ವಂತ ಯೋಜನೆಗಳ ಕುರಿತಾಗಿ ನಾನು ನಂತರದ ದಿನಗಳಲ್ಲಿ ಮಾಹಿತಿಯನ್ನು ಬಹಿರಂಗ ಪಡಿಸುತ್ತೇನೆ ಎಂದು ರಾಜಕೀಯ ಪ್ರವೇಶದ ಬಗ್ಗೆ ಕೇಳಲಾದ ಪ್ರಶ್ನೆಗೆ ಸೋನು ಸೂದ್ ತಮ್ಮ ಉತ್ತರವನ್ನು ನೀಡಿದ್ದಾರೆ.

Leave a Comment