ಸೋನು ವಿಷ್ಯಕ್ಕೆ ಹೋದ್ರೆ ನಾಶ ನಮ್ಮ ಭವಿಷ್ಯ: ಟ್ರೆಂಡ್ ಆಗ್ತಿದೆ ಬಿಗ್ ಬಾಸ್ ಮನೇಲಿ ಹೊಸ ಹಾಡು! ಇಷ್ಟಕ್ಕೂ ಹಾಡಿದ್ಯಾರು ಗೊತ್ತಾ?

Entertainment Featured-Articles Movies News

ಬಿಗ್ ಬಾಸ್ ಮನೆಯಲ್ಲಿ ಎರಡನೇ ವಾರ ತನ್ನ ಜರ್ನಿಯನ್ನು ಮುಂದುವರೆಸಿರುವ ಸೋನು ಶ್ರೀನಿವಾಸಗೌಡ ಸಾಕಷ್ಟು ಸುದ್ದಿಯಾಗುತ್ತಲೇ ಇದ್ದಾರೆ. ಬಿಗ್ ಬಾಸ್ ಮನೆಯ ವಿಚಾರಕ್ಕೆ ಬಂದರೆ ಮನೆಯ ಸದಸ್ಯರಿಗೆ ಸೋನು ಗೌಡ ಅವರನ್ನು ಕಂಡರೆ ಅಷ್ಟಕ್ಕಷ್ಟ ಅನ್ನೋದು ಎಲ್ಲರಿಗೂ ತಿಳಿದಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇದಕ್ಕೆ ಪ್ರಮುಖ ಕಾರಣವೆಂದರೆ ಸೋನು ಒಂದಕ್ಕೊಂದು ಸಂಬಂಧ ಇಲ್ಲದೇ ಹಾಗೆ ಮಾತನಾಡುವುದು ಒಂದಾದರೆ, ಮತ್ತೊಂದು, ಅವರು ಸಾಕಷ್ಟು ಅವಾಚ್ಯ ಶಬ್ದಗಳನ್ನು ಬಳಸುವುದು ಸಹಾ ಕಾರಣವಾಗಿದೆ. ಕೆಲವೊಂದು ಸಂದರ್ಭಗಳಲ್ಲಿ ಅವರ ಮಾತುಗಳಿಗೆ ಬೀಪ್ ಶಬ್ದವನ್ನು ಹಾಕಿ ಪ್ರಸಾರವನ್ನು ಮಾಡಲಾಗುತ್ತಿದೆ. ಈ ವಿಚಾರವಾಗಿ ಯಾರು ಎಷ್ಟೇ ಬುದ್ಧಿ ಹೇಳಿದರೂ ಸೋನು ಕೇಳುವ ಮೂಡ್ ನಲ್ಲೇ ಇಲ್ಲವೇನೋ ಎನ್ನುವಂತಿದೆ ಪರಿಸ್ಥಿತಿ.

ಸೋನು ಬಳಸುವ ಅವಾಚ್ಯ ಶಬ್ದಗಳ ವಿಷಯವಾಗಿ ಜಯಶ್ರೀ ಅವರು ಈಗಾಗಲೇ ಸೋನುಗೆ ಬುದ್ಧಿ ಮಾತನ್ನು ಹೇಳುವ ಪ್ರಯತ್ನವನ್ನು ಮಾಡಿದ್ದಾರೆ. ಅವರು ಸೋನುಗೆ, ಏನೇನೋ ಮಾತನಾಡಬೇಡ, ಕೆಟ್ಟ ಶಬ್ದಗಳನ್ನು ಬಳಕೆ ಮಾಡಬೇಡ ಎಂದು ಹೇಳಿದ್ದು, ಈ ಮಾತುಗಳು ಸೋನುಗೆ ಕಿರಿಕಿರಿಯನ್ನುಂಟು ಮಾಡಿದೆ. ಜಯಶ್ರೀ ಮಾತ್ರವಲ್ಲದೇ ಚೈತ್ರ ಹಳ್ಳಿಕೇರಿ ಅವರು ಸಹಾ ಇದೇ ವಿಚಾರವಾಗಿ ಸೋನುಗೆ ಬುದ್ಧಿಮಾತು ಹೇಳುತ್ತಾ, ನೀನು ಮಾತನಾಡುವ ಭರದಲ್ಲಿ ಏನೇನೋ ಮಾತನಾಡುವೆ, ಹಾಗೆಲ್ಲಾ ಇರಬೇಡ ತೊಂದರೆ ಆಗುತ್ತೆ, ನೀನು ಒಂದು ರಿಯಾಲಿಟಿ ಶೋನಲ್ಲಿ ಇದ್ದೀಯಾ, ಹೊರಗೆ ಯಾವ ರೀತಿ ಮೆಸೇಜ್ ಹೋಗುತ್ತೆ ಅನ್ನೋದನ್ನು ಅರ್ಥ ಮಾಡಿಕೋ ಎಂದು ವಾಸ್ತವ ತಿಳಿಸುವ ಪ್ರಯತ್ನ ಮಾಡಿದ್ದಾರೆ.

ಹೀಗೆ ಬುದ್ಧಿ ಮಾತುಗಳನ್ನು ಕೇಳಿದ ನಂತರ ಸೋನು ಅದಕ್ಕೆ ಪ್ರತಿಕ್ರಿಯೆ ನೀಡುತ್ತಾ, ಪದೇ ಪದೇ ಹೀಗೆ ಹೇಳಿದರೆ ನನಗೆ ಎಲ್ಲಾ ಮರೆತು ಹೋಗುತ್ತದೆ ಎಂದು ಹೇಳಿದ್ದು, ಸೋನು ಮಾತನ್ನು ಕೇಳಿ ಮನೆಯಲ್ಲಿದ್ದವರ ನಕ್ಕಿದ್ದಾರೆ. ರಾಕೇಶ್ ಆಡಿಗ ಸಹಾ ಸೋನುಗೆ ಸಲಹೆಯೊಂದನ್ನು ನೀಡುತ್ತಾ, ಚೈತ್ರ ಅವರ ಬಳಿ ಮಾತನಾಡುವಾಗ ಅವರಿಗೆ ಗೌರವ ಕೊಟ್ಟು ಮಾತನಾಡು ಎಂದು ಹೇಳಿದ್ದಾಗಿದೆ. ಆದರೆ ಯಾರು ಏನೇ ಹೇಳಿದರೂ ಸೋನು ಮಾತಿನಲ್ಲಿ ಯಾವುದೇ ಸುಧಾರಣೆ ಕಂಡಿಲ್ಲ. ಕೆಟ್ಟ ಭಾಷೆ ಬಳಸದ ಹಾಗೆ, ಬೇರೆಯವರಿಗೆ ಗೌರವ ನೀಡುವ ಬಗ್ಗೆ ಸೋನು ಕಿಂಚಿತ್ತೂ ಗಮನವನ್ನು ನೀಡುತ್ತಿಲ್ಲ.

ಈಗ ಇವೆಲ್ಲವುಗಳ ನಡುವೆ ರಾಕೇಶ್ ಆಡಿಗ ಮತ್ತು ಅಕ್ಷತಾ ಇಬ್ಬರು ಸೇರಿ ಸೋನುಗೌಡ ಬಗ್ಗೆ ಒಂದು ಹಾಡನ್ನು ಬರೆದು ಹಾಡಿದ್ದಾರೆ. ಸೋನು ಸೂಪರು, ಬಾಯಿ ಡೇಂಜರು,
ಸೋನು ವಿಷಯ ಬೇಡವೋ ಶಿಷ್ಯ,
ಸೋನು ಸುದ್ದಿಗೆ ಹೋದರೆ ನಾಶ ನಮ್ಮ ಭವಿಷ್ಯ ಎನ್ನುವ ರೀತಿಯಲ್ಲಿ ಸೋನು ಮುಂದೆ ಹಾಡನ್ನು ಹಾಡಿ, ನಗುತ್ತಾ ವೆಂಗ್ಯ ಮಾಡಿದ್ದಾರೆ. ಇನ್ನು ಸೋನು ಗೌಡ ಬಿಗ್ ಬಾಸ್ ಗೆ ಎಂಟ್ರಿ ನೀಡಿದ ದಿನದಿಂದಲೂ ಹೊರಗಡೆ ನೆಗೆಟಿವ್ ಪ್ರತಿಕ್ರಿಯೆಗಳು ಹೆಚ್ಚಾಗಿ ಬರುತ್ತಲೇ ಇದೆ. ಆದರೂ ಒಂದು ವಾರ ಪೂರ್ಣಗೊಳಿಸಿ ಎರಡನೇ ವಾರಕ್ಕೆ ಎಂಟ್ರಿ ಕೊಟ್ಟಿರುವ ಸೋನು ಮನೆಯಲ್ಲಿ ಇನ್ನೆಷ್ಟು ದಿನಗಳ ಕಾಲ ಇರುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

Leave a Reply

Your email address will not be published.