ಸೋನು ಮತ್ತು ಸೋಮಣ್ಣ ಹಂಚಿಕೊಂಡ್ರು ತಮ್ಮ ಕಳ್ಳತನದ ಕಥೆಯನ್ನು: ಇವರು ಕದ್ದಿದ್ದು ಏನನ್ನು ಗೊತ್ತಾ?

Written by Soma Shekar

Published on:

---Join Our Channel---

ಬಿಗ್ ಬಾಸ್ ಓಟಿಟಿ ಕನ್ನಡ ಮೊದಲ ಸೀಸನ್ ನ ನಾಲ್ಕನೇ ವಾರ ಮುಗಿಯುತ್ತಾ ಬಂದಿದೆ. ಮೊದಲನೇ ಸೀಸನ್ ಆದರೂ ಸಹಾ ಓಟಿಟಿಯಲ್ಲಿ ಪ್ರಸಾರ ಆಗುತ್ತಿರುವ ಬಿಗ್ ಬಾಸ್ ಹತ್ತು ಹಲವು ವಿಚಾರಗಳಿಗಾಗಿ ಸದ್ದು ಮಾಡುತ್ತಾ, ಸಾಕಷ್ಟು ಜನಪ್ರಿಯತೆಯನ್ನು ತನ್ನದಾಗಿಸಿಕೊಂಡಿದೆ. ಹೊಸ ಪ್ರಯೋಗ ಯಶಸ್ಸನ್ನು ತಂದುಕೊಟ್ಟಿದೆ. ಕಳೆದ ಎರಡು ಮೂರು ದಿನಗಳಿಂದಲೂ ಹಬ್ಬದ ಮೂಡ್ ನಲ್ಲಿ ಖುಷಿಯಾಗಿದ್ದರು ಮನೆಯ ಸದಸ್ಯರು. ಈಗ ಎಲ್ಲರೂ ಹಬ್ಬದ ಮೂಡ್ ನಿಂದ ಹೊರ ಬಂದಾಗಿದೆ. ಈ ವೇಳೆ ಸೋನು ಶ್ರೀನಿವಾಸ್ ಗೌಡ ಮಾತನಾಡುತ್ತಾ ಒಂದು ಹೊಸ ವಿಷಯವನ್ನು ರಿವೀಲ್ ಮಾಡುವ ಮೂಲಕ ಮತ್ತೊಮ್ಮೆ ಎಲ್ಲರ ಗಮನವನ್ನು ಸೆಳೆದಿದ್ದಾರೆ.

ಸೋನು, ತಾನು ಶಾಲೆಯಲ್ಲಿ ಇದ್ದಾಗ ಕಳ್ಳತನ ಮಾಡುತ್ತಿದ್ದೆ ಎನ್ನುವ ವಿಚಾರವನ್ನು ಹಂಚಿಕೊಂಡಿದ್ದಾರೆ. ಹಬ್ಬ ಮುಗಿದ ಮೇಲೆ ಬಳಸಿದ ಆಭರಣಗಳನ್ನು ಎತ್ತಿಡುವ ಸಂದರ್ಭದಲ್ಲಿ ಮಾತನಾಡುತ್ತಾ, ತಾನು ಜಾತ್ರೆಗೆ ಹೋದಾಗ ಕದಿಯುತ್ತಿದ್ದೆ ಎನ್ನುವ ಮಾತನ್ನು ಹೇಳಿ, ನಂತರ ನಾನು ಸುಮ್ಮನೆ ಹೇಳಿದ್ದು, ನಾನು ಕದೀತಾ ಇರ್ಲಿಲ್ಲ ಎಂದು ಹೇಳಿದ್ದಾರೆ. ಆಗ ಸೋಮಣ್ಣ ಮಾಚಿಮಾಡ ಸುಮ್ಮಸುಮ್ಮನೆ ಇಂತಹ ಹೇಳಿಕೆ ನೀಡಬಾರದು ಎಂದು ಹೇಳಿದ್ದಾರೆ. ಆಗ ಸೋನು ಚಿಕ್ಕ ವಯಸ್ಸಿನಲ್ಲಿ ಎಲ್ಲರೂ ಕದ್ದಿರುತ್ತಾರೆ, ಪೆನ್ಸಿಲ್ ಎಲ್ಲಾ ಎಂದು ಹೇಳುತ್ತಾ ನೀವು ಕದ್ದಿರುತ್ತೀರಾ ಅಲ್ವಾ ಎಂದು ಚೈತ್ರ ಅವರನ್ನು ಕೇಳಿದ್ದಾರೆ.

ಆಗ ಚೈತ್ರಾ ತಮಾಷೆಯಾಗಿ ಉತ್ತರವನ್ನು ನೀಡುತ್ತಾ, ನಾನು ಯಾಕೆ ಕದಿಯಲಿ? ಇವಳು ಕದಿಯೋದು ಆಮೇಲೆ ಎಲ್ಲರಿಗೂ ಹೇಳಿಕೊಂಡು ಬರೋದು ಎಂದಿದ್ದಾರೆ. ಸೋನು ಆಗ ತಾನು ಸ್ಕೂಲ್ ನಲ್ಲಿ ಸ್ನೇಹಿತರ ಬಾಕ್ಸ್ ನಲ್ಲಿ ರಬ್ಬರ್ ಕದಿಯುತ್ತಿದ್ದೆ ಎಂದು, ತಾನು ರಬ್ಬರ್ ಅನ್ನು ಹಲ್ಲಲ್ಲಿ ಜಾಸ್ತಿ ಕಚ್ಚುತ್ತಿದ್ದ ವಿಚಾರವನ್ನು ಹೇಳಿದ್ದಾರೆ. ಸ್ನೇಹಿತರು ಹೊಸ ರಬ್ಬರ್ ತಂದಾಗ ಅದನ್ನು ಎತ್ತಿಕೊಂಡು ಮನೆಗೆ ಹೋಗುತ್ತಿದ್ದೆ ಎನ್ನುವ ವಿಷಯವನ್ನು ಸೋನು ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಹೀಗೆ ಸೋನು ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡ ಸಮಯದಲ್ಲೇ ಸೋಮಣ್ಣ ಮಾಚಿಮಾಡ ಸಹಾ ಆಸಕ್ತಿಕರ ವಿಚಾರ ಹಂಚಿಕೊಂಡಿದ್ದಾರೆ..

ಸೋಮಣ್ಣ ಮಾಚಿಮಾಡ ತಾನು ಸಹಾ ಕಳ್ಳತನ ಮಾಡಿದ್ದ ವಿಚಾರವನ್ನು ಹೇಳುತ್ತಾ, ತನಗೆ ಆಗ ಕೈಯಲ್ಲಿ ಸಂಪಾದನೆ ಇರಲಿಲ್ಲ, ಆ ದಿನಗಳಲ್ಲಿ ಮೈಸೂರಿನ ಕಾಳಿದಾಸ ರಸ್ತೆಯಲ್ಲಿ ಇದ್ದ ಒಂದು ಗಿಫ್ಟ್ ಸೆಂಟರ್ ನಲ್ಲಿ ಸಣ್ಣ ಸಣ್ಣ ಗ್ರೀಟಿಂಗ್ ಕಾರ್ಡ್ ಗಳು ಸಿಗುತ್ತಿದ್ದವು. ಅದನ್ನು ಕಳ್ಳತನ ಮಾಡಿದ್ದೆ ಎನ್ನುವ ವಿಚಾರವನ್ನು ಹೇಳಿಕೊಂಡಿದ್ದಾರೆ. ಹೀಗೆ ಸೋನು ಮತ್ತು ಸೋಮಣ್ಣ ಮಾಚಿಮಾಡ ತಾವು ಮಾಡಿದ್ದ ಕಳ್ಳತನಗಳ ವಿಚಾರವನ್ನು ಮಾತನಾಡಿಕೊಂಡಿದ್ದಾರೆ.

Leave a Comment