ಸೋನು ಬಿಡಿಸಿದ ಚಿತ್ರ ನೋಡಿ ರಾಕೇಶ್ ಸುಸ್ತೋ ಸುಸ್ತು: ಇಷ್ಟಕ್ಕೂ ಸೋನು ಬಿಡಿಸಿದ್ದೇನು ಗೊತ್ತಾ?

0 4

ಬಿಗ್ ಬಾಸ್ ಮನೆಯಲ್ಲಿ ಈ ವಾರದ ಟಾಸ್ಕ್ ಗಳಲ್ಲಿ ಒಂದು ಫನ್ನಿ ಟಾಸ್ಕನ್ನು ಸಹಾ ಮನೆಯ ಸದಸ್ಯರಿಗೆ ನೀಡಲಾಗಿತ್ತು. ಈ ವೇಳೆ ಈಗಾಗಲೇ ಮನೆಯಲ್ಲಿ ಇರುವ ಎರಡು ತಂಡದಲ್ಲಿ ಮೊದಲು ನಿಂತವರು ಚಿತ್ರವನ್ನು ನೋಡಿ, ಅದನ್ನು ತಾವು ಬಿಡಿಸಬೇಕು. ನಂತರ ಉಳಿದ ಮೂವರು ಮೊದಲು ಬರೆದವರು ಏನು ಬರೆದಿದ್ದಾರೆಯೋ ಆ ಚಿತ್ರವನ್ನು ಒಬ್ಬರ ನಂತರ ಇನ್ನೊಬ್ಬರು ಬರೆಯಬೇಕು. ಕಡೆಯಲ್ಲಿ ನಿಂತಿರುವವರು ಆ ಚಿತ್ರ ಏನು ಎನ್ನುವುದನ್ನು ಊಹೆ ಮಾಡಿ ಹೇಳಬೇಕು. ಈ ಆಟವನ್ನು 5 ರೌಂಡ್ ಗಳಲ್ಲಿ ನಡೆಸಲಾಯಿತು. ಪವರ್ ಸ್ಟಾರ್ ತಂಡದಿಂದ ಚೈತ್ರ ಚಿತ್ರ ಬಿಡಿಸುವ ಜವಾಬ್ದಾರಿಯನ್ನು ತೆಗೆದುಕೊಂಡರೆ, ಜಿಂಗಲಕಾ ತಂಡದಿಂದ ಸಾನ್ಯ ಚಿತ್ರವನ್ನು ನೋಡಿ ಬಿಡಿಸುವ ಜವಾಬ್ದಾರಿಯನ್ನು ಹೊತ್ತುಕೊಂಡರು.

ಈ ಟಾಸ್ಕ್ ನೋಡುಗರನ್ನು ಸಿಕ್ಕಾಪಟ್ಟೆ ನಗುವಂತೆ ಮಾಡಿದೆ. ಚೈತ್ರಾ ಚಿತ್ರ ನೋಡಿ ಬರೆದ ನಂತರ ಅದನ್ನು ನೋಡಿ ಜಯಶ್ರೀ ಅದಕ್ಕೆ ತಮ್ಮದೇ ಶೈಲಿಯಲ್ಲಿ ರೂಪವನ್ನು ಕೊಡುತ್ತಿದ್ದರು. ಇನ್ನು ಅವರ ನಂತರ ರೂಪೇಶ್ ಅದನ್ನು ತಮ್ಮದೇ ಆದ ರೀತಿಯಲ್ಲಿ ಅರ್ಥ ಮಾಡಿಕೊಂಡು ಬರೆದರೆ, ಅದನ್ನು ನೋಡಿದ ಸೋನು ಅದಕ್ಕೆ ಮತ್ಯಾವುದೋ ರೂಪವನ್ನು ಕೊಡುತ್ತಿದ್ದರು. ಕೊನೆಯಲ್ಲಿ ನಿಂತಿದ್ದಾರೆ ರಾಕೇಶ್ , ಸೋನು ತೋರಿಸಿದ ಚಿತ್ರದಲ್ಲಿರುವುದು ಏನು ಎಂದು ಕಂಡು ಹಿಡಿಯುವ ವೇಳೆಗೆ ಸಾಕು ಸಾಕಾಗಿ ಹೋಗಿತ್ತು. ಈ ಆಟದಲ್ಲಿ ಜಿಂಗಲಕಾ ತಂಡದವರು ಪವರ್ ಸ್ಟಾರ್ ತಂಡಕ್ಕಿಂತ ಇಂಥ ಚೆನ್ನಾಗಿ ಆಟವಾಡಿ ಮೂರು ಚಿತ್ರಗಳಿಗೆ ಸರಿಯಾದ ಉತ್ತರವನ್ನು ಹೇಳಿ ಟಾಸ್ಕ್ ಗೆದ್ದಿದ್ದಾರೆ.

ಪವರ್ ಸ್ಟಾರ್ ತಂಡದಲ್ಲಿ ಸೋನು ಚಿತ್ರವನ್ನು ನೋಡಿ ಅರ್ಥಮಾಡಿಕೊಂಡ ವಿಧಾನವೇ ಬಹಳ ಕಾಮಿಡಿ ಆಗಿತ್ತು. ಚೈತ್ರ ತೋರಿಸಿದ್ದು ಕ್ಯಾಮರಾ ಚಿತ್ರವಾದರೆ ಸೋನು ಬರೆದಿದ್ದು ಡಂಬಲ್ಸ್, ಕೋತಿಯ ಚಿತ್ರದ ಜಾಗದಲ್ಲಿ ಸೋನು ಬೆಕ್ಕನ್ನು ಬರೆದಿದ್ದರು, ನೂಡಲ್ಸ್ ಅನ್ನು ಮೂಲಂಗಿ ಅಂತೆ ಮತ್ತು ಬಟರ್ಫ್ಲೈ ಯನ್ನು ಕ್ಯಾರೆಟ್ ನಂತೆ ಬರೆದಿದ್ದರು. ಸೋನು ಬರೆದ ಈ ಚಿತ್ರಗಳಲ್ಲಿ ಇರುವುದು ಏನೆಂದು ಗುರುತಿಸುವ ವೇಳೆಗೆ ರಾಕೇಶ್ ಸುಸ್ತಾಗಿದ್ದರು. ಆದರೆ ಟೈಮ್ ಔಟ್ ಆಗುವ ಕಾರಣದಿಂದ ಚಿತ್ರ ನೋಡಿ ತಮಗೆ ಏನು ಅರ್ಥ ಆಯಿತಫ ಅದರ ಹೆಸರನ್ನು ರಾಕೇಶ್ ಹೇಳುತ್ತಿದ್ದರು.

ಪವರ್ ಸ್ಟಾರ್ ತಂಡ ಸೋತ ಕಾರಣ ಚೈತ್ರಾ ಬೇಸರದಲ್ಲಿ ಕುಳಿತಿರುವಾಗ, ಜಯಶ್ರೀ ಅವರ ಬಳಿ ಬಂದು ಕ್ಷಮೆ ಕೇಳಿದ್ದಾರೆ. ಆಗ ಅಲ್ಲಿಗೆ ಬಂದ ಸೋನು ತನ್ನದೇನು ತಪ್ಪೇ ಇಲ್ಲವೇನೋ ಎನ್ನುವಂತೆ ಎಲ್ಲರ ಮೇಲೆ ಎಗರಾಡಿ, ಆಟದಲ್ಲಿ ನಾನೇ ಮುಂದೆ ನಿಂತು ಕೊಳ್ಳಬೇಕಾಗಿತ್ತು, ನಿನ್ನನ್ನು ನಿಲ್ಲಿಸಿ ತಪ್ಪು ಮಾಡಿದೆವು ಎಂದು ಚೈತ್ರ ಅವರ ಮೇಲೆ ಹಾರಾಡಿದ್ದಾರೆ. ಅನಂತರ ತಂಡದ ಸದಸ್ಯರು ಸೋಲುವುದಕ್ಕೆ ತಮ್ಮಿಂದ ತಪ್ಪು ಎಲ್ಲಾಯಿತು, ಸೋಲಿಗೆ ಕಾರಣವೇನು ಎಂದು ಒಂದಷ್ಟು ವಿಚಾರಗಳನ್ನು ಮಾತನಾಡಿಕೊಂಡು ಸುಮ್ಮನಾಗಿದ್ದಾರೆ. ಆದರೆ ಸೋನು ಬರೆದ ಚಿತ್ರಗಳು ಮಾತ್ರ ಅಬ್ಬಾ ಶಾಕಿಂಗ್ ಆಗಿದ್ದವು.

Leave A Reply

Your email address will not be published.