ಸೋನು ಬಾಯಿಗೆ ನೂರು ತೆಂಗಿನಕಾಯಿ ಹೊಡಿತಾರಂತೆ ಆರ್ಯವರ್ಧನ್ ಗುರೂಜಿ: ಏನಿದು ವಿಷಯ?

Written by Soma Shekar

Published on:

---Join Our Channel---

ಬಿಗ್ ಬಾಸ್ ಓಟಿಟಿ ಯಲ್ಲಿ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯಲ್ಲಿ ಮನರಂಜನೆಯನ್ನು ನೀಡುತ್ತಿರುವ ಸ್ಪರ್ಧಿ ಆರ್ಯವರ್ಧನ್ ಗುರೂಜಿ ಹೊರ ಜಗತ್ತಿನಲ್ಲಿ ಸಂಖ್ಯಾ ಶಾಸ್ತ್ರಜ್ಞ ಹಾಗೂ ಜ್ಯೋತಿಷ್ಯ ನುಡಿಯುವ ಪಂಡಿತರು ಎಂದೇ ಹೆಸರನ್ನು ಗಳಿಸಿರುವ ಜನಪ್ರಿಯ ವ್ಯಕ್ತಿಯಾಗಿದ್ದಾರೆ. ಊರಿಗೆಲ್ಲಾ ಭವಿಷ್ಯ ಹೇಳುವ ಆರ್ಯವರ್ಧನ್ ಗುರೂಜಿ ಅವರಿಗೆ ಈಗ ಬಿಗ್ ಬಾಸ್ ಮನೆಯಲ್ಲಿ ಸೋನು ಶ್ರೀನಿವಾಸ್ ಗೌಡ ಅವರು ಭವಿಷ್ಯವಾಣಿಯನ್ನು ನುಡಿದಿದ್ದಾರೆ. ಆರ್ಯವರ್ಧನ್ ಗುರೂಜಿ ಅವರ ಭವಿಷ್ಯವಾಣಿಯು ನಿಜವಾಗುವುದೋ, ಇಲ್ಲವೋ ಎನ್ನುವ ವಿಚಾರ ಒಂದು ಕಡೆಯಾದರೆ, ಒಂದು ವೇಳೆ ಸೋನು ನುಡಿದ ಭವಿಷ್ಯವಾಣಿ ನಿಜವಾದರೆ, ಸೋನು ಗೌಡ ಬಾಯಿಗೆ ನೂರು ತೆಂಗಿನಕಾಯಿ ಒಡೆಯೋದಾಗಿ ಆರ್ಯವರ್ಧನ್ ಗುರೂಜಿ ಅವರು ಹೇಳಿದ್ದಾರೆ.

ಆರ್ಯವರ್ಧನ್ ಗುರೂಜಿ ಅವರ ದೇಹ ಗಾತ್ರದ ವಿಚಾರ ಎಲ್ಲರಿಗೂ ತಿಳಿದೇ ಇದೆ. ಆದರೆ ಇದರ ಹೊರತಾಗಿಯೂ ಸಹಾ ಅವರು ಮನೆಯಲ್ಲಿ ಒಂದಲ್ಲಾ ಒಂದು ಚಟುವಟಿಕೆಯಲ್ಲಿ ಸಕ್ರಿಯವಾಗಿ ಇರುತ್ತಾರೆ. ಮನೆಯ ಕೆಲಸ ಹಾಗೂ ಟಾಸ್ಕ್ ಎರಡರಲ್ಲೂ ಸಹಾ ಉತ್ತಮ ಪ್ರದರ್ಶನ ನೀಡುತ್ತಿರುವ ಅವರು, ಆಗಾಗ ಮನೆಯನ್ನು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚಿಗಷ್ಟೇ ಅವರು, ಮನೆಯಲ್ಲಿ ತಿಂದುಂಡು ಆರಾಮಾಗಿದ್ದವನನ್ನು ಕರ್ಕೊಂಡು ಬಂದ್ ಯಾಕಪ್ಪಾ ಹಿಂಸೆ ಕೊಡ್ತಾ ಇದ್ದೀರಿ ಎಂದು ಬಿಗ್ ಬಾಸ್ ಮನೆಯಲ್ಲಿ ಹೇಳಿದ್ದುಂಟು. ತಮಾಷೆಯ ನಡುವೆಯೇ ಬೇಸರವನ್ನು ಅವರು ಹಂಚಿಕೊಂಡಿದ್ದಾರೆ.

ಗುರೂಜಿ ಅವರು ಪದೇ ಪದೇ, ಯಾಕಪ್ಪ ನನ್ನ ಇಲ್ಲಿ ಕರ್ಕೊಂಡು ಬಂದ್ರಿ ಎಂದು ಹೇಳಿದಾಗ, ಅದಕ್ಕೆ ತನ್ನ ಮಾತು ಸೇರಿಸಿದ ಸೋನು ಶ್ರೀನಿವಾಸ್ ಗೌಡ ಅವರು, “ಅಷ್ಟೊಂದು ನೊಂದ್ಕೋಬೇಡಿ, ಈ ಶನಿವಾರ ನಿಮ್ಮನ್ನು ಮನೆಗೆ ಕಳಿಸ್ತಾರೆ ಬಿಡಿ” ಎಂದು ಹೇಳಿದ್ದಾರೆ. ಸೋನು ಮಾತಿಗೆ ಪ್ರತಿಕ್ರಿಯೆ ನೀಡಿದ ಗುರೂಜಿ ಅವರು, ಅಯ್ಯೋ, ಹಾಗ್ ಏನಾದರೂ ಮಾಡಿದರೆ, ನಿನ್ನ ಬಾಯಿಗೆ ನೂರು ತೆಂಗಿನಕಾಯಿ ಒಡೆಯುತ್ತೇನೆ ಎಂದು ಹೇಳಿದ್ದಾರೆ ಆರ್ಯವರ್ಧನ್ ಗುರೂಜಿ ಅವರು. ಹಾಗಾದರೆ ಸೋನು ಭವಿಷ್ಯ ನಿಜವಾಗುತ್ತಾ? ಅಥವಾ ಗುರೂಜಿ ಅವರು ಸೇಫ್ ಆಗಿ ಮನೆಯಲ್ಲೇ ಉಳಿಯುತ್ತಾರಾ? ಎನ್ನುವುದನ್ನು ಕಾದು ನೋಡಬೇಕಾಗಿದೆ.

Leave a Comment