ಸೋನು ತುಂಬಾ ಒಳ್ಳೇ ಹುಡುಗಿ: ಸೋನು ಬಗ್ಗೆ ಕೆಟ್ಟದಾಗಿ ಮಾತಾಡೋರ ಬಗ್ಗೆ ನಟ ಅರ್ಜುನ್ ರಮೇಶ್ ಅಸಮಾಧಾನ

Entertainment Featured-Articles Movies News
60 Views

ಕನ್ನಡದ ಕಿರುತೆರೆಯ ಬಹುದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಈ ಬಾರಿ ಓಟಿಟಿಯಲ್ಲಿ ತನ್ನ ಮೊದಲನೇ ಸೀಸನ್ ಆರಂಭಿಸಿದ ಭರ್ಜರಿ ಎರಡು ಬಾರಗಳನ್ನು ಮುಗಿಸಿದೆ.‌ ಎರಡು ಎಲಿಮಿನೇಷನ್ ಸಹಾ ಮುಗಿದಾಗಿದೆ. ಇನ್ನು ನಾಲ್ಕು ವಾರಗಳು ಮಾತ್ರವೇ ಉಳಿದಿದ್ದು, ಮನೆಯಲ್ಲಿರುವ ಸದಸ್ಯರ ನಡುವೆ ಟಫ್ ಪೈಪೋಟಿ ಏರ್ಪಡಲಿದೆ. ಬಿಗ್ ಬಾಸ್ ಮನೆಯಲ್ಲಿ ಈ ಬಾರ ಇಬ್ಬರು ಸದಸ್ಯರು ಹೊರ ಬಂದಿದ್ದಾರೆ. ಒಬ್ಬರು ಎಲಿಮಿನೇಷನ್ ಎದುರಿಸಿ ಮನೆಯಿಂದ ಹೊರ ಬಂದಿದ್ದರೆ, ಮತ್ತೊಬ್ಬರು ದೈಹಿಕ ಸಮಸ್ಯೆಯ ಕಾರಣದಿಂದಾಗಿ ಮನೆಯಿಂದ ಹೊರ ಬಂದಿದ್ದಾರೆ. ಎರಡು ವಾರದಲ್ಲಿ ಒಟ್ಟು ನಾಲ್ಕು ಜನರು ಮನೆಯಿಂದ ಹೊರ ಬಂದಿದ್ದು, ಮನೆಯಲ್ಲಿ ಇನ್ನು 12 ಜನ ಸದಸ್ಯರು ಮಾತ್ರವೇ ಉಳಿದಿದ್ದು, ನಾಲ್ಕು ವಾರದಲ್ಲಿ ಯಾರೆಲ್ಲಾ ಹೊರ ಬರಲಿದ್ದಾರೆ ಎಂಬುದು ಈಗ ಕುತೂಹಲ ಮೂಡಿಸಿದೆ.

ಈ ವಾರ ಬಿಗ್ ಬಾಸ್ ಮನೆಯಿಂದ ನಾಮಿನೇಟ್ ಆಗಿದ್ದ ಸದಸ್ಯರಲ್ಲಿ ಸ್ಪೂರ್ತಿ ಗೌಡ ಅವರು ಕಡಿಮೆ ಓಟುಗಳನ್ನು ಪಡೆದ ಕಾರಣ ಎಲಿಮಿನೇಷನ್ ಎದುರಿಸಿ ಮನೆಯಿಂದ ಹೊರಗೆ ಬಂದಿದ್ದಾರೆ. ಅದೇ ವೇಳೆಯ ಮನೆಯ ಮತ್ತೊಬ್ಬ ಸದಸ್ಯ ಅರ್ಜುನ್ ರಮೇಶ್ ಅವರು ಕ್ಯಾಪ್ಟನ್ಸಿ ಟಾಸ್ಕ್ ವೇಳೆ ಭುಜಕ್ಕೆ ತೀವ್ರವಾಗಿ ಪೆಟ್ಟು ಮಾಡಿಕೊಂಡಿದ್ದರು. ಹೇಗೋ ಒಂದು ವಾರ ಮನೆಯಲ್ಲಿ ಕಳೆದ ಅವರು, ಅನಂತರ ಅವರ ಭುಜದ ನೋವು ಕಡಿಮೆಯಾಗದ ಕಾರಣ ಅವರು ಅನಿವಾರ್ಯವಾಗಿ ಮನೆಯಿಂದ ಹೊರಗೆ ಬರಲೇಬೇಕಾಯಿತು. ಆದ್ದರಿಂದಲೇ ಅವರು ನಾಮಿನೇಟ್ ಆಗದೇ ಇದ್ದರೂ ಮನೆಯಿಂದ ಹೊರಗೆ ಬಂದಿದ್ದರು.

ಮನೆಯಿಂದ ಹೊರ ಬಂದ ಮೇಲೆ ಅರ್ಜುನ್ ರಮೇಶ್ ಅವರು ಮಾದ್ಯಮಗಳಿಗೆ ಸಂದರ್ಶನವನ್ನು ನೀಡಲು ಪ್ರಾರಂಭಿಸಿದ್ದಾರೆ. ಈ ವೇಳೆ ಅವರು ಸಂದರ್ಶನವೊಂದರಲ್ಲಿ ಅವರು ಮಾತನಾಡುವ ವೇಳೆ ಮನೆಯ ಸ್ಪರ್ಧಿ, ರೀಲ್ಸ್ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ಅವರ ಬಗ್ಗೆ ಮಾತನಾಡಿದ್ದಾರೆ. ಸೋನು ಗೌಡ ಅವರ ಬಗ್ಗೆ ನೆಗೆಟಿವ್ ಆಗಿ ಮಾತನಾಡುವವರ ಬಗ್ಗೆ ಅರ್ಜುನ್ ರಮೇಶ್ ಅವರು ಸಿಟ್ಟನ್ನು ವ್ಯಕ್ತಪಡಿಸಿದ್ದಾರೆ. ಅವರು ಮಾತಾನಾಡುವ ವೇಳೆ, ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಅವರ ಬಗ್ಗೆ ಏನೂ ಗೊತ್ತಿಲ್ಲದೇ ಅಳೆಯಬೇಡಿ ಎನ್ನುವ ಮಾತನ್ನು ಅವರು ಹೇಳಿದ್ದಾರೆ.

ಇದೇ ವೇಳೆ ಅವರು, ನನಗೆ ಗೊತ್ತಿರುವ ಹಾಗೆ ಸೋನು ಅವರು 2 ವರ್ಷ ವಯಸ್ಸಿನಲ್ಲೇ ಅವರ ತಂದೆಯನ್ನು ಕಳೆದುಕೊಂಡಿದ್ದಾರೆ. ಅವರಿಗೆ ತಂದೆಯ ಪ್ರೀತಿ ಸಿಕ್ಕಿಲ್ಲ. ಆದ ಕಾರಣ ಆಕೆಯಲ್ಲಿ ಒಂದಷ್ಟು ಒರಟುತನ ಬಿಟ್ಟರೆ ಅವರು ತುಂಬಾ ಒಳ್ಳೆಯ ಹುಡುಗಿ ಎಂದು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಸೋನು ಗೌಡ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಗಮನ ಸೆಳೆಯುತ್ತಿದ್ದಾರೆ. ಎರಡು ವಾರವೂ ನಾಮಿನೇಟ್ ಆಗಿದ್ದ ಅವರು ಎರಡೂ ವಾರವೂ ಪ್ರೇಕ್ಚಕರ ಓಟಿನಿಂದ ಸೇಫ್ ಆಗಿ ಜರ್ನಿಯನ್ನು ಮುಂದುವರೆಸಿದ್ದಾರೆ. ಇನ್ನು ಎಷ್ಟು ವಾರ ಸೋನು ಜರ್ನಿ ಸಾಗಲಿದೆ ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *