ಸೋನು ತಿಂಗಳ ಸಂಪಾದನೆ ಇಷ್ಟೊಂದಾ? ಟ್ರೋಲ್ ಪೇಜ್ ಗಳಿಂದಾನೇ ಸ್ಟಾರ್ ಆದ ಸೋನು ಶ್ರೀನಿವಾಸಗೌಡ

Entertainment Featured-Articles Movies News

ಪ್ರಸ್ತುತ ಸಮಯ ಸೋಶಿಯಲ್ ಮೀಡಿಯಾಗಳು ಅಬ್ಬರಿಸುತ್ತಿರುವ ಸಮಯವಾಗಿದೆ. ಇಂದು ಸೋಶಿಯಲ್ ಮೀಡಿಯಾಗಳು ಪ್ರಬಲ ಮಾದ್ಯಮಗಳಾಗಿವೆ. ಯಾರು ಯಾವಾಗ ಬೇಕಾದರೂ ಫೇಮಸ್ ಆಗಿ ಬಿಡಬಹುದು. ಆ ಮಟ್ಟಕ್ಕೆ ಸೋಶಿಯಲ್ ಮೀಡಿಯಾಗಳ ಕ್ರೇಜ್ ಇದೆ. ಅನೇಕರು ಸೋಶಿಯಲ್ ಮೀಡಿಯಾಗಳಿಂದಾಗಿಯೇ ರಾತ್ರೋರಾತ್ರಿ ಸ್ಟಾರ್ ಗಳಾಗಿ ಮಿಂಚಿದ್ದಾರೆ. ಅಲ್ಲದೇ ಟಿಕ್ ಟಾಕ್ ಬ್ಯಾನ್ ಆಗುವುದಕ್ಕೆ ಮೊದಲು ಸಹಾ ಅನೇಕರು ಅದರ ಮೂಲಕವೇ ದೊಡ್ಡ ಸ್ಟಾರ್ ಗಳಾಗಿ ಮಿಂಚಿದ್ದಾರೆ. ಆದರೆ ಟಿಕ್ ಟಾಕ್ ಬ್ಯಾನ್ ಆದ ಮೇಲೆ ಕೆಲವರು ಕಣ್ಮರೆಯಾದರು.

ಆದರೆ ಕೆಲವರು ಮಾತ್ರ ಟಿಕ್ ಟಾಕ್ ಬ್ಯಾನ್ ನಂತರವೂ ಕೂಡಾ ತಮ್ಮ ಜನಪ್ರಿಯತೆ ಉಳಿಸಿಕೊಂಡಿದ್ದಾರೆ. ಇನ್ನೂ ಟ್ರೆಂಡ್ ನಲ್ಲಿದ್ದಾರೆ. ಸೋಶಿಯಲ್ ಮೀಡಿಯಾಗಳ ಮೂಲಕ ಭರ್ಜರಿ ಕಮಾಯಿಯನ್ನು ಸಹಾ ಮಾಡುತ್ತಿದ್ದಾರೆ. ಅಂತಹವರಲ್ಲಿ ಒಬ್ಬರು ಸೋನು ಶ್ರೀನಿವಾಸ್ ಗೌಡ. ಹೌದು, ಟಿಕ್ ಟಾಕ್ ಮೂಲಕ ಸಾಕಷ್ಟು ಸುದ್ದಿ ಮಾಡಿದ ಸೋನು ಶ್ರೀನಿವಾಸ ಗೌಡ ಅದು ಬ್ಯಾನ್ ಆದ ಮೇಲೂ ಸಹಾ ತಮ್ಮ ಇನ್ಸ್ಟಾಗ್ರಾಂ ರೀಲ್ಸ್ ನ ಮೂಲಕ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡು ಬರುತ್ತಿದ್ದಾರೆ.

ಸೋನು ಶ್ರೀನಿವಾಸ ಗೌಡ ಅವರ ಬಗ್ಗೆ ತಿಳಿಯದೇ ಇರುವ ಜನರ ಸಂಖ್ಯೆ ತೀರಾ ಕಡಿಮೆ ಎಂದೇ ಹೇಳಬಹುದು. ಹೀಗೆ ಸದಾ ವೀಡಿಯೋ ಮಾಡುವ ಸೋನು ಶ್ರೀನಿವಾಸ ಗೌಡ ಅವರ ಗಳಿಕೆ ಹೇಗೆ? ಅವರು ಎಷ್ಟು ಹಣವನ್ನು ಗಳಿಸುತ್ತಾರೆ ? ಎನ್ನುವ ಪ್ರಶ್ನೆಗಳು ಅನೇಕರಲ್ಲಿ ಇದೆ. ಇನ್ನು ಸೋನು ಗೌಡ ಅವರು ತಮ್ಮ ಇನ್ಸ್ಟಾಗ್ರಾಂ ರೀಲ್ಸ್ ನ‌ ಕಾರಣದಿಂದಲೇ ಸದ್ದು ಮಾಡಿದವರು. ಆದರೆ ಅದಕ್ಕಿಂತ ಹೆಚ್ಚು ಜನಪ್ರಿಯತೆ ಪಡೆದಿದ್ದು ಟ್ರೋಲ್ ಪೇಜ್ ಗಳಿಂದ ಎನ್ನುವುದನ್ನು ಸಹಾ ತಿರಸ್ಕರಿಸುವ ಹಾಗಿಲ್ಲ‌.

ಹೀಗೆ ಸೋಶಿಯಲ್ ಮೀಡಿಯಾ ಮೂಲಕ ಸ್ಟಾರ್ ಆಗಿರುವ ಸೋನು ಶ್ರೀನಿವಾಸ ಗೌಡ ಅವರು ಈಗಾಗಲೇ ಕೆಲವೊಂದು ಆಲ್ಬಂ ಹಾಡುಗಳಲ್ಲಿ, ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶಾರ್ಟ್ ಮೂವೀಸ್ ನಲ್ಲಿ ನಟಿಸಿರುವ ಅವರು ಸಿನಿಮಾಗಳಲ್ಲಿ ಸಹಾ ಅವಕಾಶವನ್ನು ಪಡೆದುಕೊಂಡಿದ್ದಾರೆ. ಸೋನು ಗೌಡ ಅವರು ತಿಂಗಳಿಗೆ ಸುಮಾರು ಒಂದರಿಂದ ಎರಡು ಲಕ್ಷ ರೂ.ಗಳನ್ನು ಗಳಿಸುತ್ತಾರೆ ಎನ್ನಲಾಗಿದೆ. ಇದಲ್ಲದೇ ಅವರು ಜಾಹೀರಾತು ಮತ್ತು ಪ್ರಮೋಷನ್ ಮೂಲಕ ಸಹಾ ಹಣ ಗಳಿಸುತ್ತಾರೆ ಎನ್ನಲಾಗಿದೆ.

ಸೋನು ಶ್ರೀನಿವಾಸ ಗೌಡ ಅವರು ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿದೆ ಎನ್ನುವ ಮಾತುಗಳನ್ನು ಸಹಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಕೆಲವರು ನಿಜವಾಗಿಯೂ ಈಕೆ ವೀಡಿಯೋಗಳ ಮೂಲಕವೇ ಇಷ್ಟೊಂದು ಹಣವನ್ನು ಗಳಿಸುತ್ತಾರೆಯೇ ಎನ್ನುವ ಅನುಮಾನವನ್ನು ಸಹಾ ವ್ಯಕ್ತಪಡಿಸಿರುವುದುಂಟು. ಇನ್ನು ಸೋನು ಶ್ರೀನಿವಾಸ ಗೌಡ ಅವರ ಗಳಿಕೆ ಕೂಡಾ ಇದು ನಿರ್ದಿಷ್ಟ ಎನ್ನಲಾಗಿಲ್ಲ. ಆದರೆ ಈ ಬಗ್ಗೆ ಕೆಲವೊಂದು ಮಾದ್ಯಮಗಳು ಹೇಳಿರುವ ಸುದ್ದಿ ಇದಾಗಿದೆ.

Leave a Reply

Your email address will not be published.