ಬಿಗ್ ಬಾಸ್ ಮನೆಗೆ ಎಂಟ್ರಿ ನೀಡುವಾಗ ಒಂಟಿಯಾಗಿ ಹೋಗಿ, ಮನೆಯೊಳಗೆ ಜೋಡಿಯಾದವರ ಅನೇಕ ಉದಾಹರಣೆಗಳು ಉಂಟು. ಪ್ರಸ್ತುತ ಓಟಿಟಿಯಲ್ಲಿ ಪ್ರಸಾರ ಆಗುತ್ತಿರುವ ಬಿಗ್ ಬಾಸ್ ಕನ್ನಡದ ಮೊದಲನೇ ಸೀಸನ್ ನಲ್ಲಿ ಸಹಾ ಸೋನು ಶ್ರೀನಿವಾಸ್ ಗೌಡ ಮತ್ತು ರಾಕೇಶ್ ಅಡಿಗ ನಡುವೆ ಒಂದು ವಿಶೇಷ ಆತ್ಮೀಯತೆ ಹಾಗೂ ಒಡನಾಟ ಮೂಡಿರುವುದು ಎಲ್ಲರಿಗೂ ತಿಳಿದೇ ಇದೆ. ಬಹಳ ಆತ್ಮೀಯವಾಗಿ ಇದ್ದ ಈ ಜೋಡಿಯ ನಡುವಿನ ಸ್ನೇಹ ಮತ್ತು ಆತ್ಮೀಯತೆಯಲ್ಲಿ ಐದನೇ ವಾರದ ಕೊನೆಯಲ್ಲಿ ಒಂದು ಸಣ್ಣ ಅಂತರ ಮೂಡಿದಂತೆ ಕಾಣುತ್ತಿದೆ. ಇವರ ನಡುವಿನ ಈ ಹೊಸ ಬೆಳವಣಿಗೆ ಈಗ ಎಲ್ಲರಿಗೂ ಅಚ್ಚರಿ ಯನ್ನು ಸಹಾ ಮೂಡಿಸಿದೆ.
ರಾಕೇಶ್ ಮತ್ತು ಸೋನು ನಡುವಿನ ಸ್ನೇಹದಿಂದಾಗಿ ಅವರಿಬ್ಬರು ಇಷ್ಟು ದಿನ ಏಕವಚನದಲ್ಲೇ ಮಾತನಾಡಿಕೊಳ್ಳುತ್ತಿದ್ದರು. ಆದರೆ ಈಗ ರಾಕೇಶ್ ಅಡಿಗ ಇದ್ದಕ್ಕಿದ್ದ ಹಾಗೆ ತಮ್ಮ ವರಸೆಯನ್ನು ಬದಲಿಸಿದ್ದಾರೆ. ರಾಕೇಶ್ ಮಾತನಾಡುತ್ತಾ ‘ಇನ್ಮೇಲೆ ಹೋಗಿ ಬನ್ನಿ ಅಂತ ಕರೆಯಬೇಕು’ ಎಂದು ಹೇಳಿದ್ದಾರೆ. ಈಗ ಒಂದು ಹುಡುಗಿ ಜೊತೆ ಕ್ಲೋಸ್ ಆಗಿ ಗುರುತಿಸಿಕೊಂಡು, ಅನಂತರ ಟಿವಿ ಬಿಗ್ ಬಾಸ್ ಗೆ ಹೋಗುವ ಅವಕಾಶ ಸಿಕ್ಕರೆ ಅಲ್ಲಿ ಬೇರೆ ಹುಡುಗಿಯ ಜೊತೆ ಕನೆಕ್ಷನ್ ಬೆಳೆಯಲ್ಲ ಎಂದು ಹೇಳಿದ್ದಾರೆ. ಈ ವಿಚಾರವಾಗಿ ರಾಕೇಶ್ ಮತ್ತು ಸೋನು ನಡುವೆ ಒಂದಷ್ಟು ಮಾತುಕಥೆಯನ್ನು ನಡೆಸಿದ್ದಾರೆ.
ರಾಕೇಶ್ ಅಡಿಗ ಅವರಲ್ಲಿ ಆದ ಈ ದಿಢೀರ್ ಬದಲಾವಣೆಯನ್ನು ಸೋನು ಬಹಳ ಕೂಲ್ ಆಗಿಯೇ ಸ್ವೀಕರಿಸಿದ್ದು, ಫ್ಲರ್ಟ್ ಯಾಕೆ ಮಾಡಬೇಕು? ಹಾಗೆ ಬೇಕೆಂದರೆ ಟೈಮ್ ಪಾಸ್ ಮಾಡೋ ಹುಡುಗಿಯರು ಸಿಕ್ತಾರೆ ಎಂದು ಸೋನು ಗೌಡ ಹೇಳಿದ್ದಾರೆ. ಇದೇ ವೇಳೆ ಸೋನು ಪ್ರೀತಿ, ಕಾಳಜಿ ವಿಚಾರದಲ್ಲಿ ತಮ್ಮ ನಿಲವು ಏನು ಎಂಬುದನ್ನು ಸಹಾ ಈ ವೇಳೆ ತಿಳಿಸಿದ್ದಾರೆ. ಇನ್ನು ಈ ವೇಳೆ ಸೋನು, ಅಪ್ಪ ದೇವರೇ, ನೀನು ಇರುವುದೇ ನಿಜವಾದರೆ, ನನಗೆ ಈಗ 22 ವರ್ಷ ವಯಸ್ಸು, ಸಖತ್ ಆಗಿ ಇರುವ 24 ವರ್ಷದ ಹುಡುಗನನ್ನು ಕಳಿಸಿಕೊಡು ದೇವರೇ’ ಎಂದು ಸೋನು ಬಿಗ್ ಬಾಸ್ ಮನೆಯಲ್ಲಿ ಬೇಡಿಕೆ ಇಟ್ಟಿದ್ದಾರೆ.
ಆಗ ರಾಕೇಶ್ ‘ಎದುರಲ್ಲೇ ಇದ್ದಾನಲ್ಲ’ ಎಂದು ಜಶ್ವಂತ್ ಕಡೆಗೆ ಕೈ ತೋರಿಸಿದ್ದಾರೆ. ಆಗ ಸೋನು ‘ಅವನು ಬೇಡ, ಅವನು ಯಂಗೇಜ್ ಆಗಿದ್ದಾನೆ’ ಅಂತ ಸೋನು ಹೇಳಿದಾಗ ಜಶ್ವಂತ್, ನಾನು ಯಂಗೇಜ್ಡ್ ಅಲ್ಲ, ಕಮಿಟೆಡ್’ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಸೋನು ಆಗ, ನನಗೆ ಲವ್ ಅಂದರೆ ಅಸಹ್ಯ. ಆದರೆ ಪಾರ್ಟ್ನರ್ ಬೇಕು. ಇಬ್ಬರೂ ಪರಸ್ಪರ ಕೇರ್ ಮಾಡುತ್ತೇವೆ. ಲವ್ವಲ್ಲಿ ಏನೂ ಸಿಗಲ್ಲ’ ಎಂದು ಸೋನು ಹೇಳಿದ್ದು, ‘ಕಾಳಜಿ ತೋರಿಸಲು 24 ವರ್ಷದ ಹುಡುಗನೇ ಯಾಕೆ ಬೇಕು? ಎಂದು ರಾಕೇಶ್ ಅಡಿಗ ಪ್ರಶ್ನಿಸಿದ್ದಾರೆ.