ಸೋನುಗೆ ಟಾಟಾ ಹೇಳಿ, ಸಾನ್ಯಾ ನನ್ನ ಲವರ್ ಎಂದ ರಾಕೇಶ್: ಬಿಗ್ ಬಾಸ್ ಮನೇಲಿ ಶುರುವಾಗ್ತಿದೆ ಪ್ರೇಮ ಪುರಾಣ

0 1

ಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ ಓಟಿಟಿಯಿಂದ ಆಯ್ಕೆಯಾಗಿ ಬಂದಿರುವ ಸ್ಪರ್ಧಿ ನಟ ರಾಕೇಶ್ ಅಡಿಗ ಅವರು ಬಿಗ್ ಬಾಸ್ ಮನೆಯಲ್ಲಿ ದಿನವೂ ಪ್ರೇಮದ ಆಟ ಆಡುತ್ತಿರುವ ಹಾಗೆ ಕಾಣುತ್ತಿದೆ. ರಾಕೇಶ್ ಎದುರಿಗೆ ಬಂದ ಹುಡುಗಿಯರ ಜೊತೆಗೆ ಅವರ ಪ್ರೇಮ, ಸಲ್ಲಾಪ ನಡೆಯುವ ಹಾಗೆ ಆಗಿದೆ. ಈ ಹಿಂದೆ ಓಟಿಟಿ ಬಿಗ್ ಬಾಸ್ ನಲ್ಲಿ ರಾಕೇಶ್ ಸೋನು ಗೌಡಗೆ ಹತ್ತಿರವಾಗಿದ್ದರು. ನಡುನಡುವೆ ಜಯಶ್ರೀ ಜೊತೆ ಸಹಾ ಆತ್ಮೀಯವಾಗಿದ್ದರು. ಆಗಾಗ ಇಬ್ಬರಿಗೂ ಮುತ್ತು ಕೊಟ್ಟು ಪ್ರೀತಿ ತೋರಿಸುತ್ತಿದ್ದರು. ಆದರೆ ಈಗ ಟಿವಿ ಬಿಗ್ ಬಾಸ್ 9 ರಲ್ಲಿ ರಾಕೇಶ್ ಗೆ ಇನ್ನೂ ಯಾರೂ ಸಿಕ್ಕಿಲ್ಲ. ಯಾರೊಂದಿಗೂ ಅವರೂ ಇನ್ನೂ ಕನೆಕ್ಟ್ ಆಗಿಲ್ಲ. ರಾಕೇಶ್ ಸದ್ಯ ಪ್ರೇಮಿಯ ಹುಡುಕಾಟದಲ್ಲಿ ಇರುವಂತೆ ಕಂಡಿದೆ.

ಬಿಗ್ ಬಾಸ್ ಮನೆಯಲ್ಲಿ ಹೊಸ ಹಕ್ಕಿಗಾಗಿ ಹುಡುಕಾಟ ನಡೆಸಿದ್ದ ರಾಕೇಶ್ ನಟಿ ಅಮೂಲ್ಯ ಗೌಡ ಅವರ ಹಿಂದೆ ಮುಂದೆ ಸುತ್ತಿದ್ದರು. ಆದರೆ ಈಗ ಅವೆಲ್ಲವುಗಳ ನಡುವೆ ರಾಕೇಶ್ ಹೇಳಿದ ಮಾತೊಂದು ಈಗ ಅಚ್ಚರಿ ಯನ್ನು ಮೂಡಿಸಿದೆ. ಈ ವಿಚಾರವಾಗಿ ಮನೆಯಲ್ಲಿ ಒಂದು ಚರ್ಚೆ ಸಹಾ ನಡೆದಿದೆ. ಸಾನ್ಯಾ ಅಯ್ಯರ್ ಅವರು ಕುಡಿದ ಲೋಟದಲ್ಲೇ ರಾಕೇಶ್ ಅವರು ಟೀ ಕುಡಿದಿದ್ದಾರೆ. ಆಗ ಅದನ್ನು ನೋಡಿದ ಆರ್ಯವರ್ಧನ್ ಗುರೂಜಿ, ಇದೇನಿದು ಆ ಹುಡುಗಿ ಕುಡಿದು ಇಟ್ಟ ಕಪ್ ನಲ್ಲಿ ಟೀ ಕುಡಿತಿದ್ದೀಯಾ ಎಂದು ಕೇಳಿದ್ದಾರೆ. ಆಗ ರಾಕೇಶ್ ಯಾವುದೇ ಆಲೋಚನೆ ಮಾಡದೇ ಸಾನ್ಯಾ ನನ್ನ ಲವರ್ ಎಂದು ಹೇಳಿ ಬಿಟ್ಟಿದ್ದಾರೆ.

ಇದು ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದೆ. ಇನ್ನು ರಾಕೇಶ್ ಅಡಿಗ ಅವರ ಪ್ರೇಮ ಪುರಾಣದ ಬಗ್ಗೆ ಅಚ್ಚರಿಯಿಂದ ನಟಿ ದೀಪಿಕಾ ದಾಸ್ ಕೇಳಿದಾಗ, ರಾಕೇಶ್ ಬಹಳಷ್ಟು ಜನರನ್ನು ಪ್ರೀತಿಸಿದ್ದು ನಿಜ ಯಾರೊಂದಿಗೂ ಬ್ರೇಕಪ್ ಆಗಿಲ್ಲ. ಪ್ರೀತಿ ಕೊನೆಯಾಗಲ್ಲ ಎಂದಿದ್ದಾರೆ. ಅಮೂಲ್ಯ ಹಾಗಾದ್ರೆ ಇತ್ತೀಚಿಗೆ ನಿಮ್ಮ ಹೆಸರು ಒಬ್ಬರ ಜೊತೆ ಸೇರಿಕೊಂಡಿದ್ದು ನಿಜಾನಾ ಎಂದಾಗ ರಾಕೇಶ್ ಅದಕ್ಕೂ ಹೌದು ಎಂದಿದ್ದಾರೆ. ತಾನು ಪ್ರೀತಿಸಿದವರಿಗೆ ಮದುವೆ ಆಗಿದೆ, ಮೂವ್ ಆನ್ ಆಗಿದ್ದಾರೆ. ಆದರೆ ಈಗಲೂ ನಾವು ಚೆನ್ನಾಗಿದ್ದೇವೆ ಎನ್ನುವ ಮಾತು ಹೇಳಿದ್ದಾರೆ.

ನಂತರ ಲವ್ ವಿಚಾರವಾಗಿ ಗುರೂಜಿ ಮತ್ತು ರಾಕೇಶ್ ನಡುವೆ ಮತ್ತೊಂದು ಸುತ್ತು ಮಾತುಕತೆ ನಡೆದಿದೆ. ರಾಕೇಶ್ ಮಾತನಾಡುತ್ತಾ, ನನ್ನ ಬಸ್ ಈಗ ಸಾನ್ಯ ಕಡೆ ತಿರುಗಿದೆ ಎಂದು ಗುರೂಜಿ ಬಳಿ ಹೇಳುತ್ತಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ಗುರೂಜಿ ‘ನೋಡಿಕೊಂಡು ಹಾರ್ನ್ ಹೊಡಿ’ ಎಂದು ಕಾಲೆಳೆದಿದ್ದಾರೆ. ಆಗ ರಾಕೇಶ್ ಬಸ್ ನಿಲ್ಲಿಸಿ ಹಾರ್ನ್ ಹೊಡೆಯೋದೇ, ಆದ್ರೆ ಹತ್ತೋದು ಬಿಡೋದು ಅವರಿಗೆ ಬಿಟ್ಟ ವಿಚಾರ ಎಂದು ತಮಾಷೆ ಮಾಡಿದ್ದಾರೆ. ಒಟ್ಟಾರೆ ರಾಕೇಶ್ ಮುಂದೆ ಈಗ ಒಂದು ಕಡೆ ಅಮೂಲ್ಯ, ಮತ್ತೊಂದು ಕಡೆ ಸಾನ್ಯಾ ಇದ್ದಾರೆ. ಅದರಲ್ಲಿ ಯಾರು ಇವರ ಕಡೆಗೆ ಒಲಿಯಲಿದ್ದಾರೆ ಕಾದು ನೋಡಬೇಕಾಗಿದೆ.

Leave A Reply

Your email address will not be published.