ಸೈಲೆಂಟಾಗಿ ಸ್ಯಾಂಡಲ್ವುಡ್ ಗೆ ಎಂಟ್ರಿ ನೀಡಿದ ಎಡವಟ್ ಲೀಲಾ: ಹಿಟ್ಲರ್ ಕಲ್ಯಾಣದ ಲೀಲಾ ಸಿನಿ ಜರ್ನಿ ಶುರು!!

Entertainment Featured-Articles Movies News
59 Views

ನಟಿ ಮಲೈಕ ವಸುಪಾಲ್ ಎಂದರೆ ಬಹುಶಃ ಜನರಿಗೆ ಯಾರು ಈ ನಟಿಯೆಂದು ತಕ್ಷಣ ಹೊಳೆಯದೆ ಇರಬಹುದು. ಆದರೆ ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಹಿಟ್ಲರ್ ಕಲ್ಯಾಣದ ಎಡವಟ್ ಲೀಲಾ ಎಂದರೆ ತಟ್ಟನೆ ಎಲ್ಲರಿಗೂ ಹೊಳೆಯುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಹೌದು, ಕಿರುತೆರೆಯ ಟಾಪ್ ಸೀರಿಯಲ್ ಗಳಲ್ಲಿ ಒಂದಾಗಿರುವ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಮಿಸ್ಟರ್ ಪರ್ಫೆಕ್ಟ್ ಎಜೆ ಪತ್ನಿ ಲೀಲಾ ಪಾತ್ರದಲ್ಲಿ ಮನೆ ಮನೆಮಾತಾಗಿರುವ ನಟಿಯೇ ಮಲೈಕ ವಸುಪಾಲ್. ನಟಿಯಾಗಬೇಕೆಂದು ಆಸೆಯಿಂದ ಬೆಂಗಳೂರಿಗೆ ಬಂದ ಮಲೈಕಾ ಅವರಿಗೆ ಅವರ ಆಸೆಯನ್ನು ಈಡೇರಿಸಿದ್ದು ಹಿಟ್ಲರ್ ಕಲ್ಯಾಣ ಧಾರಾವಾಹಿ.

ಹಿಟ್ಲರ್ ಕಲ್ಯಾಣದ ಮೂಲಕ ಬಹಳ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಮಲೈಕಾ ಅವರು ಪಡೆದುಕೊಂಡಿದ್ದಾರೆ. ಬಹಳಷ್ಟು ಜನರು ಹಿಟ್ಲರ್ ಕಲ್ಯಾಣದಲ್ಲಿ ಲೀಲಾ ಮಾಡುವ ಎಡವಟ್ಟುಗಳನ್ನು ಬಹಳ ಎಂಜಾಯ್ ಮಾಡುತ್ತಾರೆ. ಅಲ್ಲದೇ ಮಲೈಕಾ ಅವರು ಸಹಾ ಎಡವಟ್ ಲೀಲಾ ಎನ್ನುವ ಹೆಸರಿನಿಂದಲೇ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಹೀಗೆ ಧಾರಾವಾಹಿಯಲ್ಲಿ ಸಾಕಷ್ಟು ಹೆಸರನ್ನು ಮಾಡಿರುವ ಮಲೈಕಾ ಅವರು ಈಗ ಕನ್ನಡ ಸಿನಿಮಾರಂಗಕ್ಕೂ ಅಡಿಯಿಡಲು ಸಜ್ಜಾಗಿದ್ದು, ತಮ್ಮ ಅಭಿಮಾನಿಗಳಿಗೆ ಈ ಶುಭ ಸುದ್ದಿಯನ್ನು ನೀಡಿದ್ದಾರೆ.

ನಟಿ ಮಲೈಕ ಅವರ ಅದೃಷ್ಟ ಅವರ ಕೈಹಿಡಿದಿದ್ದು, ಕನ್ನಡ ಚಿತ್ರರಂಗದ ಪ್ರಖ್ಯಾತ ಹಾಸ್ಯನಟ ಚಿಕ್ಕಣ್ಣ ಅವರು ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ನಾಯಕನಾಗಿ ನಟಿಸಲಿರುವ ಉಪಾಧ್ಯಕ್ಷ ಸಿನಿಮಾದಲ್ಲಿ ಮಲೈಕ ಅವರು ನಾಯಕಿಯಾಗಿ ಬಣ್ಣ ಹಚ್ಚಲಿದ್ದಾರೆ. ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ನಟಿ ಮಲೈಕ ಅವರು ಭಾಗವಹಿಸಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಜನರ ಗಮನ ಸೆಳೆದಿವೆ. ಮಲೈಕಾ ಅವರ ಅಭಿಮಾನಿಗಳು ಅವರ ಸಿನಿ ಜರ್ನಿ ಗೆ ಶುಭ ಹಾರೈಸುತ್ತಿದ್ದಾರೆ.

ಹಿಟ್ಲರ್ ಕಲ್ಯಾಣ ಧಾರಾವಾಹಿ ಪ್ರಾರಂಭವಾದ ನಂತರ ಕಡಿಮೆ ಸಮಯದಲ್ಲಿಯೇ ಮಲೈಕಾ ರವರಿಗೆ ಸಿನಿಮಾದಲ್ಲಿ ನಾಯಕಿಯಾಗುವ ಅವಕಾಶ ಸಿಕ್ಕಿರುವುದು ಅವರ ಅಭಿಮಾನಿಗಳಿಗೆ ಖುಷಿಯನ್ನು ನೀಡಿದೆ. ದಾವಣಗೆರೆಯಲ್ಲಿ ಹುಟ್ಟಿದ ಮಲೈಕ ಅವರು ಸಿವಿಲ್ ಎಂಜಿನಿಯರಿಂಗ್ ಮಾಡಿದ್ದು, ನಟನೆ ಹಾಗೂ ನೃತ್ಯ ಅವರ ವಿಶೇಷ ಆಸಕ್ತಿ ಗಳಾಗಿದೆ. ಇಷ್ಟು ದಿನ ಧಾರಾವಾಹಿಯಲ್ಲಿ ಜನರನ್ನು ರಂಜಿಸಿದ್ದ ಮಲೈಕ ಅವರು ಇದೀಗ ಧಾರಾವಾಹಿಯ ಜೊತೆಗೆ ಸಿನಿಮಾದಲ್ಲಿ ಕೂಡ ನಟಿಸಲು ಸಜ್ಜಾಗಿದ್ದಾರೆ.

Leave a Reply

Your email address will not be published. Required fields are marked *