ಸೆ ಕ್ಸ್ ಬಯಸಿ ಹುಡುಗನ ಬಳಿ ಬರುವವಳು ಹುಡುಗಿಯಲ್ಲ, ಅವಳು..? ನಟನ ಮಾತು ಹೊತ್ತಿಸಿದೆ ಕಿಚ್ಚು

Written by Soma Shekar

Published on:

---Join Our Channel---

ತೊಂಬತ್ತರ ದಶಕದಲ್ಲಿ ಭಾರತದ ಮಕ್ಕಳಿಗೆ ಅಚ್ಚು ಮೆಚ್ಚಿನ ಸೀರಿಯಲ್ ಎಂದರೆ ಅದು ಶಕ್ತಿಮಾನ್. ಹೌದು ಆದರೆ ಪಂಚಭೂತಗಳಿಂದ ಅಪಾರ ಶಕ್ತಿಯನ್ನು ಪಡೆದು, ದೇಶದ ಮೇಲೆ ದಂಡೆತ್ತಿ ಬರುವ ಮಾಯಾವಿ ಶಕ್ತಿಗಳನ್ನು ಎದುರಿಸುವ ಸೂಪರ್ ಹ್ಯೂಮನ್ ಆಗಿ ಬರುತ್ತಿದ್ದ ಶಕ್ತಿಮಾನ್ ಪಾತ್ರವು ಕಿರುತೆರೆಯಲ್ಲಿ ದೊಡ್ಡ ಜನಪ್ರಿಯತೆ ಪಡೆದ ಸೀರಿಯಲ್ ಆಗಿತ್ತು. ಶಕ್ತಿಮಾನ್ ಭಾರತದ ಮೊದಲ ಸೂಪರ್ ಹೀರೋ ಕಥಾ ಸರಣಿ ಎನ್ನುವುದು ಸತ್ಯ. ಇನ್ನು ಈ ಕಥಾ ಸರಣಿಯಲ್ಲಿ ನಾಯಕ ಶಕ್ತಿಮಾನ್ ಪಾತ್ರದಲ್ಲಿ ಕಾಣಿಸಿಕೊಂಡವರು ಬಾಲಿವುಡ್ ನಟ ಮುಖೇಶ್ ಖನ್ನಾ. ಸಿನಿಮಾಗಳಲ್ಲಿ ನಟಿಸಿದ್ದರೂ ಸಹಾ ಅವರಿಗೆ ಹೆಚ್ಚಿನ ಕೀರ್ತಿ ಸಿಕ್ಕಿದ್ದು ಶಕ್ತಿಮಾನ್ ಸೀರಿಯಲ್ ಮೂಲಕ.

ಇತ್ತೀಚಿನ ದಿನಗಳಲ್ಲಿ ನಟ ಮುಖೇಶ್ ಖನ್ನಾ ಅವರು ಸಿನಿಮಾ ಅಥವಾ ಸೀರಿಯಲ್ ವಿಚಾರಗಳ ಬದಲಾಗಿ ತಾವು ನೀಡುವ ಹೇಳಿಕೆಗಳ ಮೂಲಕ ವಿ ವಾ ದಗಳು ಮತ್ತು ಚರ್ಚೆಗಳಿಗೆ ಕಾರಣವಾಗುವ ಮೂಲಕ ಸಾಕಷ್ಟು ಸುದ್ದಿಯಾಗುತ್ತಿದ್ದಾರೆ. ಇನ್ನು ಇವೆಲ್ಲವುಗಳ ನಡುವೆ ಇತ್ತೀಚಿಗೆ ಅವರು ಯೂಟ್ಯೂಬ್ ನಲ್ಲಿ ಒಂದು ವೀಡಿಯೋ ಶೇರ್ ಮಾಡಿಕೊಂಡಿದ್ದು ಅದರಲ್ಲಿ ಅವರು ಹುಡುಗಿಯರ ಕ್ಯಾರೆಕ್ಟರ್ ಕುರಿತಾಗಿ ಮಾತನಾಡಿದ್ದಾರೆ. ಆದರೆ ಇಲ್ಲಿ ಮಾತಿನ ಭರದಲ್ಲಿ ಅವರು ಆಡಿರುವ ಮಾತು ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಒಂದು ದೊಡ್ಡ ಸಂಚಲನವನ್ನು ಸೃಷ್ಟಿಸಿದೆ.

ನಟ ಮುಖೇಶ್ ಖನ್ನಾ ಅವರು ನೀಡಿರುವ ಹೇಳಿಕೆ ಅಥವಾ ವೀಡಿಯೋದಲ್ಲಿ ಅವರು ಆಡಿದ ಮಾತುಗಳು ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಮುಖೇಶ್ ಖನ್ನಾ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ನಟ ಮುಖೇಶ್ ಖನ್ನಾ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಮಹಿಳೆಯರ ವರ್ತನೆ ಬಗ್ಗೆ ಮಾತನಾಡುವ ಭರದಲ್ಲಿ ಆಡಿದ ಮಾತುಗಳು ಎಡವಟ್ಟಿಗೆ ಕಾರಣ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ನ ಗ್ನ ಫೋಟೋ ತೋರಿಸಿ ಹೇಗೆಲ್ಲಾ ಹಣ ಕೀಳುತ್ತಾರೆ ಎಂದು ಹೇಳುವಾಗ ಅವರು ಹುಡುಗಿಯರ ಬಗ್ಗೆ ಟೀಕೆ ಮಾಡಿದ್ದು, ಅದೇ ಈಗ ಸಂಕಷ್ಟಕ್ಕೆ ಗುರಿ ಮಾಡಿದೆ.

ಮುಖೇಶ್ ಖನ್ನಾ ಅವರು ತಮ್ಮ ಮಾತಿನಲ್ಲಿ, ಯಾವುದಾದರೂ ಹುಡುಗಿ ಹುಡುಗನ ಬಳಿ ಬಂದು, ಲೈಂ ಗಿ ಕ ವಿಚಾರದಲ್ಲಿ ಆಸಕ್ತಿ ಇದೆ ಎಂದು ಹೇಳಿದರೆ ಅವಳು ಹುಡುಗಿಯಲ್ಲ ಬದಲಾಗಿ ದಂಧೆ ಮಾಡುತ್ತಿದ್ದಾಳೆ ಎಂದರ್ಥ. ಸಭ್ಯ ಸಮಾಜದಲ್ಲಿ ಸಂಸ್ಕಾರವಂತ ಹೆಣ್ಣು ಮಗಳು ಇಂತಹ ಕೆಲಸವನ್ನು ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಅವರ ಈ ಮಾತುಗಳು ಈಗ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ನೆಟ್ಟಿಗರು ಮುಖೇಶ್ ಖನ್ನಾ ಅವರ ವಿ ರು ದ್ಧ ಟೀಕೆಗಳ ಮಳೆಯನ್ನೇ ಸುರಿಸುತ್ತಿದ್ದಾರೆ.

Leave a Comment