ಸೂಪರ್ ಹಿಟ್ ಸಿನಿಮಾದಲ್ಲಿ ಅಂದು ಐಶ್ವರ್ಯ ರೈ ನಾನು ಶಾರೂಖ್ ಹೆಂಡ್ತಿಯಾಗಿ ನಟಿಸಲ್ಲ ಎಂದಿದ್ದೇಕೆ?

Entertainment Featured-Articles Movies News

ಐಶ್ವರ್ಯ ರೈ ಬಾಲಿವುಡ್ ನ ಸ್ಟಾರ್ ನಟಿಯಾಗಿ ಮೆರೆದ ಅಂದಕ್ಕೆ ಮತ್ತೊಂದು ಹೆಸರೆಂದೇ ಬಿಂಬಿತವಾದ ನಟಿ‌. ದಕ್ಷಿಣದ ಸಿನಿಮಾಗಳಲ್ಲಿ ಸಹಾ ನಟಿಸಿದ್ದ ಈಕೆ ಮಾಜಿ ಮಿಸ್ ವರ್ಲ್ಡ್ ಕೂಡಾ ಹೌದು. ನಟಿ ಐಶ್ವರ್ಯ ರೈ ತಮ್ಮ ವೃತ್ತಿ ಜೀವನದಲ್ಲಿ ಅನೇಕ ಅತ್ಯುತ್ತಮ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ನಟಿ ಐಶ್ವರ್ಯ ರೈ ಬಚ್ಚನ್ ಸಿನಿಮಾಗಳಿಂದ ದೂರ ಉಳಿದಿದ್ದಾರೆ ಆದರೆ ಅವರ ಜನಪ್ರಿಯತೆ ಮಾತ್ರ ಕುಗ್ಗಿಲ್ಲ. ಇಂದಿಗೂ ಐಶ್ವರ್ಯ ರೈ ತಮ್ಮ ಚಾರ್ಮ್ ಹಾಗೂ ಫೇಮ್ ಉಳಿಸಿಕೊಂಡು ಬರುತ್ತಿದ್ದಾರೆ.

ಸಿನಿಮಾ ವೃತ್ತಿಯಲ್ಲಿ ಸಕ್ರಿಯವಾಗಿದ್ದ ದಿನಗಳಲ್ಲಿ ಐಶ್ವರ್ಯ ಅದ್ಭುತ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಬಹುತೇಕ ಸಿನಿಮಾಗಳು ಯಶಸ್ಸನ್ನು ಪಡೆದುಕೊಂಡಿದೆ. ಐಶ್ವರ್ಯ ರೈ ಬಾಲಿವುಡ್ ನಲ್ಲಿ ಕಿಂಗ್ ಖಾನ್ ಹೆಸರನ್ನು ಪಡೆದಿರುವ ಶಾರೂಖ್ ಖಾನ್ ಜೊತೆಯಲ್ಲಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಒಂದು ಸಿನಿಮಾದಲ್ಲಿ ಶಾರೂಖ್ ಜೊತೆ ನಟಿಸಲು ಐಶ್ವರ್ಯ ರೈ ಒಪ್ಪಿರಲಿಲ್ಲ. ಆ ಸಿನಿಮಾ ಆಫರ್ ಅನ್ನು ಐಶ್ವರ್ಯ ತಿರಸ್ಕಾರ ಮಾಡಿದ್ದರು ಎನ್ನುವುದು ಸಹಾ ನಿಜವಾಗಿದೆ.

ಶಾರೂಖ್ ಖಾನ್ ವೃತ್ತಿ ಜೀವನದಲ್ಲಿನ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದಾದ ಕುಚ್ ಕುಚ್ ಹೋತಾ ಹೈ ಸಿನಿಮಾದಲ್ಲಿ ಕಾಜೋಲ್ ಮತ್ತು ರಾಣಿ ಮುಖರ್ಜಿ ನಾಯಕಿಯರಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ನಟಿಸಲು ಮೊದಲು ನಟಿ ಐಶ್ವರ್ಯ ರೈ ಅವರಿಗೆ ಆಫರ್ ನೀಡಲಾಗಿತ್ತು. ಆದರೆ ನಟಿ ಅದನ್ನು ತಿರಸ್ಕರಿಸಿದ್ದರು. ಒಂದು ಸಂದರ್ಶನದ ವೇಳೆಯಲ್ಲಿ ನಟಿ ಐಶ್ವರ್ಯ ರೈ, ತಾನೇಕೆ ಆ ಸಿನಿಮಾ ಅವಕಾಶವನ್ನು ತಿರಸ್ಕರಿಸಿದೆ ಎನ್ನುವ ವಿಚಾರವನ್ನು ಹಂಚಿಕೊಂಡಿದ್ದರು.

ಆಸಕ್ತಿಕರ ವಿಚಾರ ಏನೆಂದರೆ ಐಶ್ವರ್ಯ ರೈ ಅವರನ್ನು ಈ ಸಿನಿಮಾದಲ್ಲಿ ಶಾರೂಖ್ ಪತ್ನಿಯ ಪಾತ್ರಕ್ಕೆ ಅವಕಾಶ ನೀಡಲಾಗಿತ್ತು. ಐಶ್ವರ್ಯ ಈ ಪಾತ್ರವನ್ನು ತಿರಸ್ಕರಿಸಿದ ನಂತರ ಟ್ವಿಂಕಲ್ ಖನ್ನಾ, ಕರಿಷ್ಮಾ ಕಪೂರ್ ಮತ್ತು ರವೀನಾ ಟಂಡನ್ ರಂತಹ ನಟಿಯರು ಸಹಾ ಈ ಪಾತ್ರ ತಿರಸ್ಕರಿಸಿದ್ದರು. ಕಡೆಗೆ ನಟಿ ರಾಣಿ ಮುಖರ್ಜಿ ಈ ಪಾತ್ರಕ್ಕೆ ಆಯ್ಕೆಯಾದರು. ಸಿನಿಮಾದ ತನ್ನ ಪಾತ್ರದ ಮೂಲಕ ರಾಣಿ ಮುಖರ್ಜಿ ಸಾಕಷ್ಟು ಜನಪ್ರಿಯತೆ ಪಡೆದರಲ್ಲದೇ ಅವರ ಪಾತ್ರಕ್ಕೆ ಜನರ ಮೆಚ್ಚುಗೆ ಸಹಾ ದೊರೆತಿತ್ತು.

ಹಾಗಾದರೆ ನಟಿ ಐಶ್ವರ್ಯ ಈ ಪಾತ್ರ ತಿರಸ್ಕರಿಸಿದ್ದು ಏಕೆ ಎನ್ನುವುದಾದರೆ, ನಟಿ ಐಶ್ವರ್ಯ ಅವರು ತಾನು ಆ ಪಾತ್ರ ಮಾಡಿದ್ದರೆ ಜನರು ಆಗ, ನೋಡು ಐಶ್ವರ್ಯ ರೈ ಮಾಡೆಲಿಂಗ್ ಮಾಡುವಾಗ ಮಾಡುತ್ತಿದ್ದ ಅಂದರೆ ನೇರ ಕೂದಲು ಬಿಟ್ಟು, ಮಿನಿ ಸ್ಕರ್ಟ್ ಧರಿಸಿ, ಕ್ಯಾಮೆರೆ ಮುಂದೆ ಕುಣಿಯುತ್ತಾರೆ ಅಂತಿದ್ರು. ಅಲ್ಲದೇ ಸಿನಿಮಾದಲ್ಲಿ ನಾಯಕನ ಪಾತ್ರ ನೈಜ ವ್ಯಕ್ತಿತ್ವದ ನಾಯಕಿ ಕಡೆಗೆ ಹೋಗ್ತಾನೆ. ಆ ಪಾತ್ರ ಮಾಡಿದ್ದರೆ ನನಗೆ ಅದು ತೃಪ್ತಿ ನೀಡ್ತಾ ಇರ್ಲಿಲ್ಲ ಎಂದಿದ್ದಾರೆ.

Leave a Reply

Your email address will not be published.