ಸೂಪರ್ ಮಾಡೆಲ್ ಆಗಲು ಸ್ಪರ್ಧೆಗಿಳಿದ ಮಹಿಳಾ ಪೋಲಿಸ್ ಅಧಿಕಾರಿ: ಎದ್ದು ನಿಂತು ಚಪ್ಪಾಳೆ ತಟ್ಟಿದ ಶೋ ಜಡ್ಜ್

Written by Soma Shekar

Published on:

---Join Our Channel---

ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಿಂ ನ ಒಬ್ಬ ಮಹಿಳಾ ಪೋಲಿಸ್ ಅಧಿಕಾರಿಯೊಬ್ಬರು ಇಂಟರ್ನೆಟ್ ನಲ್ಲಿ ಒಂದು ಹೊಸ ಸಂಚಲನವನ್ನು ಸೃಷ್ಟಿಸಿದ್ದಾರೆ. ಸಿಕ್ಕಿಂ ನ ಈ ಮಹಿಳಾ ಪೋಲಿಸ್ ಅಧಿಕಾರಿಯ ಹೆಸರು ಇಕ್ಷಾ ಹೈಂಗ್ ಸುಬ್ಬಾ ಉರುಫ್ ಇಕ್ಷಾ ಕೆರುಂಗಾ ಆಗಿದ್ದು, ಈಕೆ ಮಹಿಳೆಯರಿಗೆ ಒಂದು ಸ್ಪೂರ್ತಿಯಾಗಿ ಹೊರ ಹೊಮ್ಮಿದ್ದಾರೆ. ಇಕ್ಷಾ ಅವರು ಕೇವಲ ಒಬ್ಬ ಪೋಲಿಸ್ ಅಧಿಕಾರಿ ಮಾತ್ರವೇ ಅಲ್ಲದೇ ಆಕೆ ರಾಷ್ಟ್ರೀಯ ಮಟ್ಟದ ಬಾಕ್ಸರ್, ಬೈಕ್ ರೈಡರ್ ಮತ್ತು ಒಬ್ಬ ಸೂಪರ್ ಮಾಡೆಲ್ ಸಹಾ ಆಗಿದ್ದಾರೆ ಎಂದರೆ ನಿಮಗೆ ಆಶ್ಚರ್ಯ ಎನಿಸಬಹುದು.

ಪೋಲಿಸ್ ಅಧಿಕಾರಿಯಾಗಿರುವ ಇಕ್ಷಾ ಅವರು ಇತ್ತೀಚಿಗೆ ನಡೆದಂತಹ ಟಿವಿ ರಿಯಾಲಿಟಿ ಶೋ ಎಂಟಿವಿ ಸೂಪರ್ ಮಾಡೆಲ್ ಆಫ್ ದಿ ಇಯರ್ ಸೀಸನ್ – 2 ರಲ್ಲಿ ಟಾಪ್ – 9 ಸ್ಪರ್ಧಿಗಳಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇಕ್ಷಾ ಅವರು 2019 ರಲ್ಲಿ ಸಿಕ್ಕಿಂ ಪೋಲಿಸ್ ಇಲಾಖೆಯಲ್ಲಿ ಸೇರ್ಪಡೆಯಾಗಿ ಅಲ್ಲಿ ತಮ್ಮ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಅದರ ಜೊತೆಗೆ ಅವರಿಗೆ ಮಾಡೆಲಿಂಗ್ ನಲ್ಲೂ ಸಹಾ ಆಸಕ್ತಿಯಿದ್ದು, ಅದು ಅವರಿಂದ ದೂರವಾಗಿಲ್ಲ.

ಮಾಡೆಲಿಂಗ್ ನ ಈ ಹವ್ಯಾಸವೇ ಇಕ್ಷಾ ಅವರನ್ನು ಇಂದು ಎಂಟಿವಿ ಸೂಪರ್ ಮಾಡೆಲ್ ಆಫ್ ದಿ ಇಯರ್ ಸೀಸನ್ ಟು ವರೆಗೆ ಕರೆ ತಂದು ನಿಲ್ಲಿಸಿದೆ ಎನ್ನುವುದು ಸತ್ಯ. ಶೋ ನಲ್ಲಿ ಇಕ್ಷಾ ತಮ್ಮ ಪರಿಚಯವನ್ನು ನೀಡಿದಾಗ ಶೋ ನ ಜಡ್ಜ್ ಆಗಿರುವ ಮಲೈಕಾ ಅರೋರಾ ಅವರು ಎದ್ದು ನಿಂತು ಈ ಮಹಿಳೆಗೆ ಸೆಲ್ಯೂಟ್ ಮಾಡಬೇಕು ಎಂದು ಗೌರವವನ್ನು ಸಲ್ಲಿಸಿ, ಇಕ್ಷಾ ಅವರಿಗೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ಸಿಕ್ಕಿಂ ಪೋಲಿಸ್ ಗೆ ಇಕ್ಷಾ ಅವರು ಆಯ್ಕೆಯಾದಾಗ ಅವರ ವಯಸ್ಸು ಕೇವಲ 19 ವರ್ಷ. ಪ್ರಸ್ತುತ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಇಕ್ಷಾ ಅವರಿಗೆ ತಮ್ಮ ಕೆಲಸದ ಮೇಲೆ ಅಪಾರವಾದ ಪ್ರೀತಿಯಿದೆ. ಅದಕ್ಕೂ ಮುನ್ನ ಇಕ್ಷಾ ಅವರು ರಾಷ್ಟ್ರೀಯ ಮಟ್ಟದ ಬಾಕ್ಸರ್ ಆಗಿದ್ದರು. ಅಲ್ಲದೇ ಸೂಪರ್ ಮಾಡೆಲ್ ಆಗುವ ಕನಸು ಇಕ್ಷಾ ಅವರದ್ದು, ಮಹಿಳೆಯರು ಏನನ್ನಾದರೂ ಸಾಧಿಸಬಹುದು ಎನ್ನುವುದನ್ನು ಅವರು ನಂಬುವುದಾಗಿ ಹೇಳುತ್ತಾರೆ.

ಇಕ್ಷಾ ಅವರು ಇನ್ಸ್ಟಾಗ್ರಾಂ ನಲ್ಲೂ ಸಹಾ ಸಕ್ರಿಯವಾಗಿದ್ದು, ಅಲ್ಲಿ ಅವರನ್ನು ಸಾವಿರಾರು ಜನರು ಹಿಂಬಾಲಿಸುತ್ತಾರೆ. ಎಂಟಿವಿ ಶೋ ಗೆ ಇಕ್ಷಾ ಅವರು ಎಂಟ್ರಿ ನೀಡಿ, ಟಾಪ್ ಒಂಬತ್ತರಲ್ಲಿ ಸ್ಥಾನವನ್ನು ಪಡೆದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಅವರ ಫಾಲೋಯಿಂಗ್ ಸಹಾ ಹೆಚ್ಚುತ್ತಿದ್ದು, ಅವರ ಜನಪ್ರಿಯತೆ ಕೂಡಾ ಹೆಚ್ಚುತ್ತಿದೆ ಎನ್ನುವುದು ಕೂಡಾ ನಿಜವಾಗಿದೆ.

Leave a Comment