ಸುಳ್ಳು ಸುದ್ದಿ ಹರಡಿದವರ ಬಾಯಿಗೆ ಬೀಗ ಜಡಿದ ನಟಿ ರಮ್ಯಾ: ಆ ಹುಡುಗ ಯಾರೆಂದು ರಿವೀಲ್ ಮಾಡಿಯೇ ಬಿಟ್ಟರು

0
144

ಮೊನ್ನೆಯಷ್ಟೇ ಸ್ಯಾಂಡಲ್ ವುಡ್ ಕ್ವೀನ್ ಖ್ಯಾತಿಯ ನಟಿ ರಮ್ಯಾ ಅವರು ಹುಡುಗನೊಬ್ಬನ ಜೊತೆ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಅದಾದ ನಂತರ ಈ ಫೋಟೋ ಅವರ ಫ್ಯಾನ್ ಪೇಜುಗಳಲ್ಲಿ ಕೂಡಾ ಹಂಚಿಕೊಳ್ಳಲ್ಪಟ್ಟು ಅದು ಸಾಕಷ್ಟು ಸುದ್ದಿಯಾಯಿತು. ನಟಿ ರಮ್ಯಾ ಅವರು ಅಷ್ಟೊಂದು ಆತ್ಮೀಯವಾಗಿ ಆ ಹುಡುಗನ ಜೊತೆ ಇರುವುದನ್ನು ಕಂಡು ಸಾಕಷ್ಟು ಗಾಸಿಪ್ ಗಳು ಎದ್ದವು. ಆ ಹುಡುಗ ಯಾರು? ಎಂದು ತಿಳಿದುಕೊಳ್ಳುವ ಕುತೂಹಲವನ್ನು ಅನೇಕರು ಸೋಶಿಯಲ್ ಮೀಡಿಯಾಗಳಲ್ಲಿ ಕಾಮೆಂಟ್ ಗಳ ಮೂಲಕ ವ್ಯಕ್ತಪಡಿಸಿದ್ದರು.

ಅನೇಕರು ಆ ಹುಡುಗ ರಮ್ಯಾ ಅವರ ಸ್ನೇಹಿತನಾ? ಸಂಬಂಧಿಕನಾ? ಅಥವಾ ಪ್ರೇಮಿಯಾ? ಎಂದೆಲ್ಲಾ ಪ್ರಶ್ನೆಗಳನ್ನು ಹಾಕಿದ್ದರು. ಆ ಒಂದು ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿ ಹೋಯಿತು. ಆದರೆ ಸ್ಪಷ್ಟವಾದ ಉತ್ತರ ಮಾತ್ರ ಯಾರಿಗೂ ಸಿಕ್ಕಿರಲಿಲ್ಲ. ಆದ್ದರಿಂದಲೇ ಕೆಲವರು ಕಾಮೆಂಟ್ ಗಳನ್ನು ಮಾಡುವಾಗ ಆ ಹುಡುಗ ಯಾರು ಎನ್ನುವುದನ್ನು ನಟಿ ರಮ್ಯಾ ಅವರೇ ಹೇಳಬೇಕು. ಈ ಗುಟ್ಟನ್ನು ಅವರೇ ರಟ್ಟು ಮಾಡಬೇಕು ಎಂದು ಕೂಡಾ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು.

ಕೆಲವು ಕಡೆಗಳಲ್ಲಿ ಆ ಹುಡುಗ ಯಾರು ಎನ್ನುವ ವಿಷಯವಾಗಿ ಯಾವುದೋ ಒಂದು ಹೆಸರನ್ನು ಹಾಕಿ,‌ ಅದರ ಬಗ್ಗೆ ಹೇಳುವ ಮೂಲಕ ಸುದ್ದಿಗಳು ಹರಿದಾಡಿದ್ದವು. ರಮ್ಯಾ ಅವರ ಆಪ್ತ ಸ್ನೇಹಿತ‌ ಅವರು ಎನ್ನುವ ಮಾಹಿತಿಯನ್ನು ಸಹಾ ಕೆಲವು ಕಡೆ ಹಂಚಿಕೊಳ್ಳಲಾಯಿತು. ಆದರೆ ಇದರ ಬಗ್ಗೆ ರಮ್ಯಾ ಅವರಿಂದ ಸ್ಪಷ್ಟನೆ ಸಿಗದ ಕಾರಣ, ಯಾವುದನ್ನೂ ನಂಬುವುದು ಸಾಧ್ಯವಿಲ್ಲ ಎನ್ನುವಂತಹ ಪರಿಸ್ಥಿತಿ ಅಭಿಮಾನಿಗಳಲ್ಲಿ ಕಂಡಿತ್ತು.

ಹೀಗಾಗಿ ಎಲ್ಲಾ ಸುದ್ದಿಗಳು, ಗಾಸಿಪ್ ಗಳ ನಂತರ ಒಂದು ಫೋಟೋ ಇಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಸುದ್ದಿಯನ್ನು ಮಾಡಿದ್ದನ್ನು ನೋಡಿ, ಸ್ವತಃ ರಮ್ಯಾ ಅವರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಈಗ ಎದ್ದಿರುವ ಎಲ್ಲಾ ಪ್ರಶ್ನೆಗಳಿಗೆ, ಅನುಮಾನಗಳಿಗೆ ಸ್ಪಷ್ಟವಾದ ಉತ್ತರವನ್ನು ನೀಡಿದ್ದಾರೆ. ರಮ್ಯಾ ಅವರು ತನ್ನ ಜೊತೆಗಿದ್ದ ಹುಡುಗ ತನ್ನ ಸ್ಟೈಲಿಶ್ ಎಂದೂ, ಆತನ ಹೆಸರು ವಿಹಾನ್ ಎಂದು ಹೇಳಿದ್ದಾರೆ. ಅಲ್ಲದೇ ಆ ಹುಡುಗನ ಬಗ್ಗೆ ತಿಳಿಯಲು ತೋರಿಸಿದ ನಿಮ್ಮ ಕುತೂಹಲವನ್ನು ಪ್ರೀತಿಸುತ್ತೇನೆ ಎಂದು ಬಹಳ ಕೂಲ್ ಆಗಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here