ಸುಮ್ಮನಿದ್ದು ತಪ್ಪು ಮಾಡಿದೆವು, ಜನರದ್ದು ಅತಿಯಾಗುತ್ತಿದೆ: ಬಾಯ್ ಕಾಟ್ ಟ್ರೆಂಡ್ ಬಗ್ಗೆ ಸಿಡಿದೆದ್ದ ನಟ ಅರ್ಜುನ್ ಕಪೂರ್

0 2

ಸೋಷಿಯಲ್ ಮೀಡಿಯಾಗಳಲ್ಲಿ ಬಾಯ್ ಕಾಟ್ ಟ್ರೆಂಡ್ ಇತ್ತೀಚಿಗೆ ಬಹಳ ಜೋರಾಗಿದ್ದು, ಬಾಲಿವುಡ್ ನ ಅಡಿಪಾಯವನ್ನು ಇದು ಕದಲಿಸುತ್ತಿದ್ದು, ಬಾಲಿವುಡ್ ಮಂದಿ ತಮ್ಮ ಕುಗ್ಗುತ್ತಿರುವ ಚಾರ್ಮ್ ನಿಂದ ಕಂಗೆಟ್ಟು ಹೋಗಿದ್ದಾರೆ. ಬಾಲಿವುಡ್ ನ ಸ್ಟಾರ್ ಗಳ ಸಿನಿಮಾಗಳೇ ಹೀನಾಯ ಸೋಲಿನ ರುಚಿಯನ್ನು ಕಾಣುತ್ತಿವೆ. ಇತ್ತೀಚಿಗಷ್ಟೇ ಬಾಲಿವುಡ್ ಸ್ಟಾರ್ ನಟರಾದ ಅಮೀರ್ ಖಾನ್ ಮತ್ತು ಅಕ್ಷಯ್ ಕುಮಾರ್ ಸಿನಿಮಾಗಳು ನೆಲ ಕಚ್ಚಿವೆ. ಈ ವರ್ಷವೊಂದರಲ್ಲೇ ನಟ ಅಕ್ಷಯ್ ಕುಮಾರ್ ಅವರ ಮೂರನೇ ಸಿನಿಮಾ ಸೋತಿದ್ದರೆ, ಅಮೀರ್ ಖಾನ್ ವೃತ್ತಿ ಜೀವನದಲ್ಲೇ ಲಾಲ್ ಸಿಂಗ್ ಚಡ್ಡಾ ಸಿನಿಮಾದಂತಹ ಸೋಲನ್ನು ಕಂಡಿರಲಿಲ್ಲ ಎನ್ನಲಾಗಿದೆ.

ಇದೀಗ ಬಾಲಿವುಡ್ ನಟ ಅರ್ಜುನ್ ಕಪೂರ್ ಮಾದ್ಯಮವೊಂದರ ಸಂದರ್ಶನದಲ್ಲಿ ಮಾತನಾಡುವ ವೇಳೆ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿರುವ ಬಾಲಿವುಡ್ ಸಿನಿಮಾಗಳ ಹಾಗೂ ನಟರ ಬಾಯ್ ಕಾಟ್ ವಿಚಾರವಾಗಿ ಪ್ರತಿಕ್ರಿಯೆ ನೀಡುತ್ತಾ, ಬಹಳ ಖಾರವಾಗಿ ಮಾತನಾಡಿದ್ದಾರೆ. ಅಲ್ಲದೇ ಅವರು ಬಾಯ್ಕಾಟ್ ಫ್ರೆಂಡ್ ಮಾಡುತ್ತಿರುವ ಜನರ ಬಗ್ಗೆ ತಮ್ಮ ಅಸಹನೆ ಮತ್ತು ಸಿಟ್ಟನ್ನು ಹೊರಹಾಕುತ್ತಾ, ಬಾಲಿವುಡ್ ಮಂದಿ ಈ ವಿಚಾರದಲ್ಲಿ ಮೌನ ವಹಿಸಿದ್ದೇ ತಪ್ಪಾಗಿ ಹೋಯಿತು‌. ಇದರ ಬಗ್ಗೆ ಆಗಲೇ ಕ್ರಮ ತೆಗೆದುಕೊಳ್ಳುವ ಅವಶ್ಯಕತೆ ಇತ್ತು ಎಂದೆಲ್ಲಾ ತಮ್ಮ ಅಸಹನೆಯನ್ನು ವ್ಯಕ್ತಪಡಿಸಿದ್ದಾರೆ.

ನಟ ಅರ್ಜುನ್ ಕಪೂರ್ ಮಾತನಾಡುತ್ತಾ, ನಾವು ಇದರ ಬಗ್ಗೆ ಮೌನವಾಗಿದ್ದು ತಪ್ಪು ಮಾಡಿದೆವು ಎನಿಸುತ್ತಿದೆ. ನಾವು ಮೌನವಾಗಿ ಇದ್ದದ್ದು ನಮ್ಮ ದೊಡ್ಡತನ, ಆದರೆ ಜನರು ಇದನ್ನೇ ದುರ್ಬಳಕೆಗಾಗಿ ಬಳಸಿಕೊಳ್ಳಲು ಪ್ರಾರಂಭಿಸಿದ್ದಾರೆ. ನಮ್ಮ ಕೆಲಸ ಅವರಿಗೆ ಉತ್ತರ ನೀಡುತ್ತದೆ ಎಂದು ನಾವು ಸುಮ್ಮನೆ ಇದ್ದುದ್ದು ತಪ್ಪಾಗಿ ಹೋಗಿದೆ. ನಾವು ಪ್ರತಿಯೊಂದು ಬಾರಿಯೂ ನಮ್ಮ ಕೈಗಳನ್ನು ಕಲುಷಿತಗೊಳಿಸಿಕೊಳ್ಳುವ ಅವಶ್ಯಕತೆ ಇಲ್ಲ. ಆದರೆ ನಾವು ಈಗಾಗಲೇ ಸಾಕಷ್ಟು ಸಹಿಸಿಕೊಂಡಿದ್ದೇನೆ ಮತ್ತು ಜನರು ಬಾಯ್ ಕಾಟ್ ಅನ್ನು ಒಂದು ಅಭ್ಯಾಸ ಮಾಡಿಕೊಂಡಿದ್ದಾರೆ.

ಈಗ ಬಾಲಿವುಡ್ ಇಂಡಸ್ಟ್ರಿಯ ಎಲ್ಲರೂ ಒಟ್ಟಾಗಿ ಸೇರಿ ಮುಕ್ತವಾಗಿ ಇದರ ಬಗ್ಗೆ ಮಾತನಾಡುವ ಅನಿವಾರ್ಯತೆ ಇದೆ. ಏಕೆಂದರೆ ಜನರು ಸ್ಟಾರ್ ಗಳ ಬಗ್ಗೆ ಏನು ಬರೆಯುತ್ತಾರೆ, ಅದು ವಾಸ್ತವದ ವಿಷಯಕ್ಕಿಂತ ಬಹಳ ದೂರವಾಗಿದೆ ಅಥವಾ ಅದು ನಿಜವಲ್ಲ. ಯಾವುದಾದರೂ ಸಿನಿಮಾ ಬಾಕ್ಸಾಫೀಸಿನಲ್ಲಿ ಸದ್ದು ಮಾಡಿದ ಎಂದರೆ ಅದು ನಮ್ಮ ಹೆಸರಿನಿಂದ ಅಲ್ಲಾ, ಬದಲಾಗಿ ಸಿನಿಮಾದ ಕಂಟೆಂಟ್ ನಿಂದ ಜನರಿಗೆ ಇಷ್ಟವಾಗುತ್ತದೆ. ಆದರೆ ಈಗ ಬಾಯ್ ಕಾಟ್ ಟ್ರೆಂಡ್ ಅತಿಯಾಗಿದೆ ಮತ್ತು ಅದು ತಪ್ಪು ಕೂಡ ಹೌದು ಎಂದು ಹೇಳಿದ್ದಾರೆ.

Leave A Reply

Your email address will not be published.