ಸುಮ್ನೆ ಒಂದು ಲುಕ್ ಹಾಕಿದ್ರೆ ಸಾಕು, ಈ ಫೋಟೋ ನಿಮ್ಮ ಸ್ವಭಾವ ಎಂತದ್ದು ಅಂತ ಹೇಳಿ ಬಿಡುತ್ತೆ!! ಒಂದ್ಸಲ ಪರೀಕ್ಷಿಸಿ ನೋಡಿ

Written by Soma Shekar

Published on:

---Join Our Channel---

ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ವಿವಿಧ ವೇದಿಕೆಗಳಲ್ಲಿ ಆಪ್ಟಿಕಲ್ ಇಲ್ಯೂಷನ್ ಅಥವಾ ದೃಷ್ಟಿ ಭ್ರಮೆಯನ್ನು ಉಂಟುಮಾಡುವಂತಹ ಫೋಟೋಗಳು ಬಹಳಷ್ಟು ಸದ್ದು ಮಾಡುತ್ತಿವೆ. ಇಂತಹ ಫೋಟೋಗಳ ಕುರಿತಾಗಿ ನೆಟ್ಟಿಗರು ಸಹಾ ಸಾಕಷ್ಟು ಆಸಕ್ತಿಯನ್ನು ತೋರಿಸುತ್ತಿದ್ದಾರೆ. ಈ ಫೋಟೋಗಳಲ್ಲಿ ಅಡಗಿರುವ ರಹಸ್ಯಗಳನ್ನು ಭೇದಿಸುವ ಪ್ರಯತ್ನಕ್ಕೆ ಮುಂದಾಗುತ್ತಾರೆ. ಇನ್ನು ಕೆಲವೊಂದು ಚಿತ್ರಗಳ ಮೂಲಕ ತಮ್ಮ ಸ್ವಭಾವ ಎಂತಹದ್ದು ಎಂದು ಅರ್ಥ ಮಾಡಿಕೊಳ್ಳುತ್ತಾರೆ. ಪ್ರಸ್ತುತ ಒಂದು ಹೊಸ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದೆ.‌ ಈ ಚಿತ್ರವು ಬಹಳ ವಿಶೇಷವಾಗಿದೆ. ಸಾಮಾನ್ಯವಾಗಿ ಆಲೋಚನೆಗಳು ಎನ್ನುವುದು ವ್ಯಕ್ತಿಯ ಸ್ವಭಾವಕ್ಕೆ ತಕ್ಕಂತೆ ಇರುತ್ತದೆ ಎಂದು ಹೇಳಲಾಗಿದೆ.

ಒಂದು ಚಿತ್ರವನ್ನು ಒಬ್ಬ ವ್ಯಕ್ತಿಯು ನೋಡುವ ದೃಷ್ಟಿಯನ್ನು ಆಧರಿಸಿ, ಆತನ ವ್ಯಕ್ತಿತ್ವ ಎಂತಹದ್ದು ಎಂದು ಹೇಳಬಹುದಾಗಿದೆ. ಆಪ್ಟಿಕಲ್ ಇಲ್ಯೂಷನ್ ನ ಕೆಲವು ಚಿತ್ರಗಳು, ಅವುಗಳನ್ನು ವ್ಯಕ್ತಿಗಳು ನೋಡುವ ವಿಧಾನದ ಮೇಲೆ ಅವರ ವ್ಯಕ್ತಿತ್ವದ ವಿಶ್ಲೇಷಣೆಯನ್ನು ಮಾಡುತ್ತವೆ ಎನ್ನಲಾಗಿದೆ. ಅದು ಹೇಗೆ ಎನ್ನುವುದನ್ನು ಈಗ ವೈರಲ್ ಆಗುತ್ತಿರುವ ಚಿತ್ರದ ಮೂಲಕ ತಿಳಿಯೋಣ ಬನ್ನಿ. ದೃಷ್ಟಿ ಭ್ರಮೆಯನ್ನು ಉಂಟುಮಾಡುವ ಚಿತ್ರಗಳು ಎಂದರೆ ಅವು ಸ್ವಲ್ಪ ಗೊಂದಲಮಯವಾಗಿರುತ್ತವೆ. ಈ ಚಿತ್ರಗಳಲ್ಲಿ ಒಂದು ಚಿತ್ರದಲ್ಲಿ, ಇನ್ನೊಂದಷ್ಟು ಚಿತ್ರಗಳು ಅಡಗಿರುತ್ತವೆ. ಅವುಗಳನ್ನು ನೋಡುವ ಅಥವಾ ಪತ್ತೆ ಮಾಡುವ ನಿಮ್ಮ ಪ್ರಯತ್ನವೇ ನಿಮ್ಮ ಸ್ವಭಾವ ಏನೆಂಬುದು ಅರ್ಥವಾಗುತ್ತದೆ.

ಈಗ ನೀವು ನೋಡಲು ಹೊರಟಿರುವ ಚಿತ್ರ ಅಂತಹುದೇ ಒಂದು ದೃಷ್ಟಿ ಭ್ರಮೆಯ ಚಿತ್ರವಾಗಿದೆ. ಈ ಚಿತ್ರವನ್ನು ನೋಡಿದಾಗ ಮೊದಲು ನಿಮಗೆ ಏನು ಕಾಣುತ್ತದೆ? ಅದರ ಅನುಸಾರವಾಗಿ ನಿಮ್ಮ ಸ್ವಭಾವ ಎಂತಹದ್ದು ಎಂದು ಸುಲಭವಾಗಿ ತಿಳಿದುಕೊಳ್ಳುವುದು ಸಾಧ್ಯವಿದೆ. ಇಲ್ಲಿ ಹಂಚಿಕೊಂಡಿರುವ ಚಿತ್ತದಲ್ಲಿ ಒಟ್ಟು ಮೂರು ಚಿತ್ರಗಳು ಅಡಗಿದ್ದು, ಅದರಲ್ಲಿ ನೀವು ಯಾವುದನ್ನು ಮೊದಲು ನೋಡಿದಿರೋ, ಅದು ನಿಮ್ಮ ವ್ಯಕ್ತಿತ್ವದ ಪರಿಚಯವನ್ನು ಮಾಡಿಕೊಡುತ್ತದೆ ಹಾಗಾದರೆ ನಿಮಗೆ ಕಂಡಿದ್ದೇನು? ಅದರ ಪ್ರಕಾರ ನಿಮ್ಮ ವ್ಯಕ್ತಿತ್ವ ಎಂತಹದ್ದು ತಿಳಿದುಕೊಳ್ಳಿ.

ಮಹಿಳೆ : ಬೀಚ್ ಟೋಪಿಯನ್ನು ಧರಿಸಿ ಸಮುದ್ರದ ನೀರನ್ನು ನೋಡುತ್ತಾ, ಅದರ ಆನಂದ ಪಡುತ್ತಿರುವ ಮಹಿಳೆಯು ನಿಮ್ಮ ಕಣ್ಣಿಗೆ ಮೊದಲು ಕಂಡಿದ್ದರೆ, ನೀವು ಮೂಲಭೂತ ವಿಚಾರಗಳ ಕಡೆಗೆ ಬಹಳ ಗಮನವಿಟ್ಟು ಅವಗಾಹನೆ ಮಾಡುವಿರಿ ಎಂದು ತಿಳಿದುಬರುತ್ತದೆ. ಅಲ್ಲದೇ ನೀವು ಏನನ್ನಾದರೂ ಅರ್ಥಮಾಡಿಕೊಳ್ಳುವುದರಲ್ಲಿ ಬೇರೆಯವರಿಗಿಂತ ಹಿಂದೆ ಇರುವಿರಿ ಎನ್ನುವ ಅರ್ಥವನ್ನು ಇದು ನೀಡುತ್ತದೆ. ಸಂಕೀರ್ಣ ವಿಷಯಗಳನ್ನು ಅರ್ಥಮಾಡಿಕೊಳ್ಳುವಲ್ಲಿ ನಿಮಗೆ ಹೆಚ್ಚು ಸಮಯ ಹಿಡಿಯುತ್ತದೆ.

ಪಕ್ಷಿ : ಫೋಟೋವನ್ನು ನೋಡಿದ ಮೊದಲ ನೋಟದಲ್ಲೇ ನಿಮಗೆ ಪಕ್ಷಿಯೊಂದು ಕಾಣಿಸಿಕೊಂಡಿದ್ದರೆ, ನೀವು ಗ್ರಹಿಕೆಯ ಕೌಶಲ್ಯ ಉತ್ತಮವಾಗಿದೆ ಎನ್ನುವ ಅರ್ಥವನ್ನು ಅದು ನೀಡುತ್ತದೆ. ಅಂದರೆ ಸರಳವಾಗಿ ಇದನ್ನು ಅರ್ಥ ಮಾಡಿಸುವುದಾದರೆ, ನೀವು ಸಂಕೀರ್ಣವಾದ ವಿಚಾರಗಳನ್ನು ಕೂಡಾ ಬಹಳ ಬೇಗ ಪತ್ತೆ ಹಚ್ಚುವುದು ಮಾತ್ರವಲ್ಲದೇ, ಅದನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವನ್ನು ಕೂಡಾ ಪಡೆದಿರುವಿರಿ ಎಂದು ಇದು ಸೂಚಿಸುತ್ತದೆ.

ಮನುಷ್ಯ: ಒಂದು ವೇಳೆ ಚಿತ್ರದಲ್ಲಿ ನಿಮಗೆ ಮೊದಲ ನೋಟದಲ್ಲೇ ಮನುಷ್ಯನು ಕಂಡಿದ್ದರೆ, ನಿಮ್ಮ ಗ್ರಹಿಕೆಯ ಕೌಶಲ್ಯವು ಅತ್ಯದ್ಭುತವಾಗಿದೆ ಎನ್ನುವ ಅರ್ಥವನ್ನು ನೀಡುತ್ತದೆ. ನೀವು ನಿಮ್ಮ ಖಾಸಗಿ ಜೀವನದಲ್ಲಿ ಮಾತ್ರವಲ್ಲದೇ, ಹೊರ ಜಗತ್ತಿನಲ್ಲಿ ಸಹಾ ಅತ್ಯಂತ ಕಷ್ಟವಾದ ಪರಿಸ್ಥಿತಿಗಳನ್ನು ಗುರುತಿಸಿ ಅವುಗಳನ್ನು ಪರಿಹರಿಸಿಕೊಳ್ಳುವ ಸಾಮರ್ಥ್ಯವನ್ನು ಪಡೆದುಕೊಂಡಿರುವಿರಿ ಎನ್ನುವ ಅರ್ಥವನ್ನು ನೀಡುತ್ತದೆ.

Leave a Comment