ಸುಂದರ ಜಲಪಾತದ ಸೌಂದರ್ಯ ಸವಿದ ಸೋನುಗೌಡ: ಕೆಲಸದ ನಡುವೆ ನಟಿಯ ಜಾಲಿ ಟ್ರಿಪ್ ಫೋಟೋ ಇಲ್ಲಿದೆ

Entertainment Featured-Articles Movies News

ಕನ್ನಡದ ಸಿನಿಮಾಗಳಲ್ಲಿ ಹಾಗೂ ಕಿರುತೆರೆಯಲ್ಲಿ ಕೂಡಾ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ ನಟಿ ಸೋನು ಗೌಡ. ಒಂದು ಕಡೆ ಸಿನಿಮಾಗಳನ್ನು ಮಾಡುತ್ತಲೇ ಮತ್ತೊಂದು ಕಡೆ ಕಿರುತೆರೆಯ ಒಂದು ಜನಪ್ರಿಯ ಸೀರಿಯಲ್ ನಲ್ಲಿ ಕಾಣಿಸಿಕೊಂಡು ಪ್ರೇಕ್ಷಕರನ್ನು ರಂಜಿಸಿದ್ದಾರೆ ಸೋನು ಗೌಡ‌. ಹೌದು, ನಟಿ ಸೋನು ಗೌಡ ಅವರು ಕನ್ನಡ ಕಿರುತೆರೆಯ ಟಾಪ್ ಸೀರಿಯಲ್ ಗಳಲ್ಲಿ ಒಂದಾಗಿರುವ ಜೊತೆ ಜೊತೆಯಲಿ ಸೀರಿಯಲ್ ನ ಪ್ರಮುಖ ಘಟ್ಟವಾದ ರಾಜನಂದಿನಿ ಅಧ್ಯಾಯದಲ್ಲಿ ರಾಜನಂದಿನಿ ಪಾತ್ರಕ್ಕೆ ಜೀವ ತುಂಬಿ, ಪ್ರೇಕ್ಷಕರ ಅಪಾರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.

ಇನ್ನು ಕೆಲವೇ ದಿನಗಳ ಹಿಂದೆಯಷ್ಟೇ ಅವರು ತಮ್ಮ ವೃತ್ತಿ ಜೀವನದಲ್ಲಿ ಒಂದು ಚಾಲೆಂಜಿಂಗ್ ಪಾತ್ರವನ್ನು ಮಾಡಲು ಹೊರಟಿದ್ದಾರೆ ಎನ್ನುವ ಸುದ್ದಿಯೊಂದು ಸಹಾ ಸದ್ದು ಮಾಡಿತ್ತು. ನಟಿ ಸೋನು ಗೌಡ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಹಾ ಸಕ್ರಿಯವಾಗಿದ್ದು, ಅವರನ್ನು ಹಿಂಬಾಲಿಸುವ ದೊಡ್ಡ ಹಿಂಬಾಲಕರ ಬಳಗವೇ ಇದೆ. ಸೋನು ಗೌಡ ಅವರು ಸಹಾ ತಮ್ಮ ಅಭಿಮಾನಿಗಳಿಗಾಗಿ ಆಗಾಗ ಹೊಸ ಹೊಸ ಫೋಟೋ, ವೀಡಿಯೋಗಳ ಮೂಲಕ ಅಪ್ಡೇಟ್ ಗಳನ್ನು ಸಹಾ ನೀಡುತ್ತಾ ಇರುತ್ತಾರೆ.

ನಟಿ ಸೋನು ಗೌಡ ಅವರು ಇತ್ತೀಚಿಗೆ ಕೇರಳಕ್ಕೆ ಪ್ರವಾಸ ಹೋಗಿದ್ದಾರೆ. ತಮ್ಮ ಕೆಲಸದ ನಡುವೆ ಬಿಡುವು ಮಾಡಿಕೊಂಡು ಒಂದಷ್ಟು ಮಧರ ಕ್ಷಣಗಳನ್ನು ಎಂಜಾಯ್ ಮಾಡಲು ಕುಟುಂಬದವರ ಜೊತೆಗೆ ಅವರು ಕೇರಳದ ಪ್ರವಾಸ ಮಾಡಿದ್ದು, ಈ ವೇಳೆ ಅತ್ತಿರಪಲ್ಲಿ ಜಲಪಾತದ ಅಂದ ಹಾಗೂ ಸೊಬಗಿನ ಸವಿಯನ್ನು ಆನಂದಿಸಿರುವ ಅವರು ಅದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಖುಷಿಯನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ.

ಸೋನು ಗೌಡ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಅದರಲ್ಲಿ ಸೋನು ಗೌಡ ಅವರ ಸಹೋದರಿ ನೇಹಾ ಮತ್ತು ಚಂದನ್ ಅವರು ಇರುವುದನ್ನು ನಾವು ಗಮನಿಸಬಹುದಾಗಿದೆ. ನಟಿ ಹಂಚಿಕೊಂಡ ಫೋಟೋ ಗಳಿಗೆ ಅವರ ಅಭಿಮಾನಿಗಳು ಮೆಚ್ಚುಗೆಗಳನ್ನು ಹರಿಸಿದ್ದಾರೆ‌. ಬಹಳಷ್ಟು ಜನರು ಕಾಮೆಂಟ್ ಗಳನ್ನು ಸಹಾ ಮಾಡಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದು, ನಟಿಯ ಪ್ರವಾಸಕ್ಕೆ ಶುಭ ಹಾರೈಸಿದ್ದಾರೆ.

ಇನ್ನು ವೃತ್ತಿಯ ವಿಚಾರಕ್ಕೆ ಬಂದರೆ ನಟಿ ಸೋನು ಗೌಡ ಅವರು ನಾಯಕಿಯಾಗಿ ಕಾಣಿಸುವುದು ಕಡಿಮೆಯಾಗಿದೆಯಾದರೂ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಯುವರತ್ನ ಸಿನಿಮಾದಲ್ಲಿ ಸೋನು ಗೌಡ ಅವರು ನಾಯಕನ ಗೆಳತಿಯಾಗಿ ಕಾಣಿಸಿಕೊಂಡಿದ್ದರು. ಪ್ರಸ್ತುತ ಅವರು ತಮ್ಮ ಹೊಸ ಸಿನಿಮಾ ವೆಡ್ಡಿಂಗ್ ಗಿಫ್ಟ್ ನ ಬಿಡುಗಡೆಯ ನಿರೀಕ್ಷೆಯಲ್ಲಿ ಇದ್ದಾರೆ.

Leave a Reply

Your email address will not be published.