ಸುಂದರವಾದ ಬೊಂಬೆ, ಸ್ಯಾಂಡಲ್ವುಡ್ ಕ್ವೀನ್: ನಟಿ ರಮ್ಯ ಫೋಟೋ ಸ್ಯಾಂಡಲ್ವುಡ್ ನಟಿಯರು ಫಿದಾ

Written by Soma Shekar

Published on:

---Join Our Channel---

ಸ್ಯಾಂಡಲ್ವುಡ್ ನ ಮೋಹಕ ತಾರೆ ಎನ್ನುವ ಹೆಸರನ್ನು ಪಡೆದುಕೊಂಡಿರುವ ನಟಿ ರಮ್ಯ ಅವರು ಸಿನಿಮಾಗಳಿಂದ ಸಾಕಷ್ಟು ಕಾಲದಿಂದಲೂ ದೂರವೇ ಉಳಿದಿದ್ದಾರೆ. ರಾಜಕೀಯದಲ್ಲಿ ಸಕ್ರಿಯವಾದ ಮೇಲೆ ನಟಿ ರಮ್ಯ ಸಿನಿಮಾದಿಂದ ಅಂತರವನ್ನು ಕಾಯ್ದುಕೊಂಡಿದ್ದರು. ಇನ್ನು ಇದೀಗ ರಾಜಕೀಯ ಹಾಗೂ ಸಿನಿಮಾ ಎರಡರಿಂದ ದೂರ ಉಳಿದಿರುವ ನಟಿ ರಮ್ಯ ಅವರು ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿದ್ದಾರೆ. ಇತ್ತೀಚಿಗೆ ರಮ್ಯ ತಮ್ಮ ಸ್ನೇಹಿತರ ಜೊತೆ ತೆಗದುಕೊಂಡ ಸೆಲ್ಫಿ ಒಂದನ್ನು ಶೇರ್ ಮಾಡಿಕೊಂಡಿದ್ದು, ಫೋಟೋ ನೋಡಿ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.

ರಮ್ಯ ಫೋಟೋ ಶೇರ್ ಮಾಡಿಕೊಂಡು, ಒಂದೇ ನಾಣ್ಯದ ಎರಡು ಮುಖಗಳು ಎಂದು ಬರೆದುಕೊಂಡಿದ್ದಾರೆ. ಇನ್ನು ಈ ಫೋಟೋದಲ್ಲಿ ರಮ್ಯ ಅವರ ಹೇರ್ ಸ್ಟೈಲ್ ಹಾಗೂ ಮುಖದಲ್ಲಿನ ಚಾರ್ಮ್ ನೋಡಿ ರಮ್ಯ ಅವರ ಅಭಿಮಾನಿಗಳು ಹಾಗೂ ನೆಟ್ಟಿಗರು ಫಿದಾ ಆಗಿದ್ದು, ಮೆಚ್ಚುಗೆಯನ್ನು ಹರಿಸುತ್ತಿದ್ದಾರೆ. ರಮ್ಯ ಅವರು ಫೋಟೋದಲ್ಲಿ ಬಹಳ ಸುಂದರವಾಗಿ ಮಾತ್ರವಲ್ಲದೇ ಸ್ಲಿಮ್ ಆಗಿ ಸಹಾ ಕಾಣುತ್ತಿದ್ದಾರೆ. ಅದೇ ಪ್ರಮುಖ ಆಕರ್ಷಣೆಯಾಗಿದೆ.

ಕೆಂಪು ಬಣ್ಣದ ಬಟ್ಟೆ ಧರಿಸಿ, ಶಾರ್ಟ್ ಹೇರ್ ಕಟ್ ನಲ್ಲಿ ಬಹಳ ದಿನಗಳ ನಂತರ ರಮ್ಯ ಅವರು ಸುಂದರವಾದ ಲುಕ್ ನೊಂದಿಗೆ ತಮ್ಮ ಅಭಿಮಾನಿಗಳ ಹೃದಯಕ್ಕೆ ಲಗ್ಗೆ ಇಟ್ಟಿದ್ದಾರೆ. ರಮ್ಯ ಶೇರ್ ಮಾಡಿದ ಫೋಟೋ ಗೆ ಕೇವಲ ಅವರ ಅಭಿಮಾನಿಗಳು ಮತ್ತು ನೆಟ್ಟಿಗರು ಮಾತ್ರವೇ ಅಲ್ಲದೇ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ಸಹಾ ಕಾಮೆಂಟ್ ಗಳನ್ನು ಮಾಡುವ ಮೂಲಕ ತಮ್ಮ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ.

ಫೋಟೋ ನೋಡಿದ ನಟಿ ಶರ್ಮಿಳಾ ಮಾಂಡ್ರೆ ಅದ್ಭುತ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ನಟಿ ಕಾರುಣ್ಯ ರಾಮ್ ಕಾಮೆಂಟ್ ಮಾಡುತ್ತಾ ಸುಂದರವಾದ ಗೊಂಬೆ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಎಂದು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಅಭಿಮಾನಿಗಳಂತೂ ಮೆಚ್ಚುಗೆಯ ಮಳೆಯನ್ನೇ ಹರಿಸುತ್ತಿದ್ದು, ವೈವಿದ್ಯಮಯ ಕಾಮೆಂಟ್ ಗಳು ಹರಿದು ಬರುತ್ತಿದೆ. ಅಭಿಮಾನಿಗಳ ಮೆಚ್ಚುಗೆ ಆಶ್ಚರ್ಯ ಉಂಟು ಮಾಡುತ್ತಿದೆ.

ಅಭಿಮಾನಿಗಳು ನೀವು ಸೋಶಿಯಲ್ ಮೀಡಿಯಾಗಳಲ್ಲಿ ಸದಾ ಸಕ್ರಿಯವಾಗಿರಿ, ಬರಹಗಳನ್ನು ಹಾಕಿರಿ, ನಿಮ್ಮನ್ನು ನೋಡುವುದಕ್ಕಿಂತ ಬೇರೇನೂ ಬೇಕಿಲ್ಲ, ನೀವು ಕನ್ನಡದ ರಾಜಕುಮಾರಿ, ಸ್ಯಾಂಡಲ್ವುಡ್ ಕ್ವೀನ್ ಇತ್ಯಾದಿ ಇತ್ಯಾದಿ ಎಂದು ಹೊಗಳಿಕೆಯ ಹೂಮಳೆಯನ್ನು ಹರಿಸುತ್ತಾ ಹಾಡಿ ಹೊಗಳುತ್ತಿದ್ದಾರೆ ಅಭಿಮಾನಿಗಳು. ಬಹಳ ದಿನಗಳ ನಂತರ ರಮ್ಯ ಅವರ ಫೋಟೋ ಸಖತ್ ಸದ್ದು ಮಾಡ್ತಿದೆ.

Leave a Comment