ಸೀರೆ ಕತ್ತರಿಸಿ ಡ್ರೆಸ್ ಮಾಡ್ಕೊಂಡ ಉರ್ಫಿ: ಹಣಕ್ಕಾಗಿ ಆ ಕೆಲಸ ಮಾಡಿದೆ ಎಂದು ಮತ್ತೆ ವೈರಲ್ ಆದ ನಟಿ !!

Entertainment Featured-Articles Movies News Viral Video

ನಟಿ ಉರ್ಫಿ ಜಾವೇದ್ ಒಮ್ಮೆ ತಾನು ನೀಡುವ ಹೇಳಿಕೆಗಳಿಂದ, ಮತ್ತೊಮ್ಮೆ ತಾನು ಧರಿಸುವ ವಿವಿಧ ವಿನ್ಯಾಸದ ಡ್ರೆಸ್ ಗಳಿಂದ ಮಾದ್ಯಮಗಳ ಪ್ರಮುಖ ಸುದ್ದಿಗಳಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯವಾದ ವಿಚಾರವಾಗಿದೆ. ಈಗ ಉರ್ಫಿ ಜಾವೇದ್ ಮತ್ತೊಮ್ಮೆ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ವಿಚಾರದಿಂದಾಗಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ. ಉರ್ಫಿ ಸೆಲೆಬ್ರಿಟಿ ಕ್ಯಾಮರಾ ಮ್ಯಾನ್ ಗಳ ಕಣ್ಣಿಗೆ ಮುಂಬೈ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಪಾಪರಾಜಿಗಳು ಉರ್ಫಿ ಅವರ ಹೆಸರಿನ ಸ್ಪೆಲ್ಲಿಂಗ್ ನಲ್ಲಿ ಆಗಿರುವ ಬದಲಾವಣೆ ಕುರಿತಾಗಿ ಕೇಳಿದಾಗ ನಟಿ ಆಸಕ್ತಿಕರ ಉತ್ತರ ನೀಡಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ಉರ್ಫಿ ಜಾವೇದ್ ಆಂಗ್ಲ ಭಾಷೆಯಲ್ಲಿ ತಮ್ಮ ಹೆಸರನ್ನು Urfi Javed ನಿಂದ ಬದಲಿಸಿ Uorfi Javed ಎಂದು ಮಾಡಿಕೊಂಡಿದ್ದಾರೆ. ಆದ್ದರಿಂದಲೇ ಆಕೆಯ ಅಭಿಮಾನಿಗಳು ಮತ್ತು ನೆಟ್ಟಿಗರು ಸಹಾ ಇಂತಹ ಒಂದು ಬದಲಾವಣೆಗೆ ಕಾರಣವೇನು ಎಂದು ತಿಳಿದುಕೊಳ್ಳಲು ತೀವ್ರವಾದ ಕುತೂಹಲವನ್ನು ವ್ಯಕ್ತಪಡಿಸಿದ್ದರು. ಈಗ ಅದಕ್ಕೆ ಉರ್ಫಿ ಉತ್ತರವನ್ನು ನೀಡಿದ್ದು ಸ್ಪೆಲ್ಲಿಂಗ್ ಬದಲಾವಣೆಯ ಕಾರಣವನ್ನು ತಿಳಿಸಿದ್ದಾರೆ.

ಉರ್ಫಿ ಮಾತನಾಡುತ್ತಾ, ನನಗೆ ಸಂಖ್ಯಾಶಾಸ್ತ್ರ ತಿಳಿದ ಒಬ್ಬ ಶಾಸ್ತ್ರಜ್ಞರೊಬ್ಬರು ಹೆಸರಿನಲ್ಲಿ ಇಂತಹ ಒಂದು ಬದಲಾವಣೆ ಮಾಡಿದರೆ ಪ್ರಗತಿ ಸಾಧಿಸಲು ಸಾಧ್ಯ ಇದೆ ಎನ್ನುವ ಸಲಹೆಯನ್ನು ನೀಡಿದರು ಎಂದು ಹೇಳಿದ್ದಾರೆ. ಇದೇ ವೇಳೆ ಮತ್ತೊಬ್ಬರು ನೀವು ಸೋಶಿಯಲ್ ಮೀಡಿಯಾಗಳಲ್ಲಿ ಬಹಳ ವೈರಲ್ ಆಗುತ್ತಾ ಇರುವಿರಿ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಉರ್ಫಿ ವೈರಲ್ ಆಗೋದ್ರಿಂದ ದುಡ್ಡು ಬರೋದಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆ. ಉರ್ಫಿಯ ಈ ಉತ್ತರ ಈಗ ಎಲ್ಲರ ಮನಸ್ಸು ಗೆದ್ದಿದ್ದು ವೀಡಿಯೋ ವೈರಲ್ ಆಗಿದೆ.

ಇನ್ನು ಎಂದಿನಂತೆ ಮತ್ತೆ ಉರ್ಫಿಯ ಡ್ರೆಸ್ ಕೂಡಾ ಚರ್ಚೆಯ ವಿಷಯವಾಗಿದೆ‌. ಇನ್ನು ಈ ಬಾರಿ ಉರ್ಫಿ ತನ್ನ ಹಳೆಯ ಸೀರೆಯನ್ನು ಕತ್ತರಿಸಿ ಒಂದು ಸ್ಕರ್ಟ್ ಮತ್ತು ಬ್ರೇಲೆಟ್ ಅನ್ನು ತಯಾರಿಸಿ ಧರಿಸಿದ್ದಾರೆ. ಉರ್ಫಿಯ ಈ ಹೊಸ ಐಡಿಯಾವನ್ನು ಎಲ್ಲರೂ ಸಹಾ ಇಷ್ಟಪಡುತ್ತಿದ್ದು, ಉರ್ಫಿಯ ಇಂತಹ ಒಂದು ಸೃಜನಶೀಲತೆಗೆ ಜನ ಸೆಲ್ಯೂಟ್ ಹೊಡೆಯುತ್ತಿದ್ದಾರೆ. ಉರ್ಫಿ ಯ ಈ ಹೊಸ ಡ್ರೆಸ್ ಕೂಡಾ ಎಲ್ಲರ ಗಮನ ಸೆಳೆದು ಮತ್ತೊಮ್ಮೆ ಸಖತ್ ಸದ್ದು ಮಾಡುತ್ತಿದೆ.

Leave a Reply

Your email address will not be published.