ಸೀರೆಯುಟ್ಟು ಸ್ಟಂಟ್ ಮಾಡಿದ ಯುವತಿ! ಆದ್ರೆ ಮುಂದೆ ಆಗಿದ್ದು ಫ್ಯೂಜ್ ಔಟ್: ವೈರಲ್ ಆಯ್ತು ವೀಡಿಯೋ

Entertainment Featured-Articles News Viral Video

ಸೋಶಿಯಲ್ ಮೀಡಿಯಾಗಳಲ್ಲಿ ರೀಲ್ಸ್ ಮಾಡುವವರ ಸಂಖ್ಯೆ ಬಗ್ಗೆ ಖಂಡಿತ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. ಏಕೆಂದರೆ ಈ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಅನೇಕರು ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ರೀಲ್ಸ್ ವೀಡಿಯೋಗಳಿಂದಾಗಿಯೇ ಸೆಲೆಬ್ರಿಟಿಗಳ ಲೆವಲ್ ಗೆ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಇನ್ನು ದೊಡ್ಡ ಮಟ್ಟದಲ್ಲಿ ಲೈಕ್ಸ್, ವೀವ್ಸ್ ಮತ್ತು ಫಾಲೋ ಪಡೆಯುವುದಕ್ಕೆ ಕೆಲವರು ನಾನಾ ಸ್ಟಂಟ್ ಗಳನ್ನು ಮಾಡುವುದು ಕೂಡಾ ನಡೆಯುತ್ತಲೇ ಇರುತ್ತದೆ‌. ಹಾಡುಗಳಿಗೆ ನಟನೆ ಮಾಡುವುದು, ಡ್ಯಾನ್ಸ್ ವೀಡಿಯೋಗಳು, ಫನ್ನಿ ವೀಡಿಯೋಗಳು ಮಾಡುವವರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ.

ಆದರೆ ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಾವು ಜನಪ್ರಿಯತೆ ಪಡೆಯುವ ಹುಚ್ಚಿನಲ್ಲಿ ಮಾಡುವ ಸ್ಟಂಟ್ ಗಳು ಭ ಯ ಹುಟ್ಟಿಸುತ್ತವೆ. ಈಗಾಗಲೇ ಕೆಲವರು ಇಂತಹ ಸ್ಟಂಟ್ ಗಳನ್ನು ಮಾಡಲು ಹೋಗಿ ತಮ್ಮ ಪ್ರಾಣಕ್ಕೆ ಸಂಚಕಾರವನ್ನು ಸಹಾ ತಂದು ಕೊಂಡಿರುವುದು ಕೂಡಾ ಸುದ್ದಿಗಳಾಗಿದೆ. ಈ ಹಿಂದೆ ಒಬ್ಬ ಹುಡುಗಿ ಸೀರಿ ಉಟ್ಟು ಬ್ಲಾಕ್ ಫ್ಲಿಪ್ ಮಾಡಿದ ದೃಶ್ಯದ ವೀಡಿಯೋಗಳು ವೈರಲ್ ಆಗಿದ್ದವು. ಅದಲ್ಲದೇ ಕೆಲವೇ ದಿನಗಳ ಹಿಂದೆ ಮತ್ತೊಬ್ಬ ಯುವತಿ ಸೀರೆಯುಟ್ಟು ಸ್ಕೇಟಿಂಗ್ ಮಾಡಿದ ವೀಡಿಯೋ ಸಹಾ ವೈರಲ್ ಆಗಿತ್ತು. ಜನರ ಮೆಚ್ಚುಗೆ ಪಡೆದಿತ್ತು.

ಈಗ ಮತ್ತೊಂದು ಇಂತಹ ವೀಡಿಯೋ ವೈರಲ್ ಆಗಿದೆ. ಇದರಲ್ಲಿ ಯುವತಿಯೊಬ್ಬಳು ಸೀರೆಯುಟ್ಟು ಬ್ಲಾಕ್ ಫ್ಲಿಪ್ ಮಾಡಲು ಪ್ರಯತ್ನ ಮಾಡಿದ್ದಾಳೆ. ಆದರೆ ಈ ವೇಳೆ ನಡೆದ ಅವಘಡದಿಂದ ಆಕೆಯ ಪ್ಲಾನ್ ಫ್ಲಾಪ್ ಆಗಿದೆ‌. ವೈರಲ್ ವೀಡಿಯೋವನ್ನು ನಾವು ನೋಡಿದಾಗ ರಸ್ತೆಯ ಪಕ್ಕದಲ್ಲಿ ತನ್ನ ಸ್ಕೂಟಿಯನ್ನು ನಿಲ್ಲಿಸಿದ ಯುವತಿಯೊಬ್ಬಳು ಸೀರೆಯುಟ್ಟುಕೊಂಡು, ಸ್ಕೂಟಿ ಮೇಲೆ ನಿಂತು ಸ್ಟಂಟ್ ಮಾಡಲು ಸಜ್ಜಾಗಿರುವುದನ್ನು ನಾವು ಗಮನಿಸಬಹುದು. ಆಕೆಯ ಮುಖದಲ್ಲಿ ಸಹಾ ಒಂದು ಭರವಸೆ, ಆತ್ಮ ವಿಶ್ವಾಸ ನಮಗೆ ಕಾಣುತ್ತದೆ.

ಯುವತಿಯು ತನ್ನ ಸ್ಕೂಟಿಯ ಅಂಚಿಗೆ ಬಂದು, ಬ್ಯಾಕ್ ಫ್ಲಿಪ್ ಮಾಡಲು ಸಜ್ಜಾಗುತ್ತಾಳೆ. ಅನಂತರ ಆಕೆ ಸ್ಮೈಲ್ ನೀಡುತ್ತಾ ಬ್ಯಾಕ್ ಫ್ಲಿಪ್ ಮಾಡುತ್ತಾಳೆ. ಆದರೆ ಲ್ಯಾಂಡಿಂಗ್ ಮಾಡುವಾಗ ಆಕೆಯು ಸ್ಲಿಪ್ ಆಗಿ ಆಕೆಯ ಬ್ಯಾಕ್ ಫ್ಲಿಪ್ ಪರ್ಫೆಕ್ಟ್ ಆಗಿ ಆಗುವುದಿಲ್ಲ. ಆಕೆ ರಸ್ತೆ ಮೇಲೆ ಬೀಳುತ್ತಾಳೆ. ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಆಗಿದ್ದು, ಈ ವೀಡಿಯೊವನ್ನು ನೋಡಿದ ನೆಟ್ಟಿಗರು ಸಹಾ ವೈವಿದ್ಯಮಯ ಕಾಮೆಂಟ್ ಗಳನ್ನು ಮಾಡುತ್ತಾ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

Leave a Reply

Your email address will not be published.