ಸೀರೆಯುಟ್ಟು ಭಲೇ ಭಲೇ ಎನ್ನುವಂತೆ ಬ್ಯಾಸ್ಕೆಟ್ ಬಾಲ್ ಆಡಿದ ಸನ್ನಿ ಲಿಯೋನಿ: ವೀಡಿಯೋ ನೋಡಿ ನಿದ್ದೆಗೆಟ್ಟ ಪಡ್ಡೆಗಳು

Entertainment Featured-Articles News Viral Video

ಬಾಲಿವುಡ್ ನಟಿ ಸನ್ನಿ ಲಿಯೋನಿ ಎಂದೊಡನೆ ಪಡ್ಡೆಗಳ ನೋಟ ಹಾಗೂ ಗಮನ ಅತ್ತ ಕಡೆ ಹೊರಳುತ್ತದೆ. ಸೋಶಿಯಲ್ ಮೀಡಿಯಾಗಳಲ್ಲಿ ಸಹಾ ಸನ್ನಿ ಲಿಯೋನಿ ಹೊಸ ಫೋಟೋಗಳು ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ವೈರಲ್ ಆಗುತ್ತಾ, ಲಕ್ಷಗಳ ಸಂಖ್ಯೆಯಲ್ಲಿ ಮೆಚ್ಚುಗೆಗಳು ಹರಿದು ಬರಲಾರಂಭಿಸುತ್ತದೆ. ಸನ್ನಿ ಲಿಯೋನಿ ಯನ್ನು ಅಭಿಮಾನಿಸುವ ದೊಡ್ಡ ಅಭಿಮಾನಿಗಳ ಬಳಗವೇ ಇದೆ ಎನ್ನುವುದರಲ್ಲಿ ಖಂಡಿತ ಎರಡು ಮಾತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ನಟಿಯನ್ನು ಹಿಂಬಾಲಿಸುವವರ ಸಂಖ್ಯೆ ಕೂಡಾ ದೊಡ್ಡದಾಗಿದೆ.

ಸದಾ ತನ್ನ ಹಾಟ್ ಹಾಟ್ ಲುಕ್ ನ ಫೋಟೋಗಳಿಂದ ಯುವಕರ ಹೃದಯ ಬಡಿತವನ್ನು ಏರಿಸುತ್ತಿದ್ದ ಸನ್ನಿ ಲಿಯೋನಿ ಇದೀಗ ಒಂದು ಹೊಸ ವೀಡಿಯೋ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ.‌ ಹೌದು ನಟಿ ಸನ್ನಿ ಲಿಯೋನಿ ಬ್ಯಾಸ್ಕೆಟ್ ಬಾಲ್ ಆಡುತ್ತಿರುವ ವೀಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಾ ಸಾಗಿದ್ದು, ಸನ್ನಿ ಅಭಿಮಾನಿಗಳ ಕಡೆಯಿಂದ ಭರ್ಜರಿ ಮೆಚ್ಚುಗೆ ಗಳು ಸಹಾ ಹರಿದು ಬರುತ್ತಿವೆ. ಕಾಮೆಂಟ್ ಗಳನ್ನು ಮಾಡಿ ಅನೇಕರು ಸನ್ನಿಯನ್ನು ಹಾಡಿ ಹೊಗಳುತ್ತಿದ್ದಾರೆ.

ನಟಿ ಸನ್ನಿ ಲಿಯೋನಿ ತೆರೆಯ ಮೇಲೆ ಮಾದಕವಾಗಿ ನೃತ್ಯ ಮಾಡುವುದನ್ನು ಕಂಡು ಬೆರಗಾಗುವ, ಮೋಹಕವಾಗಿ ಸೊಂಟ ಬಳುಕಿಸುವ ನಟಿಯ ಮೈಮಾಟಕ್ಕೆ ಮಾರು ಹೋಗುವ ಮಂದಿ ಈಗ ಸನ್ನಿ ಬ್ಯಾಸ್ಕೆಟ್ ಬಾಲ್ ಆಡುವ ವೀಡಿಯೋ ನೋಡಿ ಖುಷಿಯಾಗಿದ್ದಾರೆ. ಸನ್ನಿ ತಮ್ಮ ಪತಿ ಡೇನಿಯಲ್ ಜೊತೆಗೆ ಬ್ಯಾಸ್ಕೆಟ್ ಬಾಲ್ ಆಡುತ್ತಿದ್ದು, ಕೆಂಪು ಸೀರೆ ಉಟ್ಟ ನಟಿಯ ನೆಟ್ಟಿಗರು ಮಾತ್ರವೇ ಅಲ್ಲದೇ ಅವರ ಪತಿ ಡೇನಿಯಲ್ ಸಹಾ ಫಿದಾ ಆದಂತೆ ಕಾಣುತ್ತಿದೆ ವೀಡಿಯೋದಲ್ಲಿ.

ಸನ್ನಿ ಕುಚ್ ಕುಚ್ ಹೋತಾ ಹೈ ಸಿನಿಮಾದ ಸೂಪರ್ ಹಿಟ್ ಹಾಡು, ಏ ಲಡ್ಕಾ ಹೈ ದೀವಾನಾ ಹಾಡನ್ನು ಬ್ಯಾಕ್ ಗ್ರೌಂಡ್ ನಲ್ಲಿ ಸಂಯೋಜಿಸಿ, ಪತಿಯೊಂದಿಗೆ ಬ್ಯಾಸ್ಕೆಟ್ ಬಾಲ್ ಆಡುತ್ತಿರುವ ವಿಡಿಯೋ ಶೇರ್ ಮಾಡಿ, ನಿಮ್ಮ ಉತ್ತಮ ಸ್ನೇಹಿತನನ್ನು ಟ್ಯಾಗ್ ಮಾಡಿ ಎಂದು ಅದರ ಜೊತೆಗೆ ಬರೆದುಕೊಂಡಿದ್ದಾರೆ. ಸನ್ನಿಯ ಮಾದಕ ಆಟವನ್ನು ನೋಡಿ ಅವರ ಅಭಿಮಾನಿಗಳ ಖುಷಿಗೆ ಎಲ್ಲೆ ಇಲ್ಲದಂತಾಗಿದ್ದು, ವೀಡಿಯೋಗೆ ಭರ್ಜರಿ ಲೈಕ್ಸ್ ಮತ್ತು ಕಾಮೆಂಟ್ ಗಳು ಹರಿದು ಬರುತ್ತಿವೆ.

Leave a Reply

Your email address will not be published.