ಸೀರಿಯಲ್ ವಿವಾದ: ಜೊತೆ ಜೊತೆಯಲಿ ಸೀರಿಯಲ್ ನಟಿ ಮೇಘಾ ಶೆಟ್ಟಿ ಪ್ರತಿಕ್ರಿಯೆಗೆ ಶಾಕ್ ಆಗ್ತಿದ್ದಾರೆ ನೆಟ್ಟಿಗರು

Entertainment Featured-Articles Movies News
63 Views

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ ವಿಚಾರವಾಗಿ ಕಳೆದ ಎರಡು ದಿನಗಳಿಂದಲೂ ಸಾಕಷ್ಟು ಸುದ್ದಿಗಳಾಗುತ್ತಲೇ ಇದೆ. ಈ ಸೀರಿಯಲ್ ನಿಂದ ನಟ ಆರ್ಯವರ್ಧನ್ ಅವರನ್ನು ತೆಗೆದು ಹಾಕಿದ್ದು, ಈ ವಿಚಾರವಾಗಿ ದೊಡ್ಡ ಚರ್ಚೆಗಳೇ ನಡೆಯುತ್ತಿದೆ. ನಟ ಅನಿರದ್ಧ್ ಅವರ ಅತಿರೇಕದ ವರ್ತನೆಯಿಂದ ಬೇಸತ್ತು, ಅವರನ್ನು ಈ ಸೀರಿಯಲ್ ನಿಂದ ಕೈ ಬಿಡಲಾಗಿದೆ ಎನ್ನುವ ಮಾತನ್ನು ಸೀರಿಯಲ್ ನ ನಿರ್ಮಾಪಕರಾದ ಆರೂರು ಜಗದೀಶ್ ಅವರು ಮಾದ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಅಲ್ಲದೇ ಅನಿರುದ್ಧ್ ಅವರಿಂದ ತಮಗೆ ಎದುರಾದ ಸಮಸ್ಯೆಗಳ ಕುರಿತಾಗಿಯೂ ಅವರು ಸಾಕಷ್ಟು ವಿಚಾರಗಳನ್ನು ಮಾತನಾಡಿದ್ದಾರೆ. ಈಗ ಇವೆಲ್ಲವುಗಳ ಬೆನ್ನಲ್ಲೇ ಇದೇ ಸೀರಿಯಲ್ ನ ನಾಯಕಿ ನಟಿ ಮೇಘಾ ಶೆಟ್ಟಿ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಜೊತೆ ಜೊತೆಯಲಿ ಸೀರಿಯಲ್ ನಲ್ಲಿನ ಆರ್ಯವರ್ಧನ್ ಮತ್ತು ಅನು ಸಿರಿಮನೆ ಜೋಡಿ ಕಿರುತೆರೆಯ ಪ್ರೇಕ್ಚಕರ ಅಚ್ಚು ಮೆಚ್ಚಿನ ಜೋಡಿಗಳಲ್ಲಿ ಒಂದಾಗಿದೆ. ಆದರೆ ಈಗ ಅನಿರುದ್ಧ್ ಅವರನ್ನು ಸೀರಿಯಲ್ ನಿಂದ ಕೈ ಬಿಟ್ಟಿರುವ ಕಾರಣದಿಂದಾಗಿ ಪ್ರೇಕ್ಷಕರು ಈ ವಿಚಾರವನ್ನು ಹೇಗೆ ಸ್ವೀಕಾರ ಮಾಡಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಇನ್ನು ಆರ್ಯವರ್ಧನ್ ಅವರನ್ನು ಸೀರಿಯಲ್ ನಿಂದ ಕೈ ಬಿಟ್ಟಿರುವ ವಿಚಾರವಾಗಿ ಮಾದ್ಯಮವೊಂದಕ್ಕೆ ನಟಿ ಮೇಘಾ ಶೆಟ್ಟಿ ಅವರು ಸಂದರ್ಶನ ನೀಡಿದ್ದು, ಅವರು ನೀಡಿರುವ ಹೇಳಿಕೆ ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದೆ.

ಹೌದು,‌ ನಟಿ ಮೇಘಾ ಶೆಟ್ಟಿ ಅವರು ಮಾದ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡುತ್ತಾ, ನಾನು ಕಳೆದ ಎರಡು ದಿನಗಳಿಂದಲೂ ನಾನು ಯಾವುದೇ ನ್ಯೂಸ್ ನೋಡಿಲ್ಲ ಎಂದು ಹೇಳಿದ್ದಾರೆ. ಸೀರಿಯಲ್ ಸೆಟ್ ನಲ್ಲಿ ಜಗಳವಾಗಿದ್ದು ನಿಜ. ಅಲ್ಲಿ ಸಣ್ಣ ಪುಟ್ಟ ಗಲಾಟೆಗಳು ಸಹಾ ನಡೆಯುತ್ತಲಿರುತ್ತದೆ. ಇಷ್ಟು ದಿನ ಸಂಧಾನದ ಮೂಲಕ ಎಲ್ಲವೂ ಸಹಾ ಸರಿಯಾಗಿದೆ. ಈ ವಿಚಾರದಲ್ಲೂ ಸಹಾ ಒಳ್ಳೆಯದೇ ಆಗಲಿದೆ ಎಂದು ನಟಿ ಮಾದ್ಯಮಕ್ಕೆ ಹೇಳಿದ್ದಾರೆ. ಕಳೆದ ಎರಡು ದಿನಗಳಿಂದ ಮಾದ್ಯಮಗಳಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿರುವ ಈ ವಿಚಾರದ ಬಗ್ಗೆ ನಟಿ ತನಗೆ ತಿಳಿದೇ ಇಲ್ಲ ಎಂದಿರುವುದು ಅಚ್ಚರಿಯನ್ನು ಮೂಡಿಸಿದೆ.

Leave a Reply

Your email address will not be published. Required fields are marked *