ಸೀರಿಯಲ್ ಬೇಡ ಅಂತಿದ್ದ ಈ ನಟಿ ಈಗ ಪುಟ್ಟಕ್ಕನ ಮಗಳು ಸ್ನೇಹ ಪಾತ್ರದಲ್ಲಿ ಮಾಡ್ತಿದ್ದಾರೆ ಕಮಾಲ್

Entertainment Featured-Articles News

ಕನ್ನಡ ಕಿರುತೆರೆಯ ಲೋಕದಲ್ಲಿ ಯಾವ ಸೀರಿಯಲ್ ಯಾವಾಗ ಟಾಪ್ ಸ್ಥಾನವನ್ನು ತಲುಪುತ್ತದೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಪ್ರಸ್ತುತ ಕನ್ನಡ ಖಾಸಗಿ ವಾಹಿನಿಯ ಪುಟ್ಟಕ್ಕನ ಮಕ್ಕಳು ಇದೀಗ ಕಿರುತೆರೆಯಲ್ಲಿ ದೊಡ್ಡ ಸಂಚಲನವನ್ನು ಸೃಷ್ಟಿಸಿದೆ. ಅಲ್ಲದೇ ಟಿ ಆರ್ ಪಿ ರೇಸ್ ನಲ್ಲಿ ದೊಡ್ಡ ಮಟ್ಟದ ಸಕ್ಸಸ್ ಪಡೆದಿರುವ ಸೀರಿಯಲ್ ಆರಂಭವಾದ ಮೊದಲನೇ ವಾರದಿಂದಲೇ ಟಾಪ್ ಒನ್ ಸೀರಿಯಲ್ ಆಗಿ ಯಶಸ್ಸಿನ ನಾಗಾಲೋಟವನ್ನು ಮಾಡುತ್ತಲಿದೆ. ಇನ್ನು ಈ ಸೀರಿಯಲ್ ನಟ ನಟಿಯರು ಸಹಾ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ತಮ್ಮ ಪಾತ್ರಗಳ ಹೆಸರಿನಿಂದಲೇ ಜನ ಮನ್ನಣೆ ಪಡೆದಿದ್ದಾರೆ.

ಪುಟ್ಟಕ್ಕನ ಮೂರು ಜನ ಹೆಣ್ಣು ಮಕ್ಕಳಲ್ಲಿ ಎರಡನೇ ಮಗಳಾಗಿ, ಸಮಸ್ಯೆಗಳನ್ನೆಲ್ಲಾ ದಿಟ್ಟತನದಿಂದ ಎದುರಿಸುವ, ಬಿಂದಾಸ್ ಮಾತನಾಡುವ, ಶೋ ಷ ಣೆಯ ವಿ ರು ದ್ಧ ದನಿ ಎತ್ತುವ, ಐಎಎಸ್ ಅಧಿಕಾರಿಯಾಗಬೇಕೆಂಬ ಕನಸನ್ನು ಹೊತ್ತ ಮಗಳು ಸ್ನೇಹ ಹೆಸರಿನ ಪಾತ್ರದಲ್ಲಿ ಮಿಂಚುತ್ತಿದ್ದಾರೆ ಯುವ ನಟಿ, ಸಂಜನಾ ಬುರ್ಲಿ. ಮಾದ್ಯಮ ಒಂದರ ಸಂದರ್ಶನದಲ್ಲಿ ನಟಿ ಸಂಜನಾ ಬುರ್ಲಿ ಪುಟ್ಟಕ್ಕನ ಮಕ್ಕಳು ಸೀರಿಯಲ್ ನಲ್ಲಿನ ತನ್ನ ಪಾತ್ರಕ್ಕೆ ಸಿಕ್ಕಿರುವ ಯಶಸ್ಸಿಗಾಗಿ, ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಸಂಜನಾ ಬುರ್ಲಿ ಅವರ ಮೊದಲ ಸೀರಿಯಲ್ ಲಗ್ನ ಪತ್ರಿಕೆ. ಆದರೆ ಪಾತ್ರವು ಜನಪ್ರಿಯತೆ ಪಡೆಯುವ ಮೊದಲೇ ಕಾರಣಾಂತರಗಳಿಂದ ಸೀರಿಯಲ್ ಪ್ರಸಾರ ನಿಂತಿತು. ಇದಾದ ಮೇಲೆ ಸೀರಿಯಲ್ ಗಳೇ ಬೇಡ, ವಿದ್ಯಾಭ್ಯಾಸದ ಕಡೆಗೆ ಗಮನ ನೀಡಬೇಕು ಎಂದು ಆಲೋಚನೆಯನ್ನು ಮಾಡಿದ್ದರಂತೆ ಸಂಜನಾ.. ಆದರೆ ಮೂರು ತಿಂಗಳ ನಂತರ ಅವರಿಗೆ ನಿರ್ದೇಶಕ ಆರೂರು ಜಗದೀಶ್ ಅವರ ಕಡೆಯಿಂದ ಪುಟ್ಟಕ್ಕನ ಮಕ್ಕಳು ಸೀರಿಯಲ್ ಗೆ ಅವಕಾಶವನ್ನು ನೀಡಿ ನಟಿಸುವಂತೆ ಕೇಳಿದ್ದರು ಎನ್ನಲಾಗಿದೆ.

ಆದರೆ ಆಗ ಸಂಜನಾ ಕಾಲೇಜುಗಳು ತೆರೆದ ಕಾರಣ, ವಿದ್ಯಾಭ್ಯಾಸಕ್ಕೆ ತೊಂದರೆ ಆಗಬಾರದೆಂದು ಅವಕಾಶ ನಿರಾಕರಿಸಿದ್ದರಂತೆ. ಅಲ್ಲದೇ ಮತ್ತೊಂದು ಸೀರಿಯಲ್ ನ ಅವಕಾಶ ಸಹಾ ಬೇಡ ಎಂದಿದ್ದರಂತೆ. ಅದೇ ವೇಳೆ ಕೊರೊನಾ ಮೂರನೇ ಅಲೆ ಕಾರಣದಿಂದ ಆನ್‌ಲೈನ್ ಕ್ಲಾಸ್ ಗಳು ಆರಂಭವಾದ ಕಾರಣ ಸಂಜನಾ ಸೀರಿಯಲ್ ಮಾಡುವ ಕಡೆಗೆ ಒಲವು ತೋರಿಸಿದರು. ಅದರ ನಂತರ ಸ್ನೇಹ ಪಾತ್ರದಲ್ಲಿ ಸಂಜನಾ ಅವರು ಸೃಷ್ಟಿಸಿದ ಕ್ರೇಜ್ ಎಲ್ಲರಿಗೂ ತಿಳಿದೇ ಇದೆ, ಇಂದು ಪುಟ್ಟಕ್ಕನ ಮಗಳಾಗಿ ಸಂಜನಾ ಅವರು ಸ್ನೇಹ ಪಾತ್ರದಲ್ಲಿ ಕಮಾಲ್ ಮಾಡ್ತಾ ಇದ್ದಾರೆ.

Leave a Reply

Your email address will not be published.