ಸೀರಿಯಲ್ ನಲ್ಲಿ ನಟಿಸುತ್ತಲೇ ವಿದ್ಯಾಭ್ಯಾಸ ಕೈ ಬಿಡದೆ ಪದವಿ ಪೂರ್ಣ ಮಾಡಿದ ಗಟ್ಟಿಮೇಳದ ಅದಿತಿ
ಮನೆಯಲ್ಲಿ ಇರುವಾಗ ಮನರಂಜನೆಯ ಪ್ರಮುಖ ಮಾಧ್ಯಮ ಎಂದರೆ ಅದು ಕಿರುತೆರೆಯಾಗಿದೆ. ಕಿರುತೆರೆ ಎಂದ ಕೂಡಲೇ ಅದರಲ್ಲಿ ಪ್ರಸಾರವಾಗುವ ಧಾರಾವಾಹಿಗಳನ್ನು ಹೇಗೆ ತಾನೇ ಬಿಡಲು ಸಾಧ್ಯ ಹೇಳಿ?? ಧಾರಾವಾಹಿಗಳು ಮನರಂಜನೆಯ ಅದರಲ್ಲೂ ವಿಶೇಷವಾಗಿ ಹೆಚ್ಚು ಸಮಯ ಮನೆಯಲ್ಲೇ, ಮನೆಯ ಕೆಲಸಗಳಲ್ಲೇ ತೊಡಗಿಕೊಂಡಿರುವ ಮಹಿಳೆಯರ ಮನರಂಜನೆಯ ಪ್ರಮುಖ ಮೂಲವಾಗಿದೆ. ಧಾರಾವಾಹಿಗಳು ಅವರ ಮನಸ್ಸಿಗೆ ಖುಷಿಯನ್ನು ನೀಡುತ್ತದೆ. ಇನ್ನು ಇತ್ತೀಚಿನ ದಿನಗಳಲ್ಲಂತೂ ಒಂದಕ್ಕಿಂತ ಮತ್ತೊಂದು ಎನ್ನುವಂತೆ ಅದ್ದೂರಿ ಧಾರವಾಹಿ ಗಳು ಕಿರುತೆರೆಯಲ್ಲಿ ಪ್ರಸಾರವಾಗುತ್ತಿವೆ.
ದೃಶ್ಯ ವೈಭವದ ಮೂಲಕ ಮನೆಮಂದಿಯನ್ನೆಲ್ಲ ತನ್ನೆಡೆಗೆ ಸೆಳೆಯುವ ಮೂಲಕ ಸೀರಿಯಲ್ ಗಳು ಯಶಸ್ಸನ್ನು ಪಡೆದುಕೊಂಡಿವೆ. ಇಂತಹ ಯಶಸ್ವಿ ಧಾರಾವಾಹಿಗಳ ಸಾಲಿನಲ್ಲಿ ಕನ್ನಡ ಕಿರುತೆರೆಯಲ್ಲಿ ಮೂಡಿ ಬರುವ ಗಟ್ಟಿಮೇಳ ಧಾರಾವಾಹಿ ಕೂಡಾ ಸೇರಿದೆ. ಟಿ ಆರ್ ಪಿ ಗಳಿಕೆಯಲ್ಲಿಯೂ ಉತ್ತಮ ಸಾಧನೆಯನ್ನು ಮೆರೆದು, ಟಾಪ್ 5 ಧಾರಾವಾಹಿಗಳಲ್ಲಿ ಸ್ಥಾನವನ್ನು ಪಡೆದುಕೊಂಡಿದೆ ಗಟ್ಟಿಮೇಳ. ಈ ಧಾರಾವಾಹಿಯಲ್ಲಿ ನಾಯಕ ನಾಯಕಿಯ ಪಾತ್ರ ಮಾತ್ರವಲ್ಲದೆ ಉಳಿದ ಪಾತ್ರಗಳಿಗೆ ಕೂಡ ವಿಶೇಷ ಮಹತ್ವವನ್ನು ನೀಡಿರುವುದು ಪ್ರಮುಖ ಆಕರ್ಷಣೆಯಾಗಿದೆ.
ಅಂತಹ ಪಾತ್ರಗಳಲ್ಲಿ ಸೀರಿಯಲ್ ನ ನಾಯಕಿಯ ಪಾತ್ರವಾದ ಅಮೂಲ್ಯ ತಂಗಿಯ ಪಾತ್ರವೂ ಸೇರಿದೆ. ಹೌದು ನಾಯಕಿ ಅಮೂಲ್ಯಳ ಇಬ್ಬರು ತಂಗಿಯರಲ್ಲಿ ಒಂದು ಪಾತ್ರವಾದ ಅದಿತಿ ಪಾತ್ರ ಬಹಳ ಚಟುವಟಿಕೆ ಹಾಗೂ ತುಂಟಾಟ ಗಳಿಗೆ ಹೆಸರಾಗಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದ್ದು, ಕಿರುತೆರೆ ಪ್ರೇಕ್ಷಕರ ಮನಸ್ಸಿನ್ನು ಗೆದ್ದಿದೆ. ಅದಿತಿ ಪಾತ್ರದಲ್ಲಿ ಅಕ್ಕನ ಜೊತೆ ಜಗಳವಾಡುತ್ತಾ, ಪಟ ಪಟ ಮಾತನಾಡುವ ಪಾತ್ರದಲ್ಲಿ ನಟಿಸುತ್ತಿರುವುದು ಪ್ರಿಯಾ ಆಚಾರ್ ಅವರು.
ಗಟ್ಟಿವೇಳ ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ನೀಡಿರುವ ಪ್ರಿಯಾ ಡಾನ್ಸ್ ರಿಯಾಲಿಟಿ ಶೋ ನಲ್ಲೂ ಕಾಣಿಸಿಕೊಂಡು ತನ್ನ ಡಾನ್ಸ್ ಪ್ರತಿಭೆಯನ್ನು ಎಲ್ಲರ ಮುಂದೆ ತೋರಿಸಿ ಮೆಚ್ಚುಗೆ ಪಡೆದಿದ್ದರು. ಸೋಶಿಯಲ್ ಮೀಡಿಯಾ ದಲ್ಲಿ ಸಕ್ರಿಯವಾಗಿರುವ ಪ್ರಿಯ ಕೆಲವು ದಿನಗಳ ಹಿಂದೆಯಷ್ಟೇ ಒಂದು ಸಂತೋಷದ ವಿಚಾರವನ್ನು ಹಂಚಿಕೊಂಡಿದ್ದಾರೆ. ಹೌದು ಪ್ರಿಯ ಸೀರಿಯಲ್ ನಲ್ಲಿ ನಟಿಸುತ್ತಲೇ ಮತ್ತೊಂದು ಕಡೆ ತಮ್ಮ ಪದವಿ ಶಿಕ್ಷಣವನ್ನು ಪೂರ್ತಿ ಮಾಡಿದ್ದಾರೆ.
ಪ್ರಿಯ ಅವರು ಡಿಗ್ರಿ ಪಡೆದ ಖುಷಿಯನ್ನು, ಗ್ರಾಜುಯೇಷನ್ ನ ಸುಂದರ ಕ್ಷಣಗಳನ್ನು ಅಪ್ಪ ಅಮ್ಮನೊಡನೆ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವರು ಶೇರ್ ಮಾಡಿದ ಫೋಟೋ ನೋಡಿ ಅವರ ಅಭಿಮಾನಿಗಳು ಹಾಗೂ ನೆಟ್ಟಿಗರು ಪ್ರಿಯಾ ಅವರಿಗೆ ಪದವಿ ಪಡೆದ ಹಿನ್ನೆಲೆಯಲ್ಲಿ ಶುಭವನ್ನು ಹಾರೈಸುತ್ತಿದ್ದಾರೆ. ಪ್ರಿಯ ಅವರು ಉನ್ನತ ಶಿಕ್ಷಣವನ್ನು ಪಡೆದು ಇನ್ನಷ್ಟು ಸಾಧನೆ ಮಾಡಲೆಂದು ಶುಭ ಕೋರಿದ್ದಾರೆ.