ಸೀರಿಯಲ್ ನಟ ಉಕ್ರೇನ್ ಅಧ್ಯಕ್ಷನಾಗಿದ್ದು ಹೇಗೆ? ಇದು ಝೆಲೆನ್ಸ್ಕಿ ಸಾಧನೆ ಅಲ್ಲದೇ ಇನ್ನೇನು??

Entertainment Featured-Articles News Wonder

ಸದ್ಯಕ್ಕೆ ಜಗತ್ತಿನ ದೃಷ್ಟಿ ಉಕ್ರೇನ್ ನ ಕಡೆಗೆ ನೆಟ್ಟಿದೆ. ವಿಶ್ವದ ಅನೇಕರು ಉಕ್ರೇನ್ ನ ಕಡೆಗೆ ಕರುಣೆಯಿಂದ ನೋಡುವಂತಹ ಪರಿಸ್ಥಿತಿ ಎದುರಾಗಿದೆ. ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಈ ಸ ಮ ರವು ಒಂದು ರೀತಿಯಲ್ಲಿ ಅಶಾಂತಿಯ ವಾತಾವರಣವನ್ನು ನಿರ್ಮಾಣ ಮಾಡಿದೆ. ಈ ವೇಳೆ ಉಕ್ರೇನ್ ಗೆ ಬೆಂಬಲವಾಗಿ ಹಲವು ರಾಷ್ಟ್ರಗಳು ನಿಂತಿವೆ. ಇಂತಹುದೊಂದು ಸಂಕಷ್ಟದ ಸಂದರ್ಭದಲ್ಲಿ ಉಕ್ರೇನ್ ನ ಅಧ್ಯಕ್ಷ ವೊಲೆಡಿಮಿರ್ ಝೆಲೆನ್ಸ್ಕಿ ತಮ್ಮ ಸೈನ್ಯವನ್ನು ಹಾಗೂ ದೇಶವನ್ನು ಮುನ್ನಡೆಸುತ್ತಿರುವ ವಿಧಾನ ಮೆಚ್ಚುಗೆಗೆ ಪಾತ್ರವಾಗಿದೆ.

ವೊಲೆಡಿಮಿರ್ ಝೆಲೆನ್ಸ್ಕಿ ಉಕ್ರೇನ್ ನ ಪ್ರಧಾನಿಯಾಗುವ ಮೊದಲು ಧಾರಾವಾಹಿಯ ನಟನಾಗಿದ್ದರು ಎನ್ನುವುದು ಅನೇಕರಿಗೆ ತಿಳಿದಿಲ್ಲ. ಇವರು ಸೀರಿಯಲ್ ಒಂದರಲ್ಲಿ ಶಿಕ್ಷಕನ ಪಾತ್ರವನ್ನು ನಿರ್ವಹಿಸಿದ್ದರು. ತಮ್ಮ ಪಾತ್ರದ ಮೂಲಕ ಅವರು ಆಡಳಿತ ಸರ್ಕಾರವನ್ನು ಹಾಗೂ ಅದರ ಕಾರ್ಯ ವೈಖರಿಯನ್ನು ಕಟುವಾಗಿ ಟೀಕೆ ಮಾಡುವ ಮೂಲಕ ಜನರ ಮನಸ್ಸನ್ನು ಗೆದಿದ್ದರು. ಅವರ ಈ ಪಾತ್ರ ಅಪಾರವಾದ ಜನ ಮನ್ನಣೆಯನ್ನು ತಂದು ಕೊಟ್ಟಿತು.

ಇದಾದ ನಂತರ ವೊಲೆಡಿಮಿರ್ ಝೆಲೆನ್ಸ್ಕಿ 2019 ರಲ್ಲಿ ಅಧ್ಯಕ್ಷ ಚುನಾವಣೆಗೆ ನಿಂತ ಸಂದರ್ಭದಲ್ಲಿ ಅಲ್ಲಿನ ಜನರು ಅವರು ಧಾರಾವಾಹಿಯಲ್ಲಿ ನಿರ್ವಹಿಸಿದ ಪಾತ್ರದಂತೆಯೇ ತಮ್ಮ ನಿಜ ಜೀವನದಲ್ಲಿ ಸಹಾ ಜನರಿಗೆ ಒಳ್ಳೆಯ ಆಡಳಿತವನ್ನು ನೀಡಲು ಪ್ರಯತ್ನ ಪಡುವರು ಎನ್ನುವ ನಂಬಿಕೆಯ ಮೇಲೆ ಜನರು ಅವರಿಗೆ ಮತವನ್ನು ನೀಡಿದರು. ಝೆಲೆನ್ಸ್ಕಿ ಜನಿಸಿದ್ದು 1978, ಜನವರಿ 25 ರಂದು ಜನಿಸಿದರು. ಇವರ ಸಂಬಂಧಿಗಳು ಯೆಹೂದಿಗಳಾಗಿದ್ದರು.

ಝೆಲೆನ್ಸ್ಕಿ ಕಾನೂನು ಪದವಿಯನ್ನು ಪೂರ್ತಿಗೊಳಿಸಿದ ನಂತರ ಅವರು ನಾಟಕಗಳು, ನಟನೆ ಎಂದು ಅತ್ತ ಕಡೆ ತಮ್ಮ ಆಸಕ್ತಿಯನ್ನು ತೋರಿಸಿದರು. ಅವರು ನಾಟಕ ತಂಡವೊಂದನ್ನು ರಚಿಸಿದರು. ನಂತರ ಅದು ಟಿವಿಯ ಒಂದು ಜನಪ್ರಿಯ ಸರಣಿಯಾಗಿ ಹೆಸರುವಾಸಿಯಾಯಿತು. ತಮ್ಮ ಸೀರಿಯಲ್ ಮೂಲಕ ಜನರಲ್ಲಿ ಒಂದು ಜಾಗೃತಿ ಮೂಡಿಸಿ, ರಷ್ಯಾ ಬೆದರಿಕೆಯ ನಡುವೆ ಜನರಿಗೆ ಝೆಲೆನ್ಸ್ಕಿ ಸೀರಿಯಲ್ ಸ್ವಲ್ಪ ನಿರಾಳತೆಯನ್ನು ನೀಡಿತ್ತು ಎನ್ನಬಹುದು.

ದೂರದರ್ಶನ ಸರಣಿಯಲ್ಲಿ ಅಧ್ಯಕ್ಷರ ಪಾತ್ರವನ್ನು ನಿರ್ವಹಿಸಿ ಜನರನ್ನು ಮೆಚ್ಚಿಸಿದ ಝೆಲೆನ್ಸ್ಕಿ ನಂತರ ಅದೇ ಹೆಸರಿನಲ್ಲಿ ಪಕ್ಷವೊಂದನ್ನು ಸ್ಥಾಪನೆ ಮಾಡಿದರು. ಚುನಾವಣೆಯನ್ನು ಎದುರಿಸಿದರು, 41 ನೇ ವಯಸ್ಸಿನಲ್ಲಿ 73% ಮತಗಳೊಂದಿಗೆ ಪ್ರಚಂಡವಾದ ವಿಜಯವನ್ನು ಪಡೆದುಕೊಂಡರು. ಮುಂದಿನ ದಿನಗಳಲ್ಲಿ ಅವರು ಹೆಚ್ಚು ಜನಪ್ರಿಯತೆ ಹಾಗೂ ಜನ ಮನ್ನಣೆಯನ್ನು ಪಡೆಯುವಲ್ಲಿ ಯಶಸ್ವಿಯಾದರು.

Leave a Reply

Your email address will not be published.