ಸೀರಿಯಲ್ ತಂಡದಲ್ಲಿ ಕಿರಿಕ್: ಆರ್ಯವರ್ಧನ್ ಪಾತ್ರದಿಂದ ನಟ ಅನಿರುದ್ಧ್ ಔಟ್?? ಏನಿದು ಶಾಕಿಂಗ್ ಸುದ್ದಿ

Entertainment Featured-Articles Movies News

ಕನ್ನಡ ಕಿರುತೆರೆಯ ಜನಪ್ರಿಯ ಹಾಗೂ ಜನಮೆಚ್ಚಿದ ಧಾರಾವಾಹಿಯಾಗಿ ಸಾಕಷ್ಟು ಜನಪ್ರಿಯತೆಯನ್ನು ಹಾಗೂ ಯಶಸ್ಸನ್ನು ಪಡೆದುಕೊಂಡಿರುವ ಜೊತೆ ಜೊತೆಯಲಿ ಧಾರಾವಾಹಿ ಬಹಳಷ್ಟು ಜನ ಕಿರುತೆರೆಯ ಪ್ರೇಕ್ಷಕರ ಅಚ್ಚುಮೆಚ್ಚಿನ ಧಾರಾವಾಹಿಯಾಗಿದೆ. ಈ ಧಾರಾವಾಹಿಯಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸುತ್ತಿರುವ ಕಲಾವಿದರೂ ಸಹಾ ತಮ್ಮ ಪಾತ್ರಗಳ ಮೂಲಕವೇ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ಸನ್ನು ಪಡೆದುಕೊಂಡಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಾಯಕ ಆರ್ಯವರ್ಧನ್ ಪಾತ್ರವನ್ನು ನಟ ಅನಿರುದ್ಧ ಅವರು ಬಹಳ ಸೊಗಸಾಗಿ ನಿರ್ವಹಿಸಿಕೊಂಡು ಬಂದಿದ್ದು ಅವರ ಪಾತ್ರಕ್ಕೂ ಪ್ರೇಕ್ಷಕರಿಂದ ವಿಶೇಷ ಮನ್ನಣೆ ದೊರೆತಿದೆ.

ಆರ್ಯವರ್ಧನ್ ಪಾತ್ರಕ್ಕೆ ಅನಿರುದ್ಧ್ ಅವರೇ ಸೂಕ್ತ ಎನ್ನುವುದು ಅವರ ಅಭಿಮಾನಿಗಳು ಹಾಗೂ ಕಿರುತೆರೆಯ ಪ್ರೇಕ್ಷಕರ ಅಭಿಪ್ರಾಯವಾಗಿದೆ. ಆದರೆ ಈಗ ಹೊಸದೊಂದು ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ನಟ ಅನಿರುದ್ಧ ಅವರ ಜೊತೆಗೆ ಜೊತೆ ಜೊತೆಯಲಿ ಧಾರಾವಾಹಿಯ ತಂತ್ರಜ್ಞರ ತಂಡವು ಮುನಿಸಿಕೊಂಡಿದೆ ಎಂದು ಹೇಳಲಾಗುತ್ತಿದ್ದು, ಚಿತ್ರೀಕರಣದ ಸೆಟ್ ನಲ್ಲಿ ಕೆಲವೊಂದು ವಿಚಾರಗಳಲ್ಲಿ ಕಿರಿಕ್ ನಡೆದಿದೆ ಎನ್ನುವ ಸುದ್ದಿಯೊಂದು ಈಗ ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿದೆ. ಈ ಸುದ್ದಿಯ ಬೆನ್ನಲ್ಲೇ ಅನಿರುದ್ಧ್ ಅವರು ಆರ್ಯವರ್ಧನ್ ಪಾತ್ರದಲ್ಲಿ ಇರುತ್ತಾರೋ, ಇಲ್ಲವೋ ಎನ್ನುವ ಪ್ರಶ್ನೆಯೊಂದು ಸಹಾ ಹುಟ್ಟುಕೊಂಡಿದೆ.

ಈ ವಿಚಾರವಾಗಿ ಜೀ ಕನ್ನಡ ವಾಹಿನಿ ಯಾಗಲಿ ಅಥವಾ ಜೊತೆ ಜೊತೆಯಲಿ ಧಾರಾವಾಹಿ ನಿರ್ದೇಶಕ ಆರೂರು ಜಗದೀಶ್ ಅವರಾಗಲಿ ಅಧಿಕೃತವಾಗಿ ಯಾವುದೇ ವಿಚಾರವನ್ನು ಸಹಾ ಇನ್ನೂ ಹಂಚಿಕೊಂಡಿಲ್ಲ ವಾದರೂ ಶೀಘ್ರದಲ್ಲೇ ಈ ವಿಚಾರವಾಗಿ ಸುದ್ದಿಗೋಷ್ಠಿ ನಡೆಯಬಹುದು ಎಂದು ಮಾಧ್ಯಮವೊಂದು ವರದಿ ಮಾಡಿದೆ. ವರದಿಗಳ ಪ್ರಕಾರ ನಟ ಅನಿರುದ್ಧ ಅವರು ಚಿತ್ರೀಕರಣದ ಸೆಟ್ ನಲ್ಲಿ ಅಸಹಕಾರ ತೋರಿದ್ದಾರೆ ಎನ್ನಲಾಗಿದೆ ಧಾರಾವಾಹಿಯ 150 ಸಂಚಿಕೆಗಳ ಪೂರ್ಣಗೊಂಡ ನಂತರ ಅವರು ಈ ರೀತಿಯ ವರ್ತನೆಯನ್ನು ತೋರಿದ್ದಾರೆ ಎನ್ನಲಾಗಿದೆ.

ಆದರೆ ಅದರ ಹೊರತಾಗಿಯೂ ಸೀರಿಯಲ್ ಕೆಲಸಗಳನ್ನು ಮುಂದುವರಿಸಿಕೊಂಡು ಬರಲಾಗಿತ್ತು. ಆದರೆ ಈಗಎಲ್ಲವೂ ಕೂಡಾ ಮಿತಿ ಮೀರುತ್ತಿದ್ದು, ಕೈಮೀರಿ ಹೋಗುತ್ತಿರುವುದರಿಂದ ಸೂಕ್ತವಾದ ನಿರ್ಧಾರವನ್ನು ತೆಗೆದುಕೊಳ್ಳುವ ಸಮಯ ಬಂದಿದೆ ಎನ್ನುವ ವಿಚಾರವು ಸಹಾ ಸುದ್ದಿಯಾಗಿದೆ. ಇನ್ನು ಕೆಲವೊಂದು ಸುದ್ದಿಗಳಲ್ಲಿ ಅನಿರುದ್ಧ ಅವರನ್ನು ಬ್ಯಾನ್ ಮಾಡುವ ಬಗ್ಗೆ ಆಲೋಚನೆ ನಡೆಯುತ್ತಿದೆ ಎಂದು ಕೂಡ ಹೇಳಲಾಗಿದೆ. ಜೀ ಕನ್ನಡ ವಾಹಿನಿ ಮತ್ತು ಕಿರುತೆರೆ ನಿರ್ಮಾಪಕರ ಸಂಘವು ಈ ವಿಚಾರದಲ್ಲಿ ಯಾವ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಇದೇ ವೇಳೆ ನಟ ಅನಿರುದ್ಧ್ ಅವರು ಈ ವಿಚಾರವಾಗಿ ವಾಹಿನಿ ಕಡೆಯಿಂದ ಅಥವಾ ನಿರ್ದೇಶಕರ ಕಡೆಯಿಂದ ತನಗೆ ಯಾವುದೇ ಮಾಹಿತಿ ಬಂದಿಲ್ಲ ಎಂದೂ, ಅವರು ನೇರವಾಗಿ ಮಾತನಾಡಿದ ನಂತರ ತಾನು ಸುದ್ದಿಗೋಷ್ಠಿ ಕರೆದು ಮಾತನಾಡುವುದಾಗಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ ಎನ್ನಲಾಗಿದೆ. ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ಆರ್ಯವರ್ಧನ್ ಪಾತ್ರ ಬಹಳ ಪ್ರಮುಖವಾದ ಪಾತ್ರವಾಗಿದ್ದು, ಆ ಪಾತ್ರದಲ್ಲಿ ಬೇರೆ ನಟನನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಎನ್ನುವಂತೆ ಅನಿರುದ್ಧ್ ಅವರು ಆ ಪಾತ್ರವನ್ನು ನಿಭಾಯಿಸಿದ್ದು, ಈಗ ಮುಂದೆ ಏನಾದರೂ ಬದಲಾವಣೆ ಆದರೆ ಜನ ಹೇಗೆ ಸ್ವೀಕರಿಸುತ್ತಾರೆ ಎನ್ನುವ ಅನುಮಾನ ಸಹಾ ಕಾಡಿದೆ.

Leave a Reply

Your email address will not be published.