ಸೀರಿಯಲ್ ಗಳ ಟಾಪ್ 5 ರೇಸ್ ನಲ್ಲಿ ಮಹತ್ವದ ಬದಲಾವಣೆ: ಮಿಂಚಿನ ಓಟಕ್ಕೆ ಮತ್ತೆ ಸಜ್ಜಾಗ್ತಾ ಇದ್ದಾಳಾ ಸತ್ಯ?

Entertainment Featured-Articles News

ಕಿರುತೆರೆಯನ್ನು ಅಭಿಮಾನಿಸುವ, ಅದರಲ್ಲಿ ಪ್ರಸಾರವಾಗುವ ಸೀರಿಯಲ್ ಗಳು, ಶೋ ಗಳನ್ನು ಆದರಿಸುವ ದೊಡ್ಡ ಅಭಿಮಾನಿಗಳ ಬಳಗವೇ ಇದೆ‌. ಆದ್ದರಿಂದಲೇ ಸೀರಿಯಲ್ ಗಳು, ರಿಯಾಲಿಟಿ ಶೋ ಗಳು ಇಂದು ಜನ ಮೆಚ್ಚಿಗೆ ಕಾರ್ಯಕ್ರಮಗಳಾಗಿ ಮನ್ನಣೆಯನ್ನು ಪಡೆದುಕೊಂಡಿವೆ‌‌. ವಿಶೇಷವಾಗಿ ಧಾರಾವಾಹಿಗಳಿಗೆ ಇರುವ ಮಹತ್ವದ ಬಗ್ಗೆ ಹೆಚ್ಚು ಹೇಳುವ ಅಗತ್ಯ ಇಲ್ಲ. ಜನರ ಮೆಚ್ಚುಗೆಯ ಕಾರಣದಿಂದಲೇ ಇಂದು ಸೀರಿಯಲ್ ಗಳು ಮನೆ ಮನೆ ಮಾತಾಗಿದ್ದು, ಸೀರಿಯಲ್ ಗಳಲ್ಲಿ ನಟಿಸುವ ಕಲಾವಿದರು ಸಹಾ ಸಿನಿಮಾ ಸ್ಟಾರ್ ಗಳಷ್ಟೇ ಜನಪ್ರಿಯತೆ ಪಡೆದಿದ್ದಾರೆ‌.

ವಾರ ಮುಗಿದ ಕೂಡಲೇ ಸೀರಿಯಲ್ ಪ್ರೇಕ್ಷಕರ ಗಮನ ಸೆಳೆಯುವ ಅಂಶವೆಂದರೆ ಈ ವಾರ ಯಾವ ಯಾವ ಸೀರಿಯಲ್ ಗಳು ಟಾಪ್ ಐದರಲ್ಲಿ ಸ್ಥಾನವನ್ನು ಪಡೆದಿವೆ ಮತ್ತು ಯಾವ ಸೀರಿಯಲ್ ಗಳ ಸ್ಥಾನದಲ್ಲಿ ಬದಲಾವಣೆ ಆಗಿದೆ ಎನ್ನುವುದು. ಹಾಗಾದರೆ ಈ ವಾರ ಯಾವ ಯಾವ ಸೀರಿಯಲ್ ಗಳು ಟಾಪ್ ಐದರಲ್ಲಿ ಯಾವ ಯಾವ ಸ್ಥಾನ ಪಡೆದಿವೆ ಎನ್ನುವ ಮಾಹಿತಿ ಹೊರ ಬಂದಿದೆ. ಹಾಗಾದ್ರೆ ಇನ್ನೇಕೆ ತಡ ಬನ್ನಿ, ಟಾಪ್ ಐದರಲ್ಲಿ ಏನೇನು ಬದಲಾವಣೆ ಆಗಿದೆ ಅನ್ನೋದನ್ನು ತಿಳಿಯೋಣ.

ಎಂದಿನಂತೆ ಈ ವಾರ ಸಹಾ ಹಿರಿಯ ನಟಿ ಉಮಾಶ್ರೀ ಅವರು ಪ್ರಮುಖ ಪಾತ್ರ ಪೋಷಿಸುತ್ತಿರುವ ಧಾರಾವಾಹಿ ಪುಟ್ಟಕ್ಕನ ಮಕ್ಕಳು ಭದ್ರವಾಗಿ ಮೊದಲನೇ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ಈ ಸೀರಿಯಲ್ ಆರಂಭವಾದ ಮೊದಲ ವಾರದಿಂದಲೇ ಟಾಪ್ ಒನ್ ಸ್ಥಾನವನ್ನು ಪಡೆದುಕೊಂಡಿದ್ದು, ಅದು ಬದಲಾಗದೇ, ಪುಟ್ಟಕ್ಕನ ಮಕ್ಕಳು ಸೀರಿಯಲ್ ಜನ ಮನ ಗೆದ್ದು, ನಿರಂತರವಾಗಿ ಒಂದನೇ ಸ್ಥಾನದಲ್ಲೇ ಮುಂದುವರೆದಿದೆ.

ಇನ್ನು ಎರಡನೇ ಸ್ಥಾನವನ್ನು ಸಹಾ ಎಂದಿನಂತೆ ಗಟ್ಟಿಮೇಳ ತನ್ನದಾಗಿಸಿಕೊಂಡಿದೆ. ಇತ್ತೀಚಿಗೆ ಸೀರಿಯಲ್ ನಲ್ಲಿ ವೈಜಯಂತಿ ಕುರಿತಾದ ಕಥೆ, ಧೃವ ಅದಿತಿ ಲವ್ ಟ್ರ್ಯಾಕ್ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದು, ಗಟ್ಟಿಮೇಳ ಎರಡನೇ ಸ್ಥಾನವನ್ನು ಪಡೆದಿದೆ. ಮೂರನೇ ಸ್ಥಾನದಲ್ಲಿ ಮಿಸ್ ಪರ್ಫೆಕ್ಟ್ ಎಜೆ ಮತ್ತು ಎಡವಟ್ ರಾಣಿ ಲೀಲಾ ಕಥೆಯ ಹಿಟ್ಲರ್ ಕಲ್ಯಾಣ ಇದ್ದು, ಟಾಪ್ ಮೂರು ಸ್ಥಾನಗಳು ಹಿಂದಿನ ವಾರದಂತೆಯೇ ಇದ್ದು ಇಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಇನ್ನು ನಾಲ್ಕು ಮತ್ತು ಐದನೇ ಸ್ಥಾನದಲ್ಲಿ ಕೆಲವು ಬದಲಾವಣೆಗಳು ಆಗಿವೆ. ರಾಮಾಚಾರಿ ಸೀರಿಯಲ್ ಆಗಮನದೊಡನೆ ಟಾಪ್ ಐದರಿಂದ ಹೊರ ಬಂದಿದ್ದ ಸತ್ಯ ಸೀರಿಯಲ್ ಕಳೆದ ವಾರವೇ ಮತ್ತೆ ಟಾಪ್ ಐದನೇ ಸ್ಥಾನಕ್ಕೆ ಮರಳಿ ಬಂದಿತ್ತು. ಸೀರಿಯಲ್ ನಲ್ಲಿ ಇತ್ತೀಚಿಗೆ ಹೊಸ ಹೊಸ ತಿರುವುಗಳು ಮೂಡಿ ಬಂದಿದ್ದು, ಪ್ರೇಕ್ಷಕರ ಗಮನವನ್ನು ಮತ್ತೆ ಸೆಳೆಯುವಲ್ಲಿ ಸತ್ಯ ಸೀರಿಯಲ್ ಯಶಸ್ಸನ್ನು ಪಡೆದುಕೊಂಡಿದೆ. ದಿವ್ಯ ಕಾರ್ತಿಕ್ ಮದುವೆ, ಸತ್ಯ ಜೈಲು ಸೇರಿದ ಟ್ವಿಸ್ಟ್ ಗಳು ಹೊಸ ಕುತೂಹಲ ಮೂಡಿಸಿದೆ.

ಸತ್ಯ ಸೀರಿಯಲ್ ನ ಹೊಸ ಟ್ವಿಸ್ಟ್ ಗಳ ಕಾರಣದಿಂದ ಈ ವಾರ ಸತ್ಯ ಐದನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಬಡ್ತಿಯನ್ನು ಪಡೆದುಕೊಂಡಿದೆ. ಈ ವೇಳೆ ನಾಲ್ಕನೇ ಸ್ಥಾನದಲ್ಲಿದ್ದ ಜೊತೆ ಜೊತೆಯಲಿ ಸೀರಿಯಲ್ ಒಂದು ಸ್ಥಾನ ಕೆಳಕ್ಕೆ ಬಂದಿದ್ದು ಈ ವಾರ ಐದನೇ ಸ್ಥಾನಕ್ಕೆ ಜಾರಿದೆ. ಇನ್ನು ಮುಂಬರುವ ಎಪಿಸೋಡ್ ಗಳ ಮೂಲಕ ಸತ್ಯ ಮತ್ತೆ ಟಾಪ್ ಮೂರಕ್ಕೆ ಬರುತ್ತದೆಯೇ ಕಾದು ನೋಡಬೇಕಾಗಿದೆ.

Leave a Reply

Your email address will not be published.