ಸೀನಿಯರ್ ನಟನ 4ನೇ ಪತ್ನಿಯಾಗಲು ಸಜ್ಜಾದ್ರ ಪವಿತ್ರಾ ಲೋಕೇಶ್? ಟಾಲಿವುಡ್ ನ ಹಾಟ್ ಟಾಪಿಕ್!!

Entertainment Featured-Articles Movies News

ನಟಿ ಪವಿತ್ರ ಲೋಕೇಶ್ ಹೆಸರು ಕೇಳದವರ ಸಂಖ್ಯೆ ತೀರಾ ವಿರಳ. ಕನ್ನಡ ಸಿನಿಮಾ ರಂಗದಲ್ಲಿ ತನ್ನದೇ ಆದ ಹೆಸರನ್ನು ಮಾಡಿರುವ, ಪ್ರಸ್ತುತ ಕಾಲದಲ್ಲ ತೆಲುಗು ಸಿನಿಮಾ ರಂಗದಲ್ಲಿ ಪೋಷಕ ನಟಿಯಾಗಿ ಮನೆ ಮನೆ ಮಾತಾಗಿದ್ದಾರೆ. ತೆಲುಗು ಸಿನಿಮಾ ರಂಗದಲ್ಲಿ ಬಹುತೇಕ ಎಲ್ಲಾ ಸ್ಟಾರ್ ನಟರ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳನ್ನು ಪೋಷಿಸುವ ನಟಿ ಪವಿತ್ರ ಲೋಕೇಶ್ ಅವರು ತೆಲುಗು ಸಿನಿಮಾ ರಂಗದಲ್ಲಿ ಬಹು ಬೇಡಿಕೆಯ ನಟಿ ಕೂಡಾ ಹೌದು. ಕನ್ನಡ ಸಿನಿಮಾ ರಂಗದಿಂದ ಚಿತ್ರರಂಗಕ್ಕೆ ಅಡಿಯಿಟ್ಟ ಪವಿತ್ರ ಲೋಕೇಶ್ ಅವರು ಹಿರಿಯ ನಟ ಮೈಸೂರು ಲೋಕೇಶ್ ಅವರ ಮಗಳು.

ಇದೀಗ ನಟಿ ಪವಿತ್ರ ಲೋಕೇಶ್ ಅವರು ತೆಲುಗಿನ ಸೀನಿಯರ್ ನಟನ ಜೊತೆಗೆ ವಿವಾಹವಾಗಲು ಸಜ್ಜಾಗಿದ್ದಾರೆ ಎನ್ನಲಾಗಿದೆ. ತೆಲುಗು ಮಾದ್ಯಮಗಳಲ್ಲಿ ಈಗಾಗಲೇ ಈ ವಿಚಾರ ಸದ್ದು ಮಾಡಿದ್ದು, ತೆಲುಗು ಸಿನಿಮಾ ರಂಗದ ಸೀನಿಯರ್ ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ನಡುವೆ ಪ್ರೇಮ ಚಿಗುರಿದೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ಇವರಿಬ್ಬರು ಬಹಳ ಕಾಲದಿಂದ ಲಿವಿನ್ ರಿಲೇಶನ್ ಶಿಪ್ ನಲ್ಲಿ ಸಹಾ ಇದ್ದಾರೆ ಎನ್ನುವುದಾಗಿ ಸಹಾ ಸುದ್ದಿಗಳು ಹರಿದಾಡಿವೆ. ಹಲವು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದ ಇವರು ಈಗ ನಿಜ ಜೀವನದಲ್ಲಿ ಸಹಾ ಒಂದಾಗಲು ನಿರ್ಧರಿಸಿದ್ದಾರೆ ಎನ್ನುವುದು ಸುದ್ದಿ.

ಕೆಲವು ದಿನಗಳ ಹಿಂದೆಯಷ್ಟೇ ನಟ ನರೇಶ್ ಮತ್ತು ಪವಿತ್ರ ಲೋಕೇಶ್ ಇಬ್ಬರೂ ಜೊತೆಯಾಗಿ ಮಹಾಬಲೇಶ್ವರಕ್ಕೆ ತೆರಳಿ ಒಬ್ಬ ಸ್ವಾಮೀಜಿಯನ್ನು ಭೇಟಿ ಮಾಡಿದ್ದರು. ಈ ಘಟನೆಯ ನಂತರವೇ ಆದಷ್ಟು ಬೇಗ ಈ ಜೋಡಿ ವಿವಾಹ ಆಗಲಿದ್ದಾರೆ ಎನ್ನುವ ಸುದ್ದಿಗಳು ಇನ್ನಷ್ಟು ದಟ್ಟವಾಗಿದೆ. ನಟ ನರೇಶ್ ಅವರು ತೆಲುಗು ಸಿನಿಮಾ ರಂಗದ ಒಂದು ಕಾಲದ ಸ್ಟಾರ್ ನಟಿ, ನಿರ್ಮಾಪಕಿ ಹಾಗೂ ನಿರ್ದೇಶಕಿ ಕೂಡಾ ಆಗಿದ್ದ ದಿವಂಗತ ವಿಜಯನಿರ್ಮಲ ಅವರಿಗೆ ಮೊದಲ ಪತಿಯಿಂದ ಆದ ಸಂತಾನವಾಗಿದ್ದಾರೆ.

ನರೇಶ್ ಅವರು ಚಿತ್ರರಂಗದಲ್ಲಿ ತನ್ನದೇ ಆದ ಹೆಸರು, ಸ್ಥಾನ ಮತ್ತು ವರ್ಚಸ್ಸನ್ನು ಪಡೆದಿರುವ ನಟನಾಗಿದ್ದು ಹೀರೋ ಆಗಿ ಹಲವು ಸೂಪರ್ ಹಿಟ್ ಸಿ‌ನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ನಟ ನರೇಶ್ ಅವರು ಈಗಾಗಲೇ ಮೂರು ಮದುವೆ ಆಗಿದ್ದಾರೆ. ಆದರೆ ಹೆಂಡತಿಯರ ಜೊತೆಗೆ ಭಿನ್ನಾಭಿಪ್ರಾಯ ಮೂಡಿದ ಕಾರಣ ವಿಚ್ಚೇದನ ನೀಡಿ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ಐಶಾರಾಮೀ ಜೀವನ ನಡೆಸುತ್ತಿರುವ ನಟ ಈಗ ಹೊಸ ಸಂಗಾತಿಯನ್ನು ಬಯಸಿದ್ದಾರೆ. ಇನ್ನು ಪವಿತ್ರ ಲೋಕೇಶ್ ಅವರು ತಮ್ಮ ಪತಿಯಿಂದ ದೂರವಾಗಿದ್ದು, ಇನ್ನೂ ಕಾನೂನು ಬದ್ಧವಾಗಿ ವಿಚ್ಚೇದನ ಪಡೆದಿಲ್ಲ.

ಕೋರ್ಟ್ ಮೂಲಕ ನಟಿ ವಿಚ್ಛೇದನ ನೀಡಿದ ನಂತರ ಶೀಘ್ರದಲ್ಲೇ ನರೇಶ್ ಮತ್ತು ಪವಿತ್ರ ಲೋಕೇಶ್ ವಿವಾಹ ಆಗಲಿದ್ದಾರೆ ಎನ್ನಲಾಗಿದೆ. ಇನ್ನು ಇಷ್ಟೆಲ್ಲಾ ಸುದ್ದಿಗಳಾದರೂ ನರೇಶ್ ಅಥವಾ ಪವಿತ್ರ ಲೋಕೇಶ್ ಇಬ್ಬರೂ ಸಹಾ ಈ ಸುದ್ದಿಯನ್ನು ಅಲ್ಲಗಳೆದಿಲ್ಲ. ಮೌನವಾಗಿಯೇ ಇದ್ದಾರೆ. ಅವರು ಒಟ್ಟಿಗೆ ನಟಿಸಿ, ಒಟ್ಟಿಗೆ ಕಾಣಿಸಿಕೊಂಡಿದ್ದರಿಂದ ಸುದ್ದಿ ಮತ್ತಷ್ಟು ಹೆಚ್ಚಾಗಿದೆ. ಹರಡಿರುವ ಸುದ್ದಿ ನಿಜವೋ ಅಲ್ಲವೋ ಎನ್ನುವುದಕ್ಕೆ ಕಾಲವೇ ಉತ್ತರ ಹೇಳಬೇಕಾಗಿದೆ.

Leave a Reply

Your email address will not be published.