ಸೀಕ್ರೆಟ್ಟಾಗಿ ಎಂಗೇಜ್ಮೆಂಟ್ ಮಾಡ್ಕೊಂಡ್ರಾ ಅದಿತಿ ಪ್ರಭದೇವ?? ಕನಸು ನನಸಾಯ್ತು ಎಂದ ನಟಿ

Entertainment Featured-Articles News

ಕನ್ನಡ ಸಿನಿಮಾಗಳಲ್ಲಿ ತನ್ನದೇ ಆದ ಬೇಡಿಕೆಯನ್ನು ಪಡೆದುಕೊಂಡಿರುವ ನಟಿ ಅದಿತಿ ಪ್ರಭುದೇವ ಅವರು ಹಲವು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಅದಿತಿ ಪ್ರಭುದೇವ ಅವರ ಅಭಿನಯದ ಆನ ಸಿನಿಮಾ ಬಿಡುಗಡೆಗೊಂಡಿದೆ. ಕಿರುತೆರೆಯಿಂದ ತಮ್ಮ ನಟನೆಯ ಜರ್ನಿಯನ್ನು ಪ್ರಾರಂಭಿಸಿದ ಅದಿತಿ ಪ್ರಭುದೇವ ಅನಂತರ ಸ್ಯಾಂಡಲ್ ವುಡ್ ಗೆ ಎಂಟ್ರಿ ನೀಡಿದರು. ಅಲ್ಲಿ ಕೂಡಾ ಬೇಡಿಕೆಯನ್ನು ಸೃಷ್ಟಿಸಿಕೊಂಡಿರುವ ಈ ನಟಿಯು ಸಾಲು ಸಾಲು ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಅದಿತಿ ಪ್ರಭುದೇವ ಅವರ ಕಡೆಯಿಂದ ಆದರೆ ಅಭಿಮಾನಿಗಳಿಗೆ ಒಂದು ಸರ್ಪ್ರೈಸ್ ಸಿಕ್ಕಿದೆ.

ಇದನ್ನು ಸರ್ಪ್ರೈಸ್ ಎಂದು ಬೇಕಾದರೂ ಹೇಳಬಹುದು ಅಥವಾ ಅದಿತಿ ಪ್ರಭುದೇವ ಅವರ ಕಡೆಯಿಂದ ಅವರ ಅಭಿಮಾನಿಗಳಿಗೆ ಸಿಕ್ಕಿರುವ ಒಂದು ಸಿಹಿಸುದ್ದಿ ಎಂದು ಬೇಕಾದರೂ ಹೇಳಬಹುದಾಗಿದೆ. ಹೌದು ಅದಿತಿ ಪ್ರಭುದೇವ ಅವರು ಸೈಲೆಂಟಾಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಷಯ ಸುದ್ದಿಯಾಗುತ್ತಿರುವಾಗಲೇ ಅದಿತಿ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಕೂಡಾ ಹುಡುಗನೊಬ್ಬನ ಜೊತೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

ಅದಿತಿ ಅವರು ಹಂಚಿಕೊಂಡಿರುವ ಫೋಟೋದಲ್ಲಿ ಅವರ ಉಂಗುರ ಹೈಲೈಟಾಗಿ ಕಾಣುತ್ತಿದ್ದು ಅದನ್ನು ನೋಡಿದವರು ಅವರಿಗೆ ಶುಭಾಶಯಗಳನ್ನು ಹೇಳುತ್ತಿದ್ದಾರೆ. ನಿಜವಾಗಿಯೂ ಅದಿತಿ ಪ್ರಭುದೇವ ಅವರು ಎಂಗೇಜ್ಮೆಂಟ್ ಮಾಡಿಕೊಂಡರೋ, ಇಲ್ಲವೋ ಎನ್ನುವುದನ್ನು ಅಧಿಕೃತವಾಗಿ ನಟಿಯೇ ಹೇಳಬೇಕಾಗಿದೆ. ಆದರೆ ಸದ್ಯಕ್ಕಂತೂ ಅವರು ಹಂಚಿಕೊಂಡಿರುವ ಫೋಟೋ ಮಾತ್ರ ಎಲ್ಲರ ಗಮನವನ್ನು ಸೆಳೆಯುತ್ತಿದ್ದು, ಅಭಿಮಾನಿಗಳು ಈಗಾಗಲೇ ಶುಭ ಹಾರೈಸಲು ಪ್ರಾರಂಭಿಸಿದ್ದಾರೆ.

ಹೊಳೆನರಸೀಪುರದಲ್ಲಿ ಭಾನುವಾರ ಅದಿತಿ ಪ್ರಭುದೇವ ಅವರು ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಅದಿತಿ ಅವರು ಶೇರ್ ಮಾಡಿಕೊಂಡಿರುವ ಫೋಟೋದ ಜೊತೆಯಲ್ಲಿ ಅವರು, “ಕನಸು ಕನಸಿನಂತೆ ನಿಜವಾಯಿತು” ಎಂದು ಬರೆದುಕೊಂಡಿದ್ದಾರೆ. ಅವರ ನಿಶ್ಚಿತಾರ್ಥಕ್ಕೆ ಕೇವಲ ಅವರ ಆಪ್ತರಿಗೆ ಮಾತ್ರವೇ ಆಹ್ವಾನ ನೀಡಲಾಗಿತ್ತು ಎನ್ನಲಾಗಿದೆ. ಫೋಟೋದಲ್ಲಿ ಅವರ ಜೊತೆ ಇರುವ ವ್ಯಕ್ತಿಯೋರ್ವ ಉದ್ಯಮಿ ಎನ್ನಲಾಗಿದೆ.

Leave a Reply

Your email address will not be published. Required fields are marked *