ಸಿಹಿಯ ನಂತರ ಕಹಿ ಅಂದ್ರೆ ಇದೇನಾ? ರಶ್ಮಿಕಾ ಮತ್ತು ಫ್ಯಾನ್ಸ್ ಗೆ ಇದು ಖಂಡಿತ ಶಾಕಿಂಗ್!!

Entertainment Featured-Articles News

ಕರ್ನಾಟಕ ಕ್ರಶ್ ನಿಂದ ನ್ಯಾಷನಲ್ ಕ್ರಶ್ ಎನ್ನುವ ಮಟ್ಟಕ್ಕೆ ಜನಪ್ರಿಯತೆ ಪಡೆದಿರುವ ನಟಿ ರಶ್ಮಿಕಾ ಮಂದಣ್ಣ, ಸದ್ಯಕ್ಕೆ ರಶ್ಮಿಕಾ ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯೋ ಬ್ಯುಸಿ. ಸಾಲು ಸಾಲು ಸ್ಟಾರ್ ನಟರ ಜೊತೆಗೆ ಸಿನಿಮಾಗಳಲ್ಲಿ ರಶ್ಮಿಕಾ ನಾಯಕಿಯಾಗಿದ್ದಾರೆ. ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಗೆ ಮೊದಲ ಸಿನಿಮಾದಲ್ಲೇ ದೊಡ್ಡ ಯಶಸ್ಸು ಸಿಕ್ಕಿತು. ಕನ್ನಡದಲ್ಲೂ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಳ್ಳುವಲ್ಲಿ ಈ ಯಶಸ್ಸು ದೊಡ್ಡ ಪಾತ್ರವನ್ನು ವಹಿಸಿತ್ತು ಎನ್ನುವುದರಲ್ಲಿ ಯಾವುದೇ ಅನುಮಾನ ಖಂಡಿತ ಇಲ್ಲ.

ಇದಾದ ನಂತರ ರಶ್ಮಿಕಾ ತೆಲುಗು ಇಂಡಸ್ಟ್ರಿಗೆ ಕಾಲಿಟ್ಟರು. ಅಲ್ಲಿ ಸಹಾ ನಟಿಸಿದ ಸಿನಿಮಾಗಳೆಲ್ಲವೂ ಸೂಪರ್ ಹಿಟ್ ಹಾಗೂ ನಿರೀಕ್ಷಿತ ಮಟ್ಟದ ಗೆಲುವು ಪಡೆದವು. ರಶ್ಮಿಕಾ ಲಕ್ಕಿ ಸ್ಟಾರ್ ಎನಿಸಿಕೊಂಡರು. ತಮಿಳಿನಲ್ಲಿ ಸಹಾ ಮೊದಲ ಸಿನಿಮಾ ಹಿಟ್ ಆಯಿತು. ಬಾಲಿವುಡ್ ನಲ್ಲಿ ಏಕಕಾಲದಲ್ಲಿ ಎರಡೆರಡು ಸಿನಿಮಾಗಳಲ್ಲಿ ಅವಕಾಶ ಪಡೆದು ಎಲ್ಲರ ಗಮನವನ್ನು ಸೆಳೆದ ರಶ್ಮಿಕಾ ಅಭಿನಯದ ಎರಡು ಬಾಲಿವುಡ್ ಸಿನಿಮಾಗಳು ತೆರೆಗೆ ಬರಲು ಸಜ್ಜಾಗುತ್ತಿದೆ.

ಇವೆಲ್ಲವುಗಳ ನಡುವೆ ಅಲ್ಲು ಅರ್ಜುನ್ ನಾಯಕತ್ವದ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ ದಲ್ಲಿ ರಶ್ಮಿಕಾ ನಾಯಕಿಯಾದರು. ಈ ಸಿನಿಮಾ ಹೊಸ ದಾಖಲೆಗಳನ್ನು ಬರೆಯಿತು. ರಶ್ಮಿಕಾ ಸಕ್ಸಸ್ ಸಿನಿಮಾಗಳ ಲಿಸ್ಟ್ ಗೆ ಪುಷ್ಪ ಹೊಸ ಸೇರ್ಪಡೆಯಾಯಿತು ಹಾಗೂ ರಶ್ಮಿಕಾ ಪ್ಯಾನ್ ಇಂಡಿಯಾ ಸ್ಟಾರ್ ಆದರು. ಹೀಗೆ ಒಂದರ ನಂತರ ಒಂದು ಗೆಲುವನ್ನು ನೋಡುತ್ತಾ, ಗೆಲ್ಲುವ ಕುದುರೆಯಂತೆ, ಅದೃಷ್ಟದ ತಾರೆಯಂತೆ ಮಿನುಗುತ್ತಿದ್ದ ರಶ್ಮಿಕಾಗೆ ಈಗ ಮೊದಲ ಸೋಲು ಎದುರಾಗಿದೆ.

ಹೌದು, ನಟಿ ರಶ್ಮಿಕಾ ತೆಲುಗಿನ ಜನಪ್ರಿಯ ನಟ ಶರ್ವಾನಂದ್ ಜೊತೆಗೆ ನಟಿಸಿದ್ದ ಆಡವಾಳ್ಳು ಮೀಕು ಜೋಹಾರ್ಲು ಇದೇ ಮಾರ್ಚ್ 4 ರಂದು ಬಿಡುಗಡೆಯಾಗಿದೆ. ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಇದ್ದವು. ಆದರೆ ಬಿಡುಗಡೆ ನಂತರ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಈ ಸಿನಿಮಾ, ಥಿಯೇಟರ್ ಗಳಲ್ಲಿ ಮಕಾಡೆ ಮಲಗಿದೆ. ಪ್ರೇಕ್ಷಕರು ರಶ್ಮಿಕಾ ಈ ಸಿ‌ನಿಮಾ ಮಾಡಲೇಬಾರದಿತ್ತು ಎಂದು ಹೇಳುತ್ತಿದ್ದಾರೆ.

ಸಿನಿಮಾದ ಮೊದಲ ದಿನದ ಕಲೆಕ್ಷನ್ ಕೂಡಾ ಅಷ್ಟೇನು ಚೆನ್ನಾಗಿಲ್ಲ ಎನ್ನಲಾಗಿದೆ. ಅಲ್ಲದೇ ಥಿಯೇಟರ್ ಗಳಲ್ಲಿ ಸೀಟುಗಳು ಖಾಲಿ ಖಾಲಿ ಎಂದು ಕೂಡಾ ಸುದ್ದಿಗಳಾಗಿವೆ. ಮೊದಲ ದಿನ ಸಿನಿಮಾ ಕಲೆಕ್ಷನ್ ಕೇವಲ 3.6 ಕೋಟಿ ಎನ್ನಲಾಗಿದ್ದು , ಐದು ದಿನಗಳ ಗಳಿಕೆ ಕೇವಲ 10 ಕೋಟಿ ಎನ್ನಲಾಗಿದೆ. ಸತತ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದ ರಶ್ಮಿಕಾಗೆ ಮೊದಲ ಸೋಲಿನ ರುಚಿ ಉಣ್ಣುವಂತಾಗಿದೆ‌. ಮುಂದಿನ ದಿನಗಳಲ್ಲಿ ರಶ್ಮಿಕಾರ ಈ ಸೋಲನ್ನು ಪ್ರೇಕ್ಷಕರು ಮರೆಯುವ ಸಕ್ಸಸ್ ಫುಲ್ ಸಿನಿಮಾ ಬಂದರೂ ಬರಬಹುದು.

Leave a Reply

Your email address will not be published.