ಸಿನಿಮಾ ಸೆಲೆಬ್ರಿಟಿಗಳ ಬೆನ್ನು ಬಿದ್ದ ಕೊರೊನಾ: ಮತ್ತಿಬ್ಬರು ಸ್ಟಾರ್ ಕಲಾವಿದರಿಗೆ ಕೊರೊನಾ
ಸಿನಿ ರಂಗದಲ್ಲಿ ಕೊರೊನಾ ಕಲ್ಲೋಲವನ್ನು ಸೃಷ್ಟಿಸುವ ಹಾಗೆ ಕಾಣುತ್ತಿದೆ. ಬಾಲಿವುಡ್, ಟಾಲಿವುಡ್ ಹಾಗೂ ಕಾಲಿವುಡ್ ನಲ್ಲಿ ಈಗಾಗಲೇ ಹಲವು ಸೆಲೆಬ್ರಿಟಿಗಳು ಕೊರೊನಾ ಪಾಸಿಟಿವ್ ಆಗಿ ಐಸೋಲೇಟ್ ಆಗಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಒಬ್ಬರಾದ ನಂತರ ಮತ್ತೊಬ್ಬರು ಎನ್ನುವಂತೆ ಕೊರೊನಾ ವೈರಸ್ ದಾಳಿಗೆ ತುತ್ತಾಗುತ್ತಿದ್ದಾರೆ. ನಿನ್ನೆಯಷ್ಟೇ ತೆಲುಗಿನ ಖ್ಯಾತ ನಟ ಮಹೇಶ್ ಬಾಬು ಹಾಗೂ ಮತ್ತೋರ್ವ ಖ್ಯಾತ ನಟ ನಿತಿನ್ ಅವರ ಪತ್ನಿಗೆ ಕೊರೊನಾ ಪಾಸಿಟಿವ್ ಎನ್ನುವುದು ತಿಳಿದು ಬಂದಿತು. ಇದೀಗ ಮತ್ತೆ ಇಬ್ಬರು ಸ್ಟಾರ್ ಗಳು ಕೊರೊನಾ ತೆಕ್ಕೆಗೆ ಬಂದಿದ್ದಾರೆ.
ತಮಿಳು ನಟ ಬಾಹುಬಲಿ ಸಿನಿಮಾದಲ್ಲಿನ ಕಟ್ಟಪ್ಪ ಖ್ಯಾತಿಯ ನಟ ಹಿರಿಯ ನಟ ಸತ್ಯ ರಾಜ್ ಅವರಿಗೆ ಕೋವಿಡ್ ಪಾಸಿಟಿವ್ ಆಗಿದೆ. ಸತ್ಯರಾಜ್ ಅವರಿಗೆ ಕೋವಿಡ್ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನು ಅವರ ಕುಟುಂಬದ ಸದಸ್ಯರು ಚೆನ್ನೈನ ಆಸ್ಪತ್ರೆಯೊಂದಕ್ಕೆ ದಾಖಲು ಮಾಡಿದ್ದಾರೆ. ಅವರ ಪರಿಸ್ಥಿತಿ ಹೇಗಿದೆ ಎನ್ನುವುದನ್ನು ಇನ್ನೂ ಆಸ್ಪತ್ರೆಯ ವೈದ್ಯರು ಅಧಿಕೃತವಾಗಿ ತಿಳಿಸಿಲ್ಲ ಎನ್ನಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಅಗತ್ಯ ಇರುವ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎನ್ನಲಾಗಿದೆ.
ಇನ್ನು ಇದರ ಬೆನ್ನಲ್ಲೇ ದಕ್ಷಿಣ ಸಿನಿರಂಗದ ಸುಪ್ರಸಿದ್ಧ ನಟಿ, ಸ್ಟಾರ್ ನಟಿ ತ್ರಿಶಾ ಅವರಿಗೂ ಸಹಾ ಕೋವಿಡ್ ಪಾಸಿಟಿವ್ ಎನ್ನುವ ವರದಿಯು ಬಂದಿದೆ. ನಟಿ ಕೂಡಾ ಐಸೋಲೇಟ್ ಆಗಿದ್ದಾರೆ ಎನ್ನಲಾಗಿದೆ. ಇನ್ನು ನಟ ಮಹೇಶ್ ಬಾಬು, ಮಂಚು ಲಕ್ಷ್ಮೀ, ಮಂಚು ಮನೋಜ್, ವಿಶ್ವ ಸೇನ್ ಕೂಡಾ ಕೊರೊನಾ ಬಾಧಿತರಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ತಮಿಳಿನ ಸ್ಟಾರ್ ಗಳಾದ ವಿಕ್ರಂ, ಅರ್ಜುನ್, ಕಮಲ ಹಾಸನ್ ಕೂಡಾ ಕೊರೊನಾ ತೆಕ್ಕೆಗೆ ಸಿಲುಕಿದ್ದ ವಿಷಯ ಸುದ್ದಿಯಾಗಿತ್ತು.