ಸಿನಿಮಾ ಲೋಕ ಬೇಡ ಎಂದು, ಡಾಬಾದಲ್ಲಿ ಆಮ್ಲೆಟ್ ಹಾಕುತ್ತಾ, ತಟ್ಟೆ ಲೋಟ ತೊಳೆದ ಬಾಲಿವುಡ್ ನಟ: ಸಂಜಯ್ ಮಿಶ್ರಾ

Entertainment Featured-Articles News
76 Views

ಬಾಲಿವುಡ್ ನಟಿ ದಿಗ್ಗಜ ನಟರಲ್ಲಿ ಅದರಲ್ಲೂ ವಿಶೇಷವಾಗಿ ಹಾಸ್ಯ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡು, ಅಪಾರವಾದ ಜನಮೆಚ್ಚುಗೆಯನ್ನು ಹಾಗೂ ಜನಪ್ರಿಯತೆಯನ್ನು ಪಡೆದು ಕೊಂಡ ನಟ ಸಂಜಯ್ ಮಿಶ್ರಾ ಅವರು. ನಟ ಸಂಜಯ್ ಮಿಶ್ರಾ ಅವರು ಎಲ್ಲಾ ರೀತಿಯ ಪಾತ್ರಗಳನ್ನು ನಿಭಾಯಿಸಿದ್ದಾರೆ. ಆದರೆ ಅವರಿಗೆ ಹೆಚ್ಚಿನ ಜನಪ್ರಿಯತೆಯನ್ನು ತಂದುಕೊಟ್ಟಿದ್ದು ಮಾತ್ರ ಒಬ್ಬ ಹಾಸ್ಯ ಕಲಾವಿದನಾಗಿ. ಜನ ಅವರನ್ನು ಹಾಸ್ಯ ಕಲಾವಿದನಾಗಿಯೇ ಅಭಿಮಾನಿಸುವುದು ವಿಶೇಷ.

ಇಂದಿಗೂ ಸಹಾ ಕೂಡ ಸಂಜಯ್ ಮಿಶ್ರ ಅವರನ್ನು ಮೆಚ್ಚುವ ಅಭಿಮಾನಿಗಳ ಸಂಖ್ಯೆ ಕೂಡಾ ಕಡಿಮೆ ಇಲ್ಲ. ಅವರು ತಮ್ಮ ವೃತ್ತಿ ಜೀವನದಲ್ಲಿ ಗೋಲ್ ಮಾಲ್, ವೆಲ್ ಕಂ, ಧಮಾಲ್, ಆಲ್ ದಿ ಬೆಸ್ಟ್ ಹೀಗೆ ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸುವ ಮೂಲಕ ಜನಜನಿತವಾಗಿದ್ದಾರೆ. ನಿನ್ನೆ 6 ಅಕ್ಟೋಬರ್ ಗೆ ಅವರಿಗೆ 58 ನೇ ಜನ್ಮದಿನಕ್ಕೆ ಅಡಿಯಿಟ್ಟಿದ್ದಾರೆ. ಈ ವೇಳೆ ಅವರ ಬಗ್ಗೆ ಒಂದು ಆಸಕ್ತಿಕರ ವಿಷಯ ಅವರು ಹಂಚಿಕೊಂಡಿದ್ದಾರೆ.

ಇಂದು ಸಂಜಯ್ ಮಿಶ್ರಾ ಅವರು ಒನ್ಬ ಜನಪ್ರಿಯ ನಟನಾಗಿರುವುದೇನೋ ನಿಜವಾದರೂ, ಹಿಂದೊಮ್ಮೆ ಸಂಜಯ್ ಮಿಶ್ರಾ ಅವರು ಸಿನಿಮಾ ಜೀವನಕ್ಕೆ ಬೈ ಹೇಳಿ, ಬದುಕುವ ನಿರ್ಣಯವನ್ನು ಮಾಡಿದ್ದರು. ಸಂಜಯ್ ಮಿಶ್ರಾ ಅವರಿಗೆ ಹಿಂದೊಮ್ಮೆ ತಮ್ಮ ವೈಯಕ್ತಿಕ ಜೀವನದಿಂದ ಬಹಳ ಬೇಸರಗೊಂಡಿದ್ದರಂತೆ. ಇದೇ ಕಾರಣದಿಂದ ಅವರು ವೃತ್ತಿಯನ್ನು ಬದಲಾಯಿಸಲು ತೀರ್ಮಾನವನ್ನು ಮಾಡಿ ಬಿಟ್ಟರು.

ಸಂಜಯ್ ಅವರಿಗೆ ಆರೋಗ್ಯ ಪರಿಸ್ಥಿತಿ ಸಹಾ ಸರಿಯಾಗಲ್ಲದ ಆ ದಿನಗಳಲ್ಲೇ ಅವರ ತಂದೆ ನಿಧನರಾದರು. ಈ ಎಲ್ಲಾ ಘಟನೆಗಳಿಂದ ಕುಗ್ಗಿ ಹೋದ ಅವರು, ಮುಂಬೈ ಮಹಾ ನಗರ, ಸಿನಿಮಾ ಇಂಡಸ್ಟ್ರಿ ತೊರೆದು ಋಷಿಕೇಶಕ್ಕೆ ಹೋಗಿ ಬಿಟ್ಟರು. ಅಲ್ಲಿ ಅವರು ಒಂದು ಡಾಬಾ ಒಂದರಲ್ಲಿ ಆಮ್ಲೆಟ್ ಹಾಕುವ ಹಾಗೂ ತಟ್ಟೆ, ಲೋಟಗಳನ್ನು ತೊಳೆಯುವ ಕೆಲಸ ಮಾಡಲು ಆರಂಭಿಸಿದರು.

ಸಂಜಯ್ ಮಿಶ್ರಾ ಅವರು ಡಾಬಾದಲ್ಲಿ ಕೆಲಸ ಮಾಡುವಾಗ ಡಾಬಾ ಮಾಲೀಕನಿಗೆ ಇವರಾರು ಎನ್ನುವುದು ತಿಳಿದಿರಲಿಲ್ಲ. ಆದರೆ ಡಾಬಾಗೆ ಬರುತ್ತಿದ್ದ ಜನರು ಅವರನ್ನು ಗುರ್ತಿಸಿ ಬಿಡುತ್ತಿದ್ದರು. ಡಾಬಾದಲ್ಲಿ ಸಂಜಯ್ ಮಿಶ್ರಾ ಅವರಿಗೆ ದಿನಕ್ಕೆ 150 ರೂಪಾಯಿ ಸಿಗುತ್ತಿತ್ತು. ಗೋಲ್ ಮಾಲ್ ನಂತಹ ಸೂಪರ್ ಹಿಟ್ ಸಿನಿಮಾದಲ್ಲಿ ನಟಸಿದ್ದ ನಟನ ಪರಿಚಯ ಋಷಿ ಕೇಶ ಕ್ಕೆ ಬರುತ್ತಿದ್ದ ಪ್ರವಾಸಿಗರಿಗೆ ಸುಲಭವಾಗಿ ಆಗಿ ಬಿಡುತ್ತಿತ್ತು‌.

ಹೀಗೆ ಸಿನಿಮಾ ಲೋಕದಿಂದ ದೂರ ಉಳಿದು ಸಾಮಾನ್ಯನಂತೆ ಜೀವನ ನಡೆಸುತ್ತಿದ್ದ ಸಂಜಯ್ ಮಿಶ್ರಾ ಅವರಿಗೆ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಆಲ್ ದಿ ಬೆಸ್ಟ್ ಸಿನಿಮಾ ಅವಕಾಶ ಮತ್ತೊಮ್ಮೆ ಅವರು ಸಿನಿಮಾ ರಂಗಕ್ಕೆ ಕಮ್ ಬ್ಯಾಕ್ ಮಾಡಲು ಕಾರಣವಾಯಿತು. 1991 ರಿಂದ ನಟನಾ ವೃತ್ತಿಯಲ್ಲಿ ತೊಡಗಿರುವ ಸಂಜಯ್ ಅವರು ಆಫೀಸ್ ಆಫೀಸ್ ಎನ್ನುವ ಸೀರಿಯಲ್ ಒಂದರಲ್ಲಿ ಕೂಡಾ ನಟಿಸಿ ಜನಪ್ರಿಯತೆ ಪಡೆದಿದ್ದಾರೆ.

Leave a Reply

Your email address will not be published. Required fields are marked *