ನನಗೆ ತೊಂದರೆ ಕೊಡುತ್ತಿದ್ದಾರೆಂದು ವೇದಿಕೆಯ ಮೇಲೆಯೇ ಕಣ್ಣೀರು ಹಾಕಿದ ಸ್ಟಾರ್ ನಟ

Written by Soma Shekar

Updated on:

---Join Our Channel---

ರಾಜಕೀಯ ಎನ್ನುವುದು ಇಂದು ಎಲ್ಲಾ ಕ್ಷೇತ್ರಗಳಲ್ಲೂ ಇದೆ. ಎಲ್ಲೆಡೆ ಭ್ರ ಷ್ಟ ರ ರಾಜಕಾರಣ ತುಂಬಿ ಹೋಗಿದೆ. ಇಂತಹ ಕೊ ಳ ಕು ರಾಜಕೀಯದಿಂದ ಬಣ್ಣದ ಲೋಕ ಸಿನಿಮಾ ರಂಗವೇನೂ ಮುಕ್ತವಾಗಿಲ್ಲ. ಸಿನಿ ರಂಗದಲ್ಲೂ ಕೂಡಾ ರಾಜಕೀಯ ಇದೆ. ತೆರೆಯ ಮುಂದೆ ನಮಗೆ ಕಾಣುವಷ್ಟೇ ಸುಂದರ ಹಾಗೂ ವರ್ಣರಂಜಿತವಲ್ಲ ಈ ಸಿನಿಮಾ ಲೋಕ. ತೆರೆಯ ಹಿಂದೆ ಅನೇಕರು ಪಡುವ ಕಷ್ಟಗಳ ಸ್ವರೂಪವಾಗಿ ನಮ್ಮ ಕಣ್ಮುಂದೆ ಈ ಸಿನಿಮಾ ಲೋಕವು ಹೊಳೆಯುತ್ತದೆಯಷ್ಟೇ. ಇಲ್ಲಿಯೂ ಒಬ್ಬರನ್ನು ತುಳಿಯಲು ಮತ್ತೊಬ್ಬರು ಕಾಯುತ್ತಾ ಇರುತ್ತಾರೆ.

ಬಾಲಿವುಡ್ ಸಿನಿಮಾ ರಂಗದಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರ ದು ರಂ ತ ಅಂತ್ಯ, ಇತ್ತೀಚಿಗೆ ನಟ ಕಾರ್ತಿಕ್ ಅರ್ಯನ್ ನನ್ನು ಸಿನಿಮಾಗಳಿಂದ ದೂರವಿರಿಸಲು ನಡೆದ ಹುನ್ನಾರ ಇವೆಲ್ಲಾ ನೋಡಿದಾಗ ಚಿತ್ರ ರಂಗದಲ್ಲಿನ ರಾಜಕೀಯ ಯಾವ ಮಟ್ಟಕ್ಕೆ ಇದೆ ಎಂಬುದನ್ನು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. ಆದರೆ ಇಂತಹುದೇ ಒಂದು ಅನುಭವವನ್ನು ಒಬ್ಬ ಸ್ಟಾರ್ ನಟ ಹಂಚಿಕೊಂಡರೆ ?? ಎನ್ನುವ ಆಲೋಚನೆ ಕೂಡಾ ಆಶ್ಚರ್ಯ ಉಂಟು ಮಾಡುತ್ತದೆ.

ತಮಿಳು ಚಿತ್ರರಂಗದಲ್ಲಿ ಬಾಲ ನಟನಾಗಿ, ಅನಂತರ ನಾಯಕ ನಟನಾಗಿ ಹೆಸರು ಮಾಡಿರುವ ನಟ ಸಿಲಂಬರಸನ್ ಅಥವಾ ಸಿಂಬು. ಈ ಸ್ಟಾರ್ ನಟ ತಾನು ಸಿನಿಮಾ ರಂಗದಲ್ಲಿ ಅನುಭವಿಸುತ್ತಿರುವ ಕಷ್ಟದ ಬಗ್ಗೆ ಕಣ್ಣೀರು ಹಾಕುತ್ತಾ ಹೇಳಿ ಕೊಂಡಿದ್ದಾರೆ. ಸಿಂಬು ನಟನೆಯ ಹೊಸ ಸಿನಿಮಾ ಮಾನಾಡು ಸಿನಿಮಾದ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಅವರು ತಮ್ಮ‌ ಮನಸ್ಸಿನ ವೇದನೆ ಯನ್ನು ಹೊರ ಹಾಕಿದ್ದಾರೆ. ಈ ಸಿನಿಮಾ ಆರಂಭದಲ್ಲಿ ನಿರ್ಮಾಪಕರ ಜೊತೆ ಸಿಂಬು ಕಿರಿಕ್ ಮಾಡಿಕೊಂಡಿದ್ದರು.

ಅನಂತರ ಸಂಧಾನ ಮಾಡಿಕೊಂಡು ಸಿನಿಮಾಕ್ಕೆ ವಾಪಸ್ ಆಗಿದ್ದರು. ಇನ್ನು ಸಿನಿಮಾ ಪ್ರಿ ರಿಲೀಸ್ ವೇಳೆಯಲ್ಲಿ ಮಾತು ಆರಂಭಿಸುವಾಗಲೇ ಭಾವುಕರಾಗಿದ್ದರು. ಸಿಂಬು ಮಾತನಾಡುತ್ತಾ ತಮಗೆ ಚಿತ್ರರಂಗದಲ್ಲಿ ಅನೇಕರು ತೊಂದರೆ ಕೊಡುತ್ತಿದ್ದಾರೆ ಎನ್ನುವ ಮಾತನ್ನು ಹೇಳಿದ್ದಾರೆ. ಆದರೆ ಅವರು ಯಾರದೇ ಹೆಸರನ್ನು ಬಹಿರಂಗಪಡಿಸಿಲ್ಲ. ನಾನು ತುಂಬಾ ಸಮಸ್ಯೆ ಎದುರಿಸಿದ್ದೇನೆ, ಅವರು ತೊಂದರೆ ಕೊಡುತ್ತಲೇ ಇದ್ದಾರೆ, ಅವೆಲ್ಲವನ್ನೂ ನಾನು ಪರಿಹರಿಸಿಕೊಳ್ಳುತ್ತೇನೆ, ನೀವು ನನ್ನ ಕಾಳಜಿ ವಹಿಸಿ ಎಂದು ಸಿಂಬು ತಮ್ಮ ಅಭಿಮಾನಿಗಳಿಗೆ ಹೇಳಿದ್ದಾರೆ.

Leave a Comment