“ಸಿನಿಮಾ ಬ್ಲಾಕ್ ಟಿಕೆಟ್ ಮಾರುತ್ತಿದ್ದೆ”- ದಕ್ಷ ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರ್ ವೇದಿಕೆ ಮೇಲೆ ಬಿಚ್ಚಿಟ್ಟ ಸತ್ಯ

Written by Soma Shekar

Published on:

---Join Our Channel---

ರಾಜ್ಯ ಕಂಡಂತಹ ದಕ್ಷ ಐಪಿಎಸ್ ಅಧಿಕಾರಿಗಳಲ್ಲಿ ಒಬ್ಬರಾಗಿದ್ದಾರೆ ರವಿ ಡಿ ಚೆನ್ನಣ್ಣನವರ್. ಅವರ ಕಾರ್ಯ ದಕ್ಷತೆಯನ್ನು ನೋಡಿ ಬಹಳಷ್ಟು ಜನರು ಅವರ ಅಭಿಮಾನಿಗಳಾಗಿದ್ದರೆ, ಅವರ ಭಾಷಣಗಳನ್ನು ಕೇಳಿ ಅನೇಕ ಜನರು ಸ್ಪೂರ್ತಿಯನ್ನು ಪಡೆದುಕೊಂಡಿದ್ದಾರೆ. ಬಹಳಷ್ಟು ಯುವಜನರಿಗೆ ಅವರು ಒಂದು ರೋಲ್ ಮಾಡೆಲ್ ಅಥವಾ ಒಬ್ಬ ಮಾದರಿ ವ್ಯಕ್ತಿಯಾಗಿದ್ದಾರೆ. ಇಂದಿನ ಯುವ ಜನರು ಪೋಲಿಸ್ ಇಲಾಖೆಗೆ ಸೇರಲು ಆಸಕ್ತಿಯನ್ನು ತೋರಿಸಲು, ಅವರಲ್ಲೊಂದು ಉತ್ಸಾಹವನ್ನು ಮೂಡಿಸಲು ರವಿ ಡಿ ಚೆನ್ನಣ್ಣನವರ್ ಮಾದರಿಯಾಗಿದ್ದಾರೆ.

ಹೀಗೆ ಜನರ ಅಪಾರವಾದ ಪ್ರೀತಿ, ವಿಶ್ವಾಸ ಹಾಗೂ ಅಭಿಮಾನವನ್ನು ತನ್ನದಾಗಿಸಿಕೊಂಡಿರುವ ಈ ದಕ್ಷ ಪೋಲಿಸ್ ಅಧಿಕಾರಿಯು ಒಂದು ಕಾಲದಲ್ಲಿ ಸಿನಿಮಾ ಟಿಕೆಟ್ ಗಳನ್ನು ಬ್ಲಾಕ್ ನಲ್ಲಿ ಮಾರುವ ಕೆಲಸವನ್ನು ಮಾಡುತ್ತಿದ್ದರು ಎನ್ನುವ ವಿಷಯವನ್ನು ಕೇಳಿದರೆ ಅಚ್ಚರಿಯಾಗಬಹುದು. ಹೌದು ಈ ವಿಚಾರವನ್ನು ಸ್ವತಃ ರವಿ ಡಿ ಚೆನ್ನಣ್ಣನವರ್ ಅವರೇ ಹೇಳಿಕೊಂಡಿದ್ದು, ಇದು ಎಲ್ಲರಿಗೂ ಸಹಾ ಆಶ್ಚರ್ಯವನ್ನು ಉಂಟು ಮಾಡಿದೆ.

ಲವ್ ಮಾಕ್ಟೇಲ್ ಖ್ಯಾತಿಯ ಡಾರ್ಲಿಂಗ್ ಕೃಷ್ಣ ನಾಯಕನಾಗಿರುವ, ನಿಶ್ವಿಕಾ ನಾಯ್ಡು ಮತ್ತು ಮೇಘಾ ಶೆಟ್ಟಿ ನಾಯಕಿಯರಾಗಿರುವ ಹೊಸ ಸಿನಿಮಾ ದಿಲ್ ಪಸಂದ್ ನ ಸುದ್ದಿಗೋಷ್ಠಿ ಸೋಮವಾರ ನಡೆದಿದೆ. ಇದೇ ಮೊದಲ ಬಾರಿಗೆ ಎನ್ನುವಂತೆ ರವಿ ಡಿ ಚೆನ್ನಣ್ಣನವರ್ ಈ ಸಿನಿಮಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು. ಅತಿಥಿಯಾಗಿ ಬಂದ ಅವರು ವೇದಿಕೆಯಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡು ಎಲ್ಲರ ಗಮನವನ್ನು ಸೆಳೆದಿದ್ದಾರೆ.

ರವಿ ಡಿ ಚೆನ್ನಣ್ಣನವರ್ ಅವರು ಈ ವೇಳೆ ಇದುವರೆಗೂ ಯಾರಿಗೂ ಗೊತ್ತಿರದ ವಿಚಾರಗಳನ್ನು ಸಹಾ ಹಂಚಿಕೊಳ್ಳುತ್ತಾ, ‘ಎಲ್ಲೂ ಹೇಳಲಾರದ ಒಂದು ಸತ್ಯವನ್ನು ನಾನು ಇಂದು ಹೇಳುತ್ತಿದ್ದೇನೆ, ನಾನು ಗದಗದಲ್ಲಿ ಸಿನಿಮಾ ಬ್ಲಾಕ್​ ಟಿಕೆಟ್​ ಮಾರುತ್ತಿದ್ದೆ. ಮಹಾಲಕ್ಷ್ಮೀ, ಶಾಂತಿ ಚಿತ್ರಮಂದಿಗಳಲ್ಲಿ ಬ್ಲಾಕ್​ ಟಿಕೆಟ್​ ಮಾರಿದ್ದೆ” ಎಂದಿದ್ದಾರೆ. ‘ಅಸುರ’ ಸಿನಿಮಾ ರಿಲೀಸ್​ ಆದಾಗ ನಾನು ಪ್ರಥಮ ಪಿಯುಸಿ ಹುಡುಗ. ಯಜಮಾನ, ದಿಲ್​ ಕಾ ರಿಶ್ತಾ, ಅಂಜಲಿ ಗೀತಾಂಜಲಿ ಸಿನಿಮಾಗಳು ಬಂದಾಗ ಹುಬ್ಬಳ್ಳಿಯಿಂದ ತೆಗೆದುಕೊಂಡು ಬರುತ್ತಿದ್ದೆ ಎನ್ನುವ ವಿಚಾರ ಹಂಚಿಕೊಂಡಿದ್ದಾರೆ.

ರವಿ ಡಿ ಚೆನ್ನಣ್ಣನವರ್ ಈ ವೇಳೆ ಬರೆದ ಪುಸ್ತಕವನ್ನು ಜನರು ಓದುತ್ತಾರೋ ಇಲ್ಲವೋ ಆದರೆ ಸಿನಿಮಾ ಮಾತ್ರ ಖಂಡಿತ ನೋಡುತ್ತಾರೆ ಎಂದು ಹೇಳುವ ಮೂಲಕ ಇಂದು ಸಿನಿಮಾಗಳ ಪ್ರಭಾವ ಹೇಗಿದೆ ಎನ್ನುವ ವಿಚಾರವನ್ನು, ಅವುಗಳ ಪ್ರಾಮುಖ್ಯತೆಯನ್ನು ಸಹಾ ಹೇಳಿದ್ದಾರೆ. ದಿಲ್ ಪಸಂದ್ ಸಿನಿಮಾಕ್ಕೆ ಸುಮಂತ್ ಕ್ರಾಂತಿ ಅವರು ನಿರ್ಮಪಕರಾಗಿದ್ದು , ಶಿವ ತೇಜಸ್ ಅವರು ಸಿನಿಮಾ ನಿರ್ದೇಶನವನ್ನು ಮಾಡುತ್ತಿದ್ದಾರೆ.

Leave a Comment