ಸಿನಿಮಾ ಬಿಡುಗಡೆಗೂ ಮುನ್ನ ಕಂಗನಾ ಮಾಡಿದ ಕೆಲಸಕ್ಕೆ ಹರಿದು ಬರುತ್ತಿದೆ ನೆಟ್ಟಿಗರ ಅಪಾರ ಮೆಚ್ಚುಗೆ

0 0

ಸದಾ ಒಂದಲ್ಲ ಒಂದು ಹೇಳಿಕೆಯ ಮೂಲಕ ವಿ ವಾ ದಗಳಿಗೆ ಕಾರಣವಾಗುವ ಬಾಲಿವುಡ್ ನಟಿ ಕಂಗನಾ ರಣಾವತ್ ಸಿನಿಮಾಗಳ ವಿಚಾರಕ್ಕೆ ಬಂದರೆ ಒಂದಕ್ಕಿಂತ ಮತ್ತೊಂದು ಎನ್ನುವ ಹಾಗೆ ಅವರು ವೈವಿಧ್ಯಮಯ ಪಾತ್ರಗಳಿಗೆ ಜೀವವನ್ನು ತುಂಬುವುದರಲ್ಲಿ ಪ್ರವೀಣೆ ಎನ್ನುವಂತೆ ವಿಮರ್ಶಕರಿಂದ ಈಗಾಗಲೇ ಮೆಚ್ಚುಗೆಗಳನ್ನು ಪಡೆದುಕೊಂಡಿದ್ದಾರೆ. ಪ್ರಸ್ತುತ ಅವರು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ದಕ್ಷಿಣ ಸಿನಿಮಾರಂಗದ ಸ್ಟಾರ್ ನಟಿಯಾಗಿದ್ದ ದಿವಂಗತ ಜಯಲಲಿತಾ ಅವರ ಜೀವನವನ್ನು ಆಧರಿಸಿದ ತಲೈವಿ ಸಿನಿಮಾದಲ್ಲಿ, ಜಯಲಲಿತಾ ಪಾತ್ರವನ್ನು ಪೋಷಿಸಿದ್ದಾರೆ. ಈ ಸಿನಿಮಾ ಇದೇ ಸೆಪ್ಟೆಂಬರ್ 10 ರಂದು ತೆರೆಗೆ ಬರಲು ಸಿದ್ಧವಾಗಿದೆ. ತಲೈವಿ ಸಿನಿಮಾ ತಮಿಳು, ತೆಲುಗು ಮತ್ತು ಹಿಂದಿ ಈ ಮೂರು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಉಳಿದಿರುವ ಹಿನ್ನೆಲೆಯಲ್ಲಿ ನಟಿ ಕಂಗನಾ ರಣಾವತ್ ಇಂದು ಬೆಳಗ್ಗೆ ಚೆನ್ನೈನ ಮರಿನಾ ಬೀಚ್ ನಲ್ಲಿ ಇರುವ ಜಯಲಲಿತಾ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ್ದು, ಜಯಲಲಿತಾ ಅವರ ಸಮಾಧಿಗೆ ಗೌರವ ಸಲ್ಲಿಸಿದ್ದಾರೆ. ಸಿನಿಮಾ ಬಿಡುಗಡೆಗೂ ಮೊದಲೇ ಜಯಲಲಿತಾ ಅವರ ಸಮಾಧಿ ಸ್ಥಳಕ್ಕೆ ಬಂದು ಸಮಾಧಿಗೆ ನಮಿಸಿ, ಗೌರವವನ್ನು ಸೂಚಿಸಿರುವ ಕಂಗನಾ ಅವರ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಜನರಿಂದ ಮೆಚ್ಚುಗೆಗಳು ಹರಿದುಬರುತ್ತಿದೆ. ಕಂಗನಾ ಅವರ ಫೋಟೋಗಳು ವೈರಲ್ ಆಗಿವೆ‌. ತಲೈವಿ ಸಿನಿಮಾದ ಪೋಸ್ಟರ್, ಟೀಸರ್ ಹಾಗೂ ಹಾಡಿನ ದೃಶ್ಯಗಳು ಈಗಾಗಲೆ ಬಿಡುಗಡೆಯಾಗಿ ಜನರ ಗಮನ ಸೆಳೆದಿದೆ.

ಸಿನಿಮಾದ ಪೋಸ್ಟರ್ ಬಿಡುಗಡೆಯಾದಾಗ ಕಂಗನಾ ರಣಾವತ್ ಅವರನ್ನು ಟ್ರೋಲ್ ಕೂಡ ಮಾಡಲಾಗಿತ್ತು. ಆದರೆ ಇವೆಲ್ಲವುಗಳ ಹೊರತಾಗಿಯೂ ತಲೈವಿ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಸಿನಿಮಾದಲ್ಲಿ ತಮಿಳು ಚಿತ್ರರಂಗದಲ್ಲಿ ರೋಜಾ‌‌ ಸಿನಿಮಾದ ಮೂಲಕ ಹೆಸರು ಮಾಡಿದ್ದ ಹಿರಿಯ ನಟ ನಟ ಅರವಿಂದ ಸ್ವಾಮಿ ಯವರು ಎಂಜಿಆರ್ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷವಾಗಿದೆ. ಚಿತ್ರಕಥೆಯನ್ನು ಕೆ ವಿ ವಿಜಯೇಂದ್ರ ಕೇಂದ್ರ ಪ್ರಸಾದ್ ಅವರು ರಚಿಸಿದ್ದಾರೆ. ಜಯಲಲಿತಾ ಪಾತ್ರದಲ್ಲಿ ನಟಿ ಕಂಗನಾ ರಣಾವತ್ ಹೇಗೆ ನಟಿಸಿದ್ದಾರೆ ಹಾಗೂ ಈ ಪಾತ್ರದ ಮೂಲಕ ಅವರು ಯಾವ ರೀತಿ ಅಭಿಮಾನಿಗಳನ್ನು ರಂಜಿಸಲಿದ್ದಾರೆ?? ಅವರ ಪಾತ್ರ ಎಷ್ಟು ಪರಿಣಾಮಕಾರಿಯಾಗಿ ಮೂಡಿಬಂದಿದೆ ?? ಎನ್ನುವುದಕ್ಕೆ ಸಿನಿಮಾ ಬಿಡುಗಡೆಯವರೆಗೂ ಕಾಯಬೇಕಾಗಿದೆ.

Leave A Reply

Your email address will not be published.