ನನ್ನ ಖಾಸಗಿ ಬದುಕನ್ನು ಹಾಳು ಮಾಡಿದ ಸಿನಿಮಾ ನನಗಿನ್ನು ಬೇಕಾಗಿಲ್ಲ!! ಅಮೀರ್ ಖಾನ್ ಬೇಸರ

Entertainment Featured-Articles News

ಹಿಂದಿ ಸಿನಿಮಾರಂಗದಲ್ಲಿ ಮಿಸ್ಟರ್ ಪರ್ಫೆಕ್ಟ್ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿರುವ, ತನ್ನದೇ ಆದಂತಹ ಸ್ಥಾನ ಹಾಗೂ ವರ್ಚಸ್ಸನ್ನು ಪಡೆದು ಸ್ಟಾರ್ ನಟ ಎನಿಸಿಕೊಂಡಿರುವ ನಟ ಅಮೀರ್ ಖಾನ್ ಅವರು ಚಿತ್ರರಂಗವನ್ನು ತೊರೆಯಲಿದ್ದಾರೆಯೇ?? ಸಿನಿ ಜಗತ್ತಿನಲ್ಲಿ ಈಗ ಇಂತಹದೊಂದು ಚರ್ಚೆ ಬಹಳ ಜೋರಾಗಿ ನಡೆಯುತ್ತಿದೆ. ಲಾಲ್ ಸಿಂಗ್ ಚಡ್ಡಾ ಅಮೀರ್ ಖಾನ್ ಅಭಿನಯದ ಹೊಸ ಸಿನಿಮಾ ಆಗಿದ್ದು, ಇದೇ ಅವರ ಕೊನೆಯ ಸಿನಿಮಾ ಆಗಲಿದೆ ಎನ್ನುವುದು ಈಗ ಟಾಕ್ ಆಫ್ ದಿ ಟೌನ್ ಆಗಿದೆ. ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಿಡುಗಡೆಗಾಗಿ ಸಜ್ಜಾಗಿದೆ.

ಅಮೀರ್ ಖಾನ್ ತಾನು ಚಿತ್ರರಂಗ ತೊರೆಯುವ ವಿಚಾರವನ್ನು ಈಗಲೇ ಹೇಳಿದರೆ ಅದು ತನ್ನ ಹೊಸ ಸಿನಿಮಾ ಪ್ರಚಾರಕ್ಕಾಗಿ ಮಾಡುತ್ತಿರುವ ಗಿಮಿಕ್ ಎಂದು ಜನ ಭಾವಿಸುತ್ತಾರೆ. ಆದ್ದರಿಂದಲೇ ಸಿನಿಮಾ ಬಿಡುಗಡೆಯ ನಂತರ ನಟ ಅಮೀರ್ ಖಾನ್ ತಾವು ಚಿತ್ರರಂಗಕ್ಕೆ ವಿದಾಯ ಹೇಳಲಿರುವ ವಿಷಯವನ್ನು ಬಹಿರಂಗಪಡಿಸುತ್ತಾರೆ ಎಂದು ಸುದ್ದಿಗಳು ಹರಡಿವೆ. ತಮ್ಮ ನೆಚ್ಚಿನ ನಟ ಸಿನಿಮಾರಂಗಕ್ಕೆ ಗುಡ್ ಬೈ ಹೇಳಲಿದ್ದಾರೆ ಎನ್ನುವ ವಿಚಾರಗಳಾದ ಅವರ ಅಭಿಮಾನಿಗಳು ಸಾಕಷ್ಟು ಆ ತಂ ಕಕ್ಕೆ ಒಳಗಾಗಿದ್ದಾರೆ.

ಈ ವಿಷಯ ವಾಸ್ತವವೋ, ಅಲ್ಲವೋ ಎಂದು ತಿಳಿಯುವಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿದ್ದಾರೆ ಅಭಿಮಾನಿಗಳು. ನಟ ಅಮೀರ್ ಖಾನ್ ಅವರು ಖಾಸಗಿ ವಾಹಿನಿಯೊಂದರ ಸಂದರ್ಶನದ ವೇಳೆ, ಇಷ್ಟು ವರ್ಷಗಳ ಕಾಲ ಸಿನಿಮಾ ರಂಗದಲ್ಲಿ ಮುಳುಗಿ ಹೋಗಿದ್ದೇ, ನನ್ನ ಮಕ್ಕಳಿಗೆ ಏನು ಬೇಕು, ಅವರ ಇಷ್ಟಗಳು ಏನು ಎನ್ನುವುದೇ ನನಗೆ ಗೊತ್ತಾಗಲಿಲ್ಲ. ಒಂದು ಹಂತದಲ್ಲಿ ನನ್ನ ತಪ್ಪಿನ ಬಗ್ಗೆ ನನಗೆ ಅರಿವಾದಾಗ, ನನ್ನ ಮೇಲೆ ನನಗೆ ಬಹಳ ಸಿಟ್ಟು ಬಂದಿತ್ತು.

ಸಿನಿಮಾ ನನ್ನ ಕುಟುಂಬದ ನಡುವೆ ಒಂದು ಬಿರುಕನ್ನು ಮೂಡಿಸಿದೆ. ಆದ್ದರಿಂದಲೇ ನಾನು ನನ್ನ ಕುಟುಂಬದವರಿಗೆ, ಇನ್ನು ಮುಂದೆ ಯಾವುದೇ ಸಿನಿಮಾಗಳಲ್ಲಿ ನಟಿಸುವುದಿಲ್ಲ ಹಾಗೂ ಸಿನಿಮಾ ನಿರ್ಮಾಣ ಸಹಾ ಮಾಡುವುದಿಲ್ಲ ಎಂದು ಹೇಳಿಬಿಟ್ಟಿದ್ದೇನೆ ಎನ್ನುವ ಮಾತುಗಳನ್ನು ಹೇಳಿದ್ದಾರೆ. ಅಮೀರ್ ಖಾನ್ ಅವರ ಮಾತುಗಳನ್ನು ಕೇಳಿದ ನಂತರ ಬಾಲಿವುಡ್‌ ದಿಗ್ಗಜರು ಮಾತ್ರವೇ ಅಲ್ಲದೇ ಅವರ ಮಾಜಿ ಪತ್ನಿ ಕಿರಣ್ ರಾವ್ ಸಹಾ ನಟನ ನಿರ್ಧಾರವು ಸರಿಯಲ್ಲ ಎಂದು ಹೇಳುತ್ತಿದ್ದಾರೆ.

Leave a Reply

Your email address will not be published.