ಸಿನಿಮಾ ಆಗುತ್ತಂತೆ ಸೋನು ಲೈಫ್ ಸ್ಟೋರಿ: ಹಾಗಾದ್ರೆ ಅದಕ್ಕೆ ನಾಯಕಿ ಯಾರಾಗ್ತಾರೆ?? ಶಾಕ್ ಆಗ್ತಿದ್ದಾರೆ ನೆಟ್ಟಿಗರು!!

Entertainment Featured-Articles Movies News

ಸೋಶಿಯಲ್ ಮೀಡಿಯಾ ಸೆನ್ಸೇಷನ್ ಸೋನು ಶ್ರೀನಿವಾಸ್ ಗೌಡ ಮತ್ತೊಮ್ಮೆ ಈಗ ಸದ್ದು ಸುದ್ದಿ ಮಾಡುತ್ತಿದ್ದು, ಈ ಹಿಂದೆ ಸೋಶಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡುತ್ತಾ, ಸಿಕ್ಕಾಪಟ್ಟೆ ಟ್ರೋಲ್ ಗಳ ಮೂಲಕವೇ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡ ಸೋನು, ಈಗ ಬಿಗ್ ಬಾಸ್ ಓಟಿಟಿ ಕನ್ನಡದ ಮೊದಲನೇ ಸೀಸನ್ ನಲ್ಲಿ ತನ್ನ ಆಟದ ಮೂಲಕ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದಾರೆ. ಸೋನುವನ್ನು ನೋಡಲು ಪ್ರೇಕ್ಷಕರು, ಸೋನು ಮನೆಯಲ್ಲಿ ಏನೆಲ್ಲಾ, ಹೇಗೆಲ್ಲಾ ತಮ್ಮ ಆಟದ ಮೂಲಕ ರಂಜಿಸುತ್ತಾರೆ ಎಂದು ನೋಡುವ ಕುತೂಹಲ ಪ್ರೇಕ್ಷಕರಲ್ಲಿ ಇರುವುದು ಈಗಾಗಲೇ ಎರಡು ಬಾರಿ ಸಾಬೀತು ಸಹಾ ಆಗಿದೆ. ಹೇಗೆ ಅಂತೀರಾ?

ಸೋನು ಶ್ರೀನಿವಾಸ್ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಮೊದಲ ಎರಡು ವಾರಗಳಲ್ಲೂ ಸಹಾ ಮನೆಯಿಂದ ಹೊರಗೆ ಬರಲು ನಾಮಿನೇಟ್ ಆಗಿದ್ದರು. ಆದರೆ ಪ್ರೇಕ್ಷಕರು ನೀಡಿರುವ ಓಟಗಳ ಪರಿಣಾಮವಾಗಿ ಸೋನು ನಾಮಿನೇಷನ್ ನಿಂದ ಸೇಫ್ ಆಗಿ, ಮನೆಯಲ್ಲಿ ಮೂರನೇ ವಾರ ತಮ್ಮ‌ ಜರ್ನಿಯನ್ನು ಮುಂದುವರೆಸಿದ್ದಾರೆ. ಇದರಲ್ಲೇ ಸೋನು ಆಟ ಪ್ರೇಕ್ಷಕರಿಗೆ ಮನರಂಜನೆ ನೀಡಿದೆ ಎನ್ನುವುದು ತಿಳಿಯುತ್ತಿದೆ. ಹೀಗೆ ಸೋಶಿಯಲ್ ಮೀಡಿಯಾ, ಬಿಗ್ ಬಾಸ್ ಗಳ ಮೂಲಕ ಸದ್ದು ಮಾಡಿರುವ ಸೋನು ಶ್ರೀನಿವಾಸ್ ಗೌಡ ಅವರ ಜೀವನಾಧಾರಿತ ಸಿನಿಮಾ ತೆರೆಗೆ ಬರಲಿದೆ ಎನ್ನುವ ಹೊಸ ಸುದ್ದಿ ಈಗ ಕುತೂಹಲ ಕೆರಳಿಸಿದೆ.

ಹೌದು, ಬಿ ಟಿವಿ ಇಂತಹುದೊಂದು ವಿಚಾರವನ್ನು ಹಂಚಿಕೊಂಡಿದ್ದು, ನೆಟ್ಟಿಗರು ಅಚ್ಚರಿ ಯನ್ನು ವ್ಯಕ್ತಪಡಿಸುತ್ತಿದ್ದಾರೆ. ಕನ್ನಡದ ಖ್ಯಾತ ನಿರ್ಮಾಪಕರೊಬ್ಬರು ಸೋನು ಅವರ ಜೀವನಾಧಾರಿತ ಕಥೆಯನ್ನು ಸಿನಿಮಾ ಮಾಡಲು ಸಿದ್ಧತೆಗಳನ್ನು ನಡೆಸಿದ್ದಾರೆ ಎನ್ನಲಾಗಿದೆ. ಹಾಗಾದರೆ ಈ ಸಿನಿಮಾದಲ್ಲಿ ನಾಯಕಿಯಾಗಿ ಸೋನು ಗೌಡ ಅವರೇ ನಟಿಸ್ತಾರಾ? ಅಥವಾ ಬೇರೆ ಯಾರಾದರೂ ಆ ಪಾತ್ರಕ್ಕೆ ಬರಲಿದ್ದಾರಾ? ಎನ್ನುವ ಪ್ರಶ್ನೆಗಳು ಸಹಾ ಈಗ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡಲು ಆರಂಭಿಸಿದ್ದು, ಸುದ್ದಿ ಈಗ ವೈರಲ್ ಆಗಿದ್ದು, ನೆಟ್ಟಿಗರು ತರಹೇವಾರಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

ಸೋನಿ ಗೌಡ ಸಿನಿಮಾ ಎಂದ ಕೂಡಲೇ ಸಹಜವಾಗಿಯೇ ಅನೇಕರು ವ್ಯಂಗ್ಯ ಮಾಡುತ್ತಿದ್ದಾರೆ. ಈ ವಿಚಾರ ಮತ್ತೊಮ್ಮೆ ಟ್ರೋಲ್ ಆದ್ರೂ ಅದರಲ್ಲಿ ಅಚ್ಚರಿ ಪಡುವಂತಹ ವಿಷಯವೇನಿಲ್ಲ. ಇನ್ನು ಸೋನು ಶ್ರೀನಿವಾಸ್ ಗೌಡ ಅವರು ಬಿಗ್ ಬಾಸ್ ಒಟಿಟಿ ಕನ್ನಡಕ್ಕೆ ಬರುತ್ತಿದ್ದಾರೆ ಎಂದ ಕೂಡಲೇ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿವರು ಸಿಟ್ಟು, ಅಸಮಾಧಾನವನ್ನು ಹೊರ ಹಾಕಿದ್ದರು. ಅಲ್ಲದೇ ನೆಗೆಟಿವ್ ಕಾಮೆಂಟ್ ಗಳೇ ದೊಡ್ಡ ಮಟ್ಟದಲ್ಲಿ ಹರಿದು ಬಂದಿದ್ದವು. ಒಂದೇ ವಾರದಲ್ಲಿ ಸೋನು ಶ್ರೀನಿವಾಸ್ ಗೌಡ ಮನೆಯಿಂದ ಹೊರಗೆ ಬರೋದು ಗ್ಯಾರಂಟಿ ಎಂದೆಲ್ಲಾ ಕಾಮೆಂಟ್ ಗಳನ್ನು ಸಹಾ ಮಾಡಲಾಗಿತ್ತು.

ಆದರೆ ಈಗ ಎರಡು ವಾರ ಮುಗಿದರೂ ಸೋನು ಜರ್ನಿ ಮುಂದುವರೆದಿದೆ. ಸೋನು ಮನೆಯಲ್ಲಿ ಬಾಯ್ ಫ್ರೆಂಡ್ ನಿಂದ ತಮಗಾದ ತೊಂದರೆ, ತಾನು ಮನೆಗೆ ಹೋಗಿಲ್ಲ ಎನ್ನುವ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ತಮ್ಮದೇ ಆದ ಟ್ರ್ಯಾಕ್ ನಲ್ಲಿ ಬಿಗ್ ಬಾಸ್ ಆಟ ಆಡುತ್ತಿದ್ದಾರೆ. ಇದೆಲ್ಲವೂ ಸಹಾ ಪ್ರೇಕ್ಷಕರ ಮನಸ್ಸನ್ನು ಗೆದ್ದಂತೆ ಕಾಣುತ್ತಿದೆ. ಸೋನು ಮನೆಯಲ್ಲಿ ಏನೇನು ಮಾಡಲಿದ್ದಾರೆ ಎಂದು ನೋಡಲು ಪ್ರೇಕ್ಷಕರು ಮತ್ತೆ ಮತ್ತೆ ಓಟುಗಳನ್ನು ನೀಡುವ ಮೂಲಕ ಸೋನು ಶ್ರೀನಿವಾಸ್ ಗೌಡ ಅವರನ್ನು ಎಲಿಮಿನೇಷನ್ ಆಗುವುದರಿಂದ ಉಳಿಸುತ್ತಿದ್ದಾರೆ.

Leave a Reply

Your email address will not be published.