ಸಿನಿಮಾದಲ್ಲಿ ಹೀರೋ ವಿಜಯ ದೇವರ ಕೊಂಡ, ಆದ್ರೆ ಹೆಚ್ಚು ಸಂಭಾವನೆ ಮಾತ್ರ ಅತಿಥಿ ಪಾತ್ರಕ್ಕೆ ಹೊರತು ನಾಯಕನಿಗಲ್ಲ
ಸಾಮಾನ್ಯವಾಗಿ ಸಿನಿಮಾಗಳಲ್ಲಿ ನಾಯಕನಿಗೆ ಸಿಗುವಷ್ಟು ಸಂಭಾವನೆ ಬೇರೆ ಯಾವ ಕಲಾವಿದರಿಗೂ ಸಿಗುವುದಿಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಅದರಲ್ಲೂ ಸ್ಟಾರ್ ನಟರಾದರೆ ಸಿನಿಮಾವೊಂದರ ಸಂಭಾವನೆಯಾಗಿ ಕೋಟಿ ಕೋಟಿ ತಮ್ಮ ಜೇಬಿಗೆ ಇಳಿಸುತ್ತಾರೆ. ಸಿನಿಮಾ ಹಿಟ್ ಆದರೆ ಮುಂದಿನ ಸಿನಿಮಾಕ್ಕೆ ಸಂಭಾವನೆ ಜಾಸ್ತಿಯಾಗಿ ಬಿಡುತ್ತದೆ. ಆದರೆ ಇದೀಗ ಟಾಲಿವುಡ್ ನ ಯುವ ನಟ ವಿಜಯ ದೇವರಕೊಂಡ ನಟಿಸುತ್ತಿರುವ ಹೊಸ ಸಿನಿಮಾದಲ್ಲಿ ನಾಯಕನಿಗಿಂತಲೂ ಹೆಚ್ಚು ಸಂಭಾವನೆಯನ್ನು ಮತ್ತೊಬ್ಬರಿಗೆ ನೀಡಲಾಗಿದೆ ಎನ್ನುವ ಸುದ್ದಿ ಈಗ ಕುತೂಹಲ ಮೂಡಿಸಿದೆ.
ನಟ ವಿಜಯ್ ದೇವರಕೊಂಡ ಅಭಿನಯದ, ನಿರ್ದೇಶಕ ಪುರಿ ಜಗನ್ನಾಥ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಬಹುನಿರೀಕ್ಷಿತ ಸಿನಿಮಾ ಲೈಗರ್ ಈಗಾಗಲೇ ಕುತೂಹಲವನ್ನು ಮೂಡಿಸಿದೆ. ಕೊರೊನಾ ಲಾಕ್ ಡೌನ್ ಕಾರಣದಿಂದ ಬ್ರೇಕ್ ಪಡೆದಿದ್ದ ಸಿನಿಮಾ ಚಿತ್ರೀಕರಣ ಇದೀಗ ಭರದಿಂದ ಸಾಗಿದೆ. ಇನ್ನು ಇತ್ತೀಚೆಗಷ್ಟೇ ಚಿತ್ರ ತಂಡ ಬಾಕ್ಸಿಂಗ್ ಲೆಜೆಂಡ್ ಮೈಕ್ ಟೈಸನ್ ಈ ಸಿನಿಮಾದಲ್ಲಿ ನಟಿಸಲಿದ್ದಾರೆನ್ನುವ ಸುದ್ದಿಯನ್ನು ನೀಡಿತ್ತು.
ಮೈಕ್ ಟೈಸನ್ ಲೈಗರ್ ಸಿನಿಮಾದಲ್ಲಿ ನಟಿಸುವ ಸುದ್ದಿ ಕೇಳಿ ಅಭಿಮಾನಿಗಳು ಹಾಗೂ ಸಿನಿ ಪ್ರಿಯರು ಥ್ರಿಲ್ ಆಗಿದ್ದಾರೆ. ಇದೀಗ ಈ ಸುದ್ದಿಯ ಬೆನ್ನಲ್ಲೇ ಮೈಕ್ ಟೈಸನ್ ಈ ಸಿನಿಮಾಕ್ಕಾಗಿ ಪಡೆಯುತ್ತಿರುವ ಸಂಭಾವನೆ ವಿಷಯವು ಇದೀಗ ದೊಡ್ಡ ಸದ್ದನ್ನು ಮಾಡಿದೆ. ಎಲ್ಲೆಲ್ಲೂ ಸಹಾ ಮೈಕ್ ಟೈಸನ್ ಅವರ ಸಂಭಾವನೆಯ ವಿಷಯವೇ ಚರ್ಚೆಗೆ ಕಾರಣವಾಗಿದೆ ಹಾಗೂ ಎಲ್ಲರೂ ಸಂಭಾವನೆ ವಿಚಾರ ಕೇಳಿ ಆಶ್ಚರ್ಯವನ್ನು ಪಡುವಂತಾಗಿದೆ.
ವಿಶೇಷವೆಂದರೆ ಮೈಕ್ ಟೈಸನ್ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ, ಕ್ಲೈಮಾಕ್ಸ್ ಗಿಂತಲೂ ಸ್ವಲ್ಪ ಮುಂದೆ ಸಿನಿಮಾ ದೃಶ್ಯವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಆದರೆ ಈ ಸಣ್ಣ ಪಾತ್ರಕ್ಕಾಗಿ ಮೈಕ್ ಟೈಸನ್ ಪಡೆಯುತ್ತಿರುವ ಸಂಭಾವನೆ ಮಾತ್ರ ಸಿನಿಮಾದ ನಾಯಕ ನಟ ವಿಜಯ್ ದೇವರಕೊಂಡ ಅವರ ಸಂಭಾವನೆಗಿಂತಲೂ ಅಧಿಕ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡಿದ್ದು, ಎಲ್ಲರು ಹುಬ್ಬೇರಿಸುವಂತಾಗಿದೆ.
ಮೈಕ್ ಟೈಸನ್ ಅವರ ಸಂಭಾವನೆ ವಿಜಯ್ ದೇವರಕೊಂಡ ಅವರಿಗಿಂತ ಹೆಚ್ಚು ಎನ್ನಲಾಗಿದೆ ಆದರೆ ಅಧಿಕೃತವಾಗಿ ಈ ಸಂಭಾವನೆ ಎಷ್ಟು ಎನ್ನುವುದು ಮಾತ್ರ ಇನ್ನೂ ಬಹಿರಂಗವಾಗಿಲ್ಲ. ಲೈಗರ್ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ಇದರಲ್ಲಿ ವಿಜಗ್ ದೇವರಕೊಂಡ ಅವರ ಜೊತೆಗೆ ಬಾಲಿವುಡ್ ಬೆಡಗಿ ಅನನ್ಯ ಪಾಂಡೆ ನಾಯಕಿಯಾಗಿ ನಟಿಸುತ್ತಿದ್ದು ತೆಲುಗು ಸಿನಿ ರಂಗಕ್ಕೆ ಅಡಿಯಿಡುತ್ತಿದ್ದಾರೆ.