ಸಿನಿಮಾದಲ್ಲಿನ ಲಿಪ್ ಲಾಕ್ ಸೀನ್ ಬಗ್ಗೆ 25 ವರ್ಷಗಳ ನಂತ್ರ ಶಾಕಿಂಗ್ ವಿಷಯ ಬಾಯ್ಬಿಟ್ಟ ಕರಿಷ್ಮಾ ಕಪೂರ್‌

0
222

ರಾಜಾ ಹಿಂದೂಸ್ತಾನಿ ಸಿನಿಮಾ ಭರ್ಜರಿ 25 ವರ್ಷಗಳನ್ನು ಪೂರೈಸಿದೆ. ಅಮೀರ್ ಖಾನ್ ಮತ್ತು ಕರಿಷ್ಮಾ ಕಪೂರ್ ಜೋಡಿಯಾಗಿ ನಟಿಸಿದ್ದ ಈ ಸಿನಿಮಾ ಆಗ ಬಾಲಿವುಡ್ ನಲ್ಲಿ ದೊಡ್ಡ ಬ್ಲಾಕ್ ಬಸ್ಟರ್ ಸಿನಿಮಾ ಆಗಿದ್ದು ಮಾತ್ರವೇ ಅಲ್ಲದೇ ನಟಿ ಕರಿಷ್ಮಾ ಕಪೂರ್ ಅವರ ವೃತ್ತಿ ಜೀವನದಲ್ಲಿ ಒಂದು ದೊಡ್ಡ ಹೆಸರು, ಬ್ರೇಕ್ ನೀಡಿದ್ದು ಮಾತ್ರವೇ ಅಲ್ಲದೇ ನಟಿಗೆ ಈ ಸಿನಿಮಾದಲ್ಲಿನ ಅದ್ಭುತ ನಟನೆಗಾಗಿ ಪ್ರಶಸ್ತಿ ಕೂಡಾ ದೊರೆತಿತ್ತು. ಆಗ ಈ ಸಿನಿಮಾದ ಬಜೆಟ್ ಸುಮಾರು 5.3 ಕೋಟಿ, ಸಿನಿಮಾ ಗಳಿಸಿದ್ದು 73 ಕೋಟಿ ಎಂದರೆ ಎಂತಹ ಘನ ವಿಜಯ ಸಾಧಿಸಿತ್ತು ಎಂದು ತಿಳಿಯುತ್ತದೆ.

ಈ ಸಿನಿನಾ ಎಷ್ಟು ಫೇಮಸ್ ಆಯಿತೋ ಅಷ್ಟೇ ಚರ್ಚೆಗೆ ಕಾರಣವಾಗಿದ್ದು ಈ ಸಿನಿಮಾದಲ್ಲಿನ ಅಮೀರ್ ಖಾನ್ ಮತ್ತು ಕರಿಷ್ಮಾ ಕಪೂರ್ ಲಿಪ್ ಲಾಕ್ ಅಥವಾ ಚುಂಬನ ದೃಶ್ಯ. ಬಾಲಿವುಡ್ ಸಿನಿಮಾಗಳಲ್ಲಿ ಸುದೀರ್ಘವಾದ ಚುಂಬನ ದೃಶ್ಯ ಎಂದು ಸಹಾ ಪರಿಗಣಿಸಲ್ಪಟ್ಟಿದೆ. ಇಪ್ಪತ್ತೈದು ವರ್ಷಗಳ ಹಿಂದೆ ಇಂತಹ ದೃಶ್ಯಕ್ಕೆ ಕರಿಷ್ಮಾ ಕಪೂರ್ ಒಪ್ಪಿ ಮಾಡಿದ್ದು ಒಂದು ಬೋಲ್ಡ್ ನಿರ್ಧಾರವಾಗಿತ್ತು ಎನ್ನುವುದು ನಿಜವಾಗಿತ್ತು. ಆದರೆ ಈ ಚುಂಬನ ದೃಶ್ಯದ ಬಗ್ಗೆ ಕೆಲವೊಂದು ಹೊಸ ವಿಷಯಗಳನ್ನು ಬಹಿರಂಗ ಪಡಿಸಿದ್ದಾರೆ.

ಕರಿಷ್ಮಾ ಕಪೂರ್ ಈ ಕಿಸ್ಸಿಂಗ್ ದೃಶ್ಯವನ್ನು ಮಾಡಲು ನಮಗೆ ಮೂರು ದಿನಗಳ ಕಾಲಾವಧಿ ಹಿಡಿಯಿತು ಎಂದು ಹೇಳಿದ್ದಾರೆ. ಈ ದೃಶ್ಯ ಯಾವಾಗ ಮುಗಿಯುತ್ತೆ ಅಂತ ನಾನು‌ ಕಾಯ್ತಾ ಇದ್ದೆ. ಆಗ ಫೆಬ್ರವರಿ ತಿಂಗಳು, ಊಟಿಯಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಅಲ್ಲಿ ಬಹಳ ಚಳಿ ಇದ್ದುದ್ದರಿಂದ ಸಂಜೆ ಆರು ಗಂಟೆಗೆ ಚಿತ್ರೀಕರಣ ನಡೆಸಲಾಗುತ್ತದೆ. ಅಲ್ಲದೇ ಆ ವೇಳೆಯಲ್ಲಿ ನಾನು ಚಳಿಯಿಂದ ನಡುಗುತ್ತಿರುತ್ತಿದೆ ಎನ್ನುವ ಮಾತನ್ನು ಕರಿಷ್ಮಾ ಕಪೂರ್ ಅವರು ಇಪ್ಪತ್ತೈದು ವರ್ಷಗಳ ನಂತರ ಅಂದಿನ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ವಿಶೇಷ ಎಂದರೆ ಈ ಸಿನಿಮಾದಲ್ಲಿ ನಾಯಕಿಯಾಗಿ ಕರಿಷ್ಮಾ ನಿರ್ದೇಶಕರ ಮೊದಲ ಆಯ್ಕೆ ಆಗಿರಲಿಲ್ಲ. ಮೊದಲು ಈ ಸಿನಿಮಾಕ್ಕಾಗಿ ಐಶ್ವರ್ಯ ರೈ, ಜೂಹಿ ಚಾವ್ಲಾ ಹಾಗೂ ಪೂಜಾ ಭಟ್ ಅವರಿಗೆ ನಾಯಕಿಯ ಆಫರ್ ನೀಡಲಾಗಿತ್ತು. ಆದರೆ ವೈಯಕ್ತಿಕ ಕಾರಣಗಳಿಂದ ಈ ನಟಿಯರು ಈ ಸಿನಿಮಾ ಒಪ್ಪದೇ ಹೋದಾಗ ಅವಕಾಶ ಕರಿಷ್ಮಾ ಗೆ ಒಲಿದು ಬಂತು. ಆಕೆಯ ವೃತ್ತಿ ಜೀವನದಲ್ಲಿ ಒಂದು ಮೈಲಿಗಲ್ಲು ಆಯಿತು.

LEAVE A REPLY

Please enter your comment!
Please enter your name here