ಸಿನಿಮಾಕ್ಕೆ ಎಂಟ್ರಿ ಕೊಡೋ ಮೊದ್ಲೇ ವಿಜಯ್ ನಟಿಸಿದ್ದ ಸೀರಿಯಲ್ ಯಾವುದು ಗೊತ್ತಾ? ವೈರಲ್ ಆಗ್ತಿದೆ ಹಳೇ ವೀಡಿಯೋ

Written by Soma Shekar

Published on:

---Join Our Channel---

ಅರ್ಜುನ್ ರೆಡ್ಡಿ ಸಿನಿಮಾದ ಮೂಲಕ ಯುವ ಜನತೆಯಲ್ಲಿ ದೊಡ್ಡ ಕ್ರೇಜ್ ಅನ್ನು ಪಡೆದುಕೊಂಡರು ಯುವ ನಟ ವಿಜಯ ದೇವರಕೊಂಡ. ಇಂದು ತೆಲುಗು ಸಿನಿಮಾ ರಂಗದಲ್ಲಿ ಸ್ಟಾರ್ ನಟರ ಸಾಲಿನಲ್ಲಿ ಇದ್ದಾರೆ ವಿಜಯ ದೇವರಕೊಂಡ. ಅರ್ಜುನ್ ರೆಡ್ಡಿ ನಂತರ ಗೀತಾ ಗೋವಿಂದಂ, ಡಿಯರ್ ಕಾಮ್ರೇಡ್ ಸಿನಿಮಾಗಳ ಭರ್ಜರಿ ಯಶಸ್ಸು ವಿಜಯ್ ದೇವರಕೊಂಡ ಜನಪ್ರಿಯತೆ ದುಪ್ಪಟ್ಟು ಆಯಿತು. ಈ ಸಿನಿಮಾಗಳ ನಂತರ ಅಭಿಮಾನಿಗಳು ಈ ನಟನನ್ನು ರೌಡಿ ಹೀರೋ ಎಂದೇ ಕರೆಯಲು ಆರಂಭಿಸಿದರು. ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಲು ಹೊರಟಿರುವ ನಟ ವಿಜಯ ದೇವರಕೊಂಡ ಅಭಿನಯದ ಲೈಗರ್ ಸಿನಿಮಾ ಇಂದು ಬಿಡುಗಡೆ ಆಗಿದೆ.

ನಿರ್ದೇಶಕ ಪೂರಿ ಜಗನ್ನಾಥ್ ನಿರ್ದಶನದಲ್ಲಿ ಮೂಡಿ ಬಂದಿರುವ ಲೈಗರ್ ದೊಡ್ಡ ಮಟ್ಟದಲ್ಲಿ ನಿರೀಕ್ಷೆಗಳನ್ನು ಹುಟ್ಟುಹಾಕಿದ್ದು, ಅಭಿಮಾನಿಗಳಿಗೆ ಇಂದು ಸಿನಿಮಾ ಸಂಭ್ರಮದ ಬಿಡುಗಡೆ ಖುಷಿಯನ್ನು ನೀಡಿದೆ. ಬಾಲಿವುಡ್ ಚೆಲುವೆ ಅನನ್ಯಾ ಪಾಂಡೆ, ನಟಿ ರಮ್ಯಕೃಷ್ಣ, ಮೈಕ್ ಟೈಸನ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲು ವಿಜಯ ದೇವರಕೊಂಡ ಸಜ್ಜಾಗಿರವಾಗಲೇ , ಈ ನಟ ಬಾಲನಟನಾಗಿ ಕಾಣಿಸಿಕೊಂಡಿದ್ದ ಸೀರಿಯಲ್ ಒಂದರ ದೃಶ್ಯ ಈಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ವಿಜಯ ದೇವರಕೊಂಡ ನಟನಾಗಿ ಬೆಳ್ಳಿ ತೆರೆಗೆ ಎಂಟ್ರಿ ನೀಡುವ ಮೊದಲೇ ಬಾಲ ನಟನಾಗಿ ಮಿಂಚಿದ್ದರು. ಬಾಲನಟನಾಗಿ ತನ್ನ ಕೆರಿಯರ್ ಆರಂಭ ಮಾಡಿ ಪ್ರೇಕ್ಷಕರನ್ನು ಮೆಚ್ಚಿಸಿದ್ದರು ವಿಜಯ ದೇವರಕೊಂಡ. ಇದಕ್ಕೆ ಸಂಬಂಧಿಸಿದ ವೀಡಿಯೋ ತುಣುಕು ಈಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ ಸಖತ್ ಸದ್ದನ್ನು ಮಾಡುತ್ತಿದೆ. ವಿಜಯ ದೇವರಕೊಂಡ ತನ್ನ ಶಾಲಾ ಶಿಕ್ಷಣವನ್ನು ಪುಟ್ಟಪರ್ತಿಯ ಸತ್ಯ ಸಾಯಿ ಹೈಯ್ಯರ್ ಸೆಕೆಂಡರಿ ಸ್ಕೂಲ್ ನಲ್ಲಿ ಮುಗಿಸಿದರು. ಅಲ್ಲಿ ಓದುವ ದಿನಗಳಲ್ಲೇ ನಿರ್ಮಾಣವಾದ, ಸತ್ಯ ಸಾಯಿ ಬಾಬಾ ಜೀವನ ಚರಿತ್ರೆಯನ್ನು ವಿವರಿಸುವ ಸೀರಿಯಲ್ ನಲ್ಲಿ ವಿಜಯ್ ಬಾಲನಟನಾಗಿ ಕಾಣಿಸಿಕೊಂಡಿದ್ದರು.

ಈ ವೀಡಿಯೋವನ್ನು ಸ್ವತಃ ವಿಜಯ ದೇವರಕೊಂಡ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಅದರ ಜೊತೆಗೆ ಕೆಲವು ಸಾಲುಗಳನ್ನು ಸಹಾ ಬರೆದುಕೊಂಡಿದ್ದಾರೆ. ನಟ, ನನ್ನ ಬಾಲ್ಯದ ಟ್ರೆಂಡ್‌ಗಳು, ಎಷ್ಟರಮಟ್ಟಿಗೆ ಚಿಕ್ಕ ಹುಡುಗ ಸಹ ಸ್ಟಾರ್ ,ನಾನು ಅದನ್ನು ಲೂಪ್‌ನಲ್ಲಿ ನೋಡುತ್ತಿದ್ದೇನೆ. ಈ ವೀಡಿಯೋ ಕಂಡು ಕೊಂಡವರು, ನೀವು ನನ್ನ ಅಮ್ಮನ ದಿನವನ್ನು, ನನ್ನ ದಿನವನ್ನು ಮತ್ತು ಇನ್ನೂ ಅನೇಕರ ದಿನವನ್ನು ಖುಷಿಯಿಂದ ತುಂಬಿರುವಿರಿ ಎಂದು ಬರೆದುಕೊಂಡು ಖುಷಿಯನ್ನು ಹಂಚಿಕೊಂಡಿದ್ದಾರೆ.

Leave a Comment